Raw milk for face: ಕೇವಲ 2 ಚಮಚ ಹಸಿ ಹಾಲು ಸಾಕು, ನಿಮ್ಮ ಮುಖ ಪಳಪಳ ಹೊಳೆಯುತ್ತೆ!

Raw milk for face: ಕೇವಲ 2 ಚಮಚ ಹಸಿ ಹಾಲು ಸಾಕು, ನಿಮ್ಮ ಮುಖ ಪಳಪಳ ಹೊಳೆಯುತ್ತೆ!



Raw milk for face: ಕೇವಲ 2 ಚಮಚ ಹಸಿ ಹಾಲು ಸಾಕು, ನಿಮ್ಮ ಮುಖ ಪಳಪಳ ಹೊಳೆಯುತ್ತೆ!
<p><strong>Raw milk for face: </strong>ಹೊಳೆಯೋ ಮುಖ ಬೇಕು ಅನ್ನೋದು ಎಲ್ಲರ ಆಸೆ. ಅದಕ್ಕಾಗಿ ದುಬಾರಿ ಕ್ರೀಮ್, ಪಾರ್ಲರ್ ಅಂತ ದುಡ್ಡು ಸುರೀತಾರೆ. ಆದ್ರೆ ಮನೆಯಲ್ಲೇ ಸಿಂಪಲ್ ಆಗಿ ಸಿಗೋ ಒಂದೇ ಒಂದು ಪದಾರ್ಥದಿಂದ ಮುಖದ ಕಾಂತಿಯನ್ನು ಹೆಚ್ಚಿಸಬಹುದು ಗೊತ್ತಾ?. &nbsp; &nbsp;</p><img><p>ಸಣ್ಣಪುಟ್ಟ ಟಿಪ್ಸ್ ಬಳಸಿ ಮುಖದ ಸೌಂದರ್ಯವನ್ನು ಹೆಚ್ಚಿಸಬಹುದು. ಆದರೆ ಹೆಚ್ಚಿನವರು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಯಾವಾಗಲೂ ಇನ್‌ಸ್ಟಂಟ್ ಗ್ಲೋ, ಪಾರ್ಲರ್‌ಗಳು, ದುಬಾರಿ ಉತ್ಪನ್ನಗಳ ಹಿಂದೆ ಹೋಗುತ್ತಾರೆ. ಇದರಿಂದ ಇರುವ ಸೌಂದರ್ಯವನ್ನೂ ಹಾಳುಮಾಡಿಕೊಳ್ಳುತ್ತಾರೆ. ಕಲೆ, ಟ್ಯಾನಿಂಗ್ ಹೋಗಲಾಡಿಸಲು ದುಬಾರಿ ಕ್ರೀಮ್‌ಗಳೇ ಬೇಕಿಲ್ಲ. ಹಸಿ ಹಾಲಿನಿಂದಲೇ ಹೊಳೆಯುವ ಚರ್ಮವನ್ನು ಪಡೆಯಬಹುದು. ಹಸಿ ಹಾಲನ್ನು ಬಹಳ ಹಿಂದಿನಿಂದಲೂ ಚರ್ಮದ ಆರೈಕೆಯಲ್ಲಿ ಬಳಸಲಾಗುತ್ತಿದೆ. ಇದು ನೈಸರ್ಗಿಕವಾದ್ದರಿಂದ ಎಲ್ಲಾ ರೀತಿಯ ಚರ್ಮಕ್ಕೂ ಸರಿಹೊಂದುತ್ತದೆ. &nbsp;</p><img>ಹಸಿ ಹಾಲಿನಲ್ಲಿ ಚರ್ಮದ ಆರೋಗ್ಯಕ್ಕೆ ಬೇಕಾದ ಅನೇಕ ಪೋಷಕಾಂಶಗಳಿವೆ. ಇದರಲ್ಲಿರುವ ಲ್ಯಾಕ್ಟಿಕ್ ಆಸಿಡ್, ಚರ್ಮದ ಮೇಲಿರುವ ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರಿಂದ ಚರ್ಮ ಫ್ರೆಶ್ ಆಗಿ, ಮೃದುವಾಗಿ ಕಾಣಿಸುತ್ತದೆ. ಹಾಲಿನಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಚರ್ಮಕ್ಕೆ ಹಾನಿ ಮಾಡುವ ಫ್ರೀ ರಾಡಿಕಲ್‌ಗಳ ವಿರುದ್ಧ ಹೋರಾಡಿ ಚರ್ಮವನ್ನು ರಕ್ಷಿಸುತ್ತವೆ. ಇದರಲ್ಲಿರುವ ವಿಟಮಿನ್ ಎ ಚರ್ಮವನ್ನು ತೇವಾಂಶದಿಂದಿರಿಸಿ ಮುಖದ ಕಾಂತಿಯನ್ನು ಸುಧಾರಿಸುತ್ತದೆ. ಹಾಲಿನಲ್ಲಿರುವ ಪ್ರೊಟೀನ್‌ಗಳು ಚರ್ಮವನ್ನು ದೃಢವಾಗಿ ಮತ್ತು ಯೌವನವಾಗಿಡಲು ಸಹಕಾರಿ.<img>ನಿಮ್ಮ ಮುಖ ಹೆಚ್ಚು ಒಣಗಿದ್ದರೆ ಮತ್ತು ಕಳೆಗುಂದಿದಂತೆ ಕಂಡರೆ, ಹಸಿ ಹಾಲು ಉತ್ತಮ ಪರಿಹಾರ. ಹಸಿ ಹಾಲನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮಕ್ಕೆ ತೇವಾಂಶ ಸಿಗುತ್ತದೆ. ಇದರಿಂದ ಚರ್ಮ ಮೃದುವಾಗುತ್ತದೆ. ಅಷ್ಟೇ ಅಲ್ಲ, ಹಾಲಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ಚರ್ಮದ ಮೇಲಿನ ಸತ್ತ ಜೀವಕೋಶಗಳನ್ನು ತೆಗೆದು ಮುಖವನ್ನು ಹೊಳೆಯುವಂತೆ ಮಾಡುತ್ತದೆ. ಇದು ಚರ್ಮದ ಮೇಲಿನ ಟ್ಯಾನಿಂಗ್ ಮತ್ತು ಕಲೆಗಳನ್ನು ಕಡಿಮೆ ಮಾಡಲು ಸಹಕಾರಿ. ಜೊತೆಗೆ, ಚರ್ಮದಲ್ಲಿನ ಸಣ್ಣಪುಟ್ಟ ಊತವನ್ನು ಕಡಿಮೆ ಮಾಡಿ ಮುಖಕ್ಕೆ ಫ್ರೆಶ್ ಲುಕ್ ನೀಡುತ್ತದೆ. ಹಸಿ ಹಾಲಿನಲ್ಲಿರುವ ವಿಟಮಿನ್ ಎ ವಯಸ್ಸಾಗುವಿಕೆಯ ಲಕ್ಷಣಗಳನ್ನು ಕಡಿಮೆ ಮಾಡಲು ಕೂಡ ಸಹಾಯ ಮಾಡುತ್ತದೆ.<img>ಮೊದಲು ನಿಮ್ಮ ಮುಖವನ್ನು ಚೆನ್ನಾಗಿ ತೊಳೆಯಿರಿ. ನಂತರ, ಎರಡು ಟೀ ಚಮಚ ಹಸಿ ಹಾಲನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸುಮಾರು 15 ನಿಮಿಷಗಳ ಕಾಲ ಬಿಡಿ. ನಂತರ ಉಗುರುಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆದರೆ ಚರ್ಮ ತಾಜಾ ಮತ್ತು ಮೃದುವಾಗಿ ಕಾಣಿಸುತ್ತದೆ. ವಾರದಲ್ಲಿ ಎರಡು ಅಥವಾ ಮೂರು ಬಾರಿ ಹೀಗೆ ಮಾಡಿದರೆ, ನಿಮ್ಮ ಮುಖ ನೈಸರ್ಗಿಕವಾಗಿ ಹೊಳೆಯುತ್ತದೆ.



Source link

Leave a Reply

Your email address will not be published. Required fields are marked *