
ಅಡಿವಿ ಶೇಷ್ (ಅಡಿವಿ ಶೇಶ್) ನಟನೆಯ ‘ಡಕೈತ್’ (ಡಕಾಯಿಟ್) ಸಿನಿಮಾ ಇದೇ ವಾರ ಬಿಡುಗಡೆ ಆಗಲಿದೆ. ಈ ಮೊದಲು ಈ ಸಿನಿಮಾ ‘ಟಾಕ್ಸಿಕ್’ ಎದುರು ಬಿಡುಗಡೆಗೆ ಸಜ್ಜಾಗಿತ್ತು. ಆದರೆ ಸಿನಿಮಾ ಬಿಡುಗಡೆಗೆ ಈಗ ನಾಳೆ ಅಂದರೆ ಏಪ್ರಿಲ್ 10ಕ್ಕೆ ತೆರೆಗೆ ಬರಲಿದೆ. ಈ ಸಿನಿಮಾದ ಮೊದಲ ಪ್ರೋಮೋ ಬಿಡುಗಡೆ ಆದಾಗ ಸಿನಿಮಾ ನಾಯಕಿ ಆಗಿದ್ದು ಶ್ರುತಿ ಹಾಸನ್. ಅವರು ನಟಿಸಿದ್ದ ಪ್ರೋಮೋ ಸಹ ಒಂದು ಬಿಡುಗಡೆಯಾಗಿದೆ. ಆದರೆ ಅದಾದ ಕೆಲ ತಿಂಗಳ ಬಳಿಕ ಶ್ರುತಿ ಹಾಸನ್, ‘ಡಕೈತ್’ ಸಿನಿಮಾದಿಂದ ಹೊರ ನಡೆದರು. ಅವರ ಸ್ಥಾನಕ್ಕೆ ಮೃಣಾಲ್ ಠಾಕೂರ್ ಬಂದರು.
ಶ್ರುತಿ ಹಾಸನ್ ಅವರು ಹಲವು ದಿನಗಳ ಕಾಲ ಸಿನಿಮಾಕ್ಕಾಗಿ ಚಿತ್ರೀಕರಣ ಸಹ ನಡೆಸಿದ್ದರು. ಪ್ರೋಮೋ ನಲ್ಲಿ ಅವರ ಪಾತ್ರ ಚೆನ್ನಾಗಿತ್ತು. ಪಾತ್ರಕ್ಕೆ ಚೆನ್ನಾಗಿ ಸೂಟ್ ಆಗುತ್ತಾರೆ. ಅನುಭವಿ ನಟಿ ಸಹ ಆಗಿದ್ದ ಅವರನ್ನು ಚಿತ್ರತಂಡವೇ ಕೈಬಿಟ್ಟಿತು. ಅವರ ಜಾಗಕ್ಕೆ ಮೃಣಾಲ್ ಠಾಕೂರ್ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಯ್ತು. ಆದರೆ ಇದಕ್ಕೆ ಕಾರಣವೇನು ಎಂದು ಚಿತ್ರತಂಡದವರು ವಿವರಿಸಲಿಲ್ಲ. ಆದರೆ ಇದೀಗ ಸಿನಿಮಾದ ನಾಯಕ ಮತ್ತು ಕತೆ ಬರೆದಿರುವ ಅಡಿವಿ ಶೇಷ್ ಅವರು ಈ ಬಗ್ಗೆ ಮಾತನಾಡಿದ್ದಾರೆ.
ತೆಲುಗಿನ ನಿರೂಪಕಿ ಸುಮಾ ಅವರೊಟ್ಟಿಗಿನ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅಡಿವಿ ಶೇಷ್, ‘ಶ್ರುತಿ ಹಾಸನ್ ಆರಂಭದಲ್ಲಿ ಸಿನಿಮಾನಲ್ಲಿದ್ದರು, ಹಲವು ದಿನಗಳ ಕಾಲಖ್ಯಾತ ಚಿತ್ರಗಳು ಸಹ ಮಾಡಿದ್ದವು. ಆದರೆ ನಮ್ಮ ಕೆಲಸ ಮಾಡುವ ವಿಧಾನ ಬೇರೆ ರೀತಿ, ನಾವು ನಾಲ್ಕೈದು ಶಾಟ್ ತೆಗೆದ ಮೇಲೆಯೂ ಇದನ್ನು ಭಿನ್ನವಾಗಿ ತೆಗೆಯಬಹುದಾ ಎಂದು ಯೋಚಿಸುತ್ತೀವಿ, ನಾವು ಸಿನಿಮಾ ತೆಗೆಯಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತೀವಿ, ಇದು ಕೆಲವರಿಗೆ ಕಿರಿ-ಕಿರಿ ಎನಿಸಬಹುದು’.
ಇದನ್ನೂ ಓದಿ:ರಾಷ್ಟ್ರೀಯ ಸಿನಿಮಾ ಅಕಾಡೆಮಿ ಪ್ರಶಸ್ತಿ ಘೋಷಣೆ: ಯಾರಿಗೆಲ್ಲ ಸಿಕ್ಕಿತು ಅವಾರ್ಡ್
‘ನಮ್ಮ ಮೊದಲ ಸಿನಿಮಾ ‘ಕ್ಷಣ-ಕ್ಷಣ’ನಿಂದಲೂ ನಮ್ಮ ತಂಡ ಹೀಗೆಯೇ ಕೆಲಸ ಮಾಡುತ್ತಿದೆ. ನಾವೆಲ್ಲ ಈ ರೀತಿಯ ಕೆಲಸದ ಪ್ರಾಸೆಸ್‌ಗೆ ಒಗ್ಗಿ ಹೋಗಿದ್ದೇವೆ ಆದರೆ ಶ್ರುತಿ ಅವರಿಗೆ ಒಗ್ಗಿಕೊಳ್ಳಲಾಗಲಿಲ್ಲ. ಆದ್ದರಿಂದ ಅವರನ್ನು ನಾವು ಕಳಿಸಿಕೊಡಬೇಕಾಯ್ತು. ನಾವು ಸೌಹಾರ್ದಯುತವಾಗಿಯೇ ಬೇರಾದೆವು, ಆ ಸ್ಥಾನಕ್ಕೆ ಮೃಣಾಲ್ ಠಾಕೂರ್ ಅವರನ್ನು ಕರೆದುಕೊಂಡೆವು’ ಎಂದು ಅಡಿವಿ ಶೇಷ್.
‘ಡಕೈತ್’ ಸಿನಿಮಾದಲ್ಲಿ ಅಡಿವಿ ಶೇಷ್, ಮೃಣಾಲ್ ಠಾಕೂರ್ ಜೊತೆಗೆ ವಿಲನ್ ಆಗಿ ಅನುರಾಗ್ ಕಶ್ಯಪ್ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಶನಿಲ್, ನಿರ್ಮಾಣ ಮಾಡಿರುವುದು ಸುಪ್ರಿಯಾ ಯರ್ಲಗಡ್ಡ, ಕತೆ ಅಡವಿ ಶೇಷ್ ಅವರದ್ದು. ಸಂಗೀತ ನೀಡಿರುವುದು ಭೀಮ್ಸ್. ಸಿನಿಮಾ ಏಪ್ರಿಲ್ 10ಕ್ಕೆ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ