Side effects of extra salt on food: ಅಡುಗೆಯಲ್ಲಿ ಉಪ್ಪು ಕಡಿಮೆಯಾದ್ರೆ ಮೇಲೆ ಉಪ್ಪು ಹಾಕಿ ತಿನ್ನುವುದು ನಮಗೆ ಸಾಮಾನ್ಯ ಎನಿಸಬಹುದು. ಆದರೆ ಈ ಸಣ್ಣ ಅಭ್ಯಾಸವು ಸೈಲೆಂಟ್ ಕಿಲ್ಲರ್ ಇದ್ದಂತೆ!

ಅಡುಗೆಯಲ್ಲಿ ಉಪ್ಪು ಕಡಿಮೆಯಾದಾಗ ಊಟ ಮಾಡುವಾಗ ಮೇಲೆ ಉಪ್ಪು ಉದುರಿಸಿಕೊಂಡು ತಿನ್ನುವುದು ಅನೇಕರ ಅಭ್ಯಾಸ. ಇನ್ನು ಕೆಲವರಿಗೆ ಮೇಲೆ ಉಪ್ಪು ಹಾಕಿಕೊಂಡರೆ ಮಾತ್ರ ಊಟ ತೃಪ್ತಿ ಎನಿಸುತ್ತದೆ. ವಿಶೇಷವಾಗಿ ಸಲಾಡ್ಗಳು, ಹಣ್ಣುಗಳು ಅಥವಾ ಪಲ್ಯಗಳಲ್ಲಿ ಉಪ್ಪು ಕಡಿಮೆಯಾದಾಗ ಪ್ರತ್ಯೇಕವಾಗಿ ಉಪ್ಪು ಸೇರಿಸಿಕೊಳ್ಳುತ್ತೇವೆ. ಆದರೆ, ಈ ಅಭ್ಯಾಸ ಒಳ್ಳೆಯದೇ? ಆಹಾರದ ಮೇಲೆ ಹಸಿ ಉಪ್ಪನ್ನು (Raw Salt) ಹಾಕಿ ತಿನ್ನುವುದರಿಂದ ಉಂಟಾಗುವ ಆರೋಗ್ಯದ ಹಾನಿಗಳ ಬಗ್ಗೆ ತಿಳಿದರೆ ಜೀವನದಲ್ಲಿ ಮತ್ತೊಮ್ಮೆ ಆ ತಪ್ಪು ಮಾಡುವುದಿಲ್ಲ. ಈ ಅಭ್ಯಾಸ ನಿಮ್ಮ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂಬುದು ಇಲ್ಲಿ ತಿಳಿಯಿರಿ.

ಆಹಾರವನ್ನು ಬೇಯಿಸುವಾಗ ಉಪ್ಪು ಹಾಕಿದರೆ, ಶಾಖದ ಕಾರಣದಿಂದಾಗಿ ಅದರೊಳಗಿನ ಸೋಡಿಯಂ ಪರಮಾಣುಗಳ ರಚನೆಯು ಸ್ವಲ್ಪ ಬದಲಾಗುತ್ತದೆ. ಇದು ದೇಹದ ಮೇಲೆ ಅಷ್ಟಾಗಿ ನಕಾರಾತ್ಮಕ ಪರಿಣಾಮ ಬೀರದು. ಆದರೆ, ಮೇಲೆ ಹಾಕಿಕೊಳ್ಳುವ ಹಸಿ ಉಪ್ಪು ನೇರವಾಗಿ ರಕ್ತಕ್ಕೆ ಸೇರುತ್ತದೆ. ಇದರಿಂದ ರಕ್ತನಾಳಗಳ ಮೇಲೆ ಒತ್ತಡ ಹೆಚ್ಚಾಗಿ ತೀವ್ರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ಆಹಾರದ ಮೇಲೆ ನೇರವಾಗಿ ಉಪ್ಪು ಹಾಕಿಕೊಳ್ಳುವುದರಿಂದ ರಕ್ತದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗಿ ರಕ್ತದೊತ್ತಡ ಏರುತ್ತದೆ. ಇದು ಹೃದಯಾಘಾತ (Heart Attack) ಮತ್ತು ಪಾರ್ಶ್ವವಾಯು (Stroke) ಅಪಾಯವನ್ನು ಹೆಚ್ಚಿಸುತ್ತದೆ. ಒಂದು ವೇಳೆ ನೀವು ಈಗಾಗಲೇ ಬಿಪಿ ಅಥವಾ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರೆ, ದಿನಕ್ಕೆ ಎಷ್ಟು ಉಪ್ಪು ಸೇವಿಸಬೇಕು ಎಂಬುದನ್ನು ವೈದ್ಯರಿಂದ ತಿಳಿದುಕೊಳ್ಳುವುದು ಉತ್ತಮ.

ದೇಹದಲ್ಲಿನ ಹೆಚ್ಚುವರಿ ಸೋಡಿಯಂ ಅನ್ನು ಹೊರಹಾಕಲು ಕಿಡ್ನಿಗಳು ಹೆಚ್ಚು ಶ್ರಮಪಡಬೇಕಾಗುತ್ತದೆ. ಇದರಿಂದ ದೀರ್ಘಕಾಲದವರೆಗೆ ಕಿಡ್ನಿ ಹಾನಿಯಾಗುವ ಸಾಧ್ಯತೆಯಿದೆ. ಅಲ್ಲದೆ, ರಕ್ತದೊತ್ತಡದ ಕಾರಣದಿಂದ ಜೀವಕೋಶಗಳಲ್ಲಿ ಇನ್ಸುಲಿನ್ ಸ್ವೀಕರಿಸುವ ಸಾಮರ್ಥ್ಯ ಕಡಿಮೆಯಾಗಿ, ಅದು ಮಧುಮೇಹಕ್ಕೆ (Diabetes) ಮುಖ್ಯ ಕಾರಣವಾಗಬಹುದು.

ಅತಿ ಹೆಚ್ಚು ಸೋಡಿಯಂ ಸೇವನೆಯಿಂದ ಮೂತ್ರದ ಮೂಲಕ ಕ್ಯಾಲ್ಸಿಯಂ ಅಧಿಕವಾಗಿ ಹೊರಹೋಗುತ್ತದೆ. ಇದರಿಂದ ಮೂಳೆಗಳು ಸವಕಳಿಯಾಗಿ ‘ಆಸ್ಟಿಯೋಪೊರೋಸಿಸ್’ನಂತಹ ಸಮಸ್ಯೆಗಳು ಬರಬಹುದು. ಅಷ್ಟೇ ಅಲ್ಲದೆ ದೇಹದಲ್ಲಿ ಸೋಡಿಯಂ ಹೆಚ್ಚಾದರೆ ನಿದ್ರಾಹೀನತೆ, ನಿಶ್ಯಕ್ತಿ, ಅತಿಯಾದ ಬಾಯಾರಿಕೆ ಮತ್ತು ತಲೆನೋವಿನಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ದೇಹದಲ್ಲಿ ನೀರು ನಿಲ್ಲುವುದರಿಂದ ಕಾಲುಗಳು ಮತ್ತು ಕೈಗಳಲ್ಲಿ ಬಾವು ಕಾಣಿಸಿಕೊಳ್ಳಬಹುದು. ಇದರಿಂದ ಮುಖ, ಹೊಟ್ಟೆ ಮತ್ತು ಇತರ ಭಾಗಗಳು ಉಬ್ಬಿದಂತೆ ಕಾಣುತ್ತವೆ. ಆದ್ದರಿಂದ ಉಪ್ಪಿನ ಪ್ರಮಾಣವನ್ನು ಕ್ರಮೇಣ ಕಡಿಮೆ ಮಾಡಲು ಸೂಚಿಸಲಾಗುತ್ತದೆ.

WHO ಪ್ರಕಾರ, ಒಬ್ಬ ವ್ಯಕ್ತಿಯು ದಿನಕ್ಕೆ 5 ಗ್ರಾಂ (ಒಂದು ಟೀಚಮಚ) ಗಿಂತ ಹೆಚ್ಚು ಉಪ್ಪನ್ನು ಸೇವಿಸಬಾರದು. ಉಪ್ಪಿನ ಬದಲಿಗೆ ರುಚಿಗಾಗಿ ನಿಂಬೆ ರಸ, ಕಾಳುಮೆಣಸಿನ ಪುಡಿ ಅಥವಾ ಇತರ ನೈಸರ್ಗಿಕ ಮಸಾಲೆಗಳನ್ನು ಬಳಸಬಹುದು. ಚಿಪ್ಸ್, ಉಪ್ಪಿನಕಾಯಿ ಮತ್ತು ಪ್ಯಾಕ್ ಮಾಡಿದ ಆಹಾರಗಳಲ್ಲಿ ಸೋಡಿಯಂ ಹೆಚ್ಚಾಗಿರುತ್ತದೆ, ಇವುಗಳನ್ನು ಕಡಿಮೆ ಮಾಡುವುದು ಒಳ್ಳೆಯದು.

Source link
ಊಟ ಮಾಡ್ವಾಗ ಆಹಾರದ ಮೇಲೆ ಉಪ್ಪು ಸಿಂಪಡಿಸ್ತೀರಾ?, ಈ ವಿಷ್ಯ ಗೊತ್ತಾದ್ರೆ ಮತ್ತೆಂದೂ ಆ ತಪ್ಪು ಮಾಡಲ್ಲ!