Sonam Pandit: ಯಾರು ಈ ಸೋನಂ ಪಂಡಿತ್? ಮಹಾಶಿವರಾತ್ರಿಗೂ ಮುನ್ನ ಗೂಗಲ್‌ನಲ್ಲಿ ಟ್ರೆಂಡ್ ಆಗಿದ್ದೇಕೆ?

Sonam Pandit: ಯಾರು ಈ ಸೋನಂ ಪಂಡಿತ್? ಮಹಾಶಿವರಾತ್ರಿಗೂ ಮುನ್ನ ಗೂಗಲ್‌ನಲ್ಲಿ ಟ್ರೆಂಡ್ ಆಗಿದ್ದೇಕೆ?



Sonam Pandit: ಯಾರು ಈ ಸೋನಂ ಪಂಡಿತ್? ಮಹಾಶಿವರಾತ್ರಿಗೂ ಮುನ್ನ ಗೂಗಲ್‌ನಲ್ಲಿ ಟ್ರೆಂಡ್ ಆಗಿದ್ದೇಕೆ?
<p>Who is Sonam Pandit? ಟಿವಿ ಶೋಗಳು ಮತ್ತು ಸೋಶಿಯಲ್ ಮೀಡಿಯಾ ಮೂಲಕ ಈಗಾಗಲೇ ಸಾಕಷ್ಟು ಜನಪ್ರಿಯತೆ ಗಳಿಸಿದ್ದರೂ, ಇತ್ತೀಚೆಗೆ ಅವರು ಹಂಚಿಕೊಂಡ ಒಂದು ಭಕ್ತಿಪ್ರಧಾನ ವಿಡಿಯೋ ಅವರನ್ನು ಮತ್ತೆ ಭಾರಿ ಸುದ್ದಿಯಲ್ಲಿದ್ದಾರೆ.</p><img><p>ಸೋನಂ ಪಂಡಿತ್ ಮುಂಬೈ ಮೂಲದ ನಟಿ, ಡಿಜಿಟಲ್ ಡೆವಲಪರ್ ಮತ್ತು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್. Entertainment Beauty,Lifestyle ಕಾಂಟೆಂಟ್ ಜೊತೆಗೆ Cultural Stories ಡಿಜಿಟಲ್ ವೇದಿಕೆಗಳಲ್ಲಿ ಹಂಚಿಕೊಳ್ಳುವ ಮೂಲಕ ಇವರು ಹೆಸರುವಾಸಿಯಾಗಿದ್ದಾರೆ. ಟಿವಿ ಶೋಗಳು ಮತ್ತು ಸೋಶಿಯಲ್ ಮೀಡಿಯಾದಿಂದ ಈಗಾಗಲೇ ಜನಪ್ರಿಯರಾಗಿದ್ದರೂ, ಇತ್ತೀಚಿನ ಭಕ್ತಿಪ್ರಧಾನ ವಿಡಿಯೋ ಅವರನ್ನು ಮತ್ತೆ ಮುನ್ನೆಲೆಗೆ ತಂದಿದೆ.</p><img><p>ಸೋನಂ ಪಂಡಿತ್ ಒಬ್ಬಳು ನಟಿ ಮತ್ತು ಡಿಜಿಟಲ್ ಕಲಾವಿದೆ. ಇವರು ಟಿವಿ ಮತ್ತು ಆನ್‌ಲೈನ್‌ಗಾಗಿ ಕಂಟೆಂಟ್ ರಚಿಸುತ್ತಾರೆ. ‘ಮೇರೆ ಸಾಯಿ’ ಮತ್ತು ‘ಸಾವಧಾನ್ ಇಂಡಿಯಾ’ ದಂತಹ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿ, ತಮ್ಮ ನಟನಾ ವೃತ್ತಿಜೀವನವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.</p><img>ನಟನೆಯ ಹೊರತಾಗಿ, ಸೋನಂ ಪಂಡಿತ್ ಒಬ್ಬ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕೂಡ ಹೌದು. ಇವರು ಇನ್‌ಸ್ಟಾಗ್ರಾಮ್ ಮತ್ತು ಇತರ ವೇದಿಕೆಗಳಲ್ಲಿ ಸೌಂದರ್ಯ, ಫ್ಯಾಷನ್, ಜೀವನಶೈಲಿ ಮತ್ತು ಭಕ್ತಿಗೆ ಸಂಬಂಧಿಸಿದ ಕಂಟೆಂಟ್ ಹಂಚಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಇವರು ನುರಿತ ಮೇಕಪ್ ಕಲಾವಿದೆಯಾಗಿದ್ದು, ತಮ್ಮದೇ ಆದ ಬ್ಯೂಟಿ ಬ್ಯುಸಿನೆಸ್ ನಡೆಸುತ್ತಿದ್ದಾರೆ.<img>ಸೋನಂ ಪಂಡಿತ್ ರಾಂಚಿಯಲ್ಲಿ ಜನಿಸಿ, ದೆಹಲಿಯಲ್ಲಿ ಬೆಳೆದರು. ನಂತರ ಮನರಂಜನಾ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಮುಂಬೈಗೆ ತೆರಳಿದರು.<img>ಸೋನಂ ಪಂಡಿತ್ ಆರಂಭದಲ್ಲಿ ಶಾರ್ಟ್-ಫಾರ್ಮ್ ವಿಡಿಯೋ ಕಂಟೆಂಟ್, ವಿಶೇಷವಾಗಿ ಲಿಪ್-ಸಿಂಕ್ ಮತ್ತು ಕ್ರಿಯೇಟಿವ್ ರೀಲ್ಸ್‌ಗಳ ಮೂಲಕ ಗಮನ ಸೆಳೆದರು. ಭಾರತದಲ್ಲಿ ಪ್ಲಾಟ್‌ಫಾರ್ಮ್ ಬದಲಾವಣೆಗಳ ನಂತರ, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ಗೆ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿದರು. ಇಂದು, ಸೃಜನಶೀಲತೆಯನ್ನು ಸಾಂಸ್ಕೃತಿಕ ನಿರೂಪಣೆಯೊಂದಿಗೆ ಬೆಸೆಯುವ ಡಿಜಿಟಲ್ ವ್ಯಕ್ತಿತ್ವವಾಗಿ ಅವರು ಗುರುತಿಸಿಕೊಂಡಿದ್ದಾರೆ.<img>ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಸೋನಂ ಪಂಡಿತ್ ಒಂದು ಭಕ್ತಿಪ್ರಧಾನ ವಿಡಿಯೋವನ್ನು ಬಿಡುಗಡೆ ಮಾಡಿದ ನಂತರ ಭಾರಿ ಜನಪ್ರಿಯತೆ ಗಳಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೇಗವಾಗಿ ವೈರಲ್ ಆಗಿ, ವ್ಯಾಪಕ ಸಾರ್ವಜನಿಕ ಗಮನವನ್ನು ಸೆಳೆಯಿತು. ಅವರು ಹಂಚಿಕೊಂಡ ಶಿವನಿಗೆ ಅರ್ಪಿತವಾದ ಇನ್‌ಸ್ಟಾಗ್ರಾಮ್ ಕ್ಲಿಪ್, ಸಾಂಪ್ರದಾಯಿಕ ದೃಶ್ಯಗಳು ಮತ್ತು ಆಧ್ಯಾತ್ಮಿಕ ಸಂಗೀತವನ್ನು ಒಳಗೊಂಡಿತ್ತು.<img>ವರದಿಗಳ ಪ್ರಕಾರ, ಈ ವಿಡಿಯೋ ಅತಿ ಕಡಿಮೆ ಸಮಯದಲ್ಲಿ ಮಿಲಿಯನ್‌ಗಟ್ಟಲೆ ವೀಕ್ಷಣೆಗಳನ್ನು ಗಳಿಸಿತು. ಆಧುನಿಕ ದೃಶ್ಯ ಶೈಲಿಯೊಂದಿಗೆ ಸಾಂಸ್ಕೃತಿಕ ಸಂಕೇತಗಳನ್ನು ಬೆರೆಸಿದ ಈ ವಿಡಿಯೋ ಯುವ ವೀಕ್ಷಕರನ್ನು ಹೆಚ್ಚು ಆಕರ್ಷಿಸಿತು. ಮಹಾಶಿವರಾತ್ರಿಗೆ ಕೆಲವೇ ದಿನಗಳ ಮೊದಲು ವಿಡಿಯೋ ಬಿಡುಗಡೆಯಾಗಿದ್ದು, ಅದರ ರೀಚ್ ಹೆಚ್ಚಲು ಕಾರಣವಾಯಿತು. ಅಭಿಮಾನಿಗಳು ಈ ಸೃಜನಾತ್ಮಕ ಪ್ರಸ್ತುತಿ ಮತ್ತು ಆಧ್ಯಾತ್ಮಿಕ ಸಂದೇಶವನ್ನು ಶ್ಲಾಘಿಸಿದರು. ಇದೇ ಕಾರಣಕ್ಕೆ ವಿಡಿಯೋ ಟ್ರೆಂಡ್ ಆಗಿ, ಸೋನಂ ಬಗ್ಗೆ ಆನ್‌ಲೈನ್ ಹುಡುಕಾಟ ಹೆಚ್ಚಾಯಿತು.



Source link

Leave a Reply

Your email address will not be published. Required fields are marked *