ಯಶ್ (ಯಶ್) ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತದ ಅತ್ಯಂತ ನಿರೀಕ್ಷೆಯ ಸಿನಿಮಾ ಎನಿಸಿಕೊಂಡಿತ್ತು. ಸಿನಿಮಾದ ಟೀಸರ್, ಪೋಸ್ಟರ್, ಹಾಡುಗಳು ಬಿಡುಗಡೆ ಆಗಿ ಸಿನಿಮಾಕ್ಕೆ ಹೈಪ್ ನೀಡಿದ್ದವು. ಸಿನಿಮಾ ನೋಡಲು ಸಹ ತುದಿಗಾಲಲ್ಲಿ ನೋಡಲು. ಮಾರ್ಚ್ 19 ರಂದು ‘ಟಾಕ್ಸಿಕ್’ ಬಿಡುಗಡೆ ಆಗಲಿತ್ತು, ಸಿನಿಮಾದ ವಿತರಣೆ ಹಕ್ಕುಗಳ ಮಾರಾಟ ಸಹ ಆಗಿಬಿಟ್ಟಿತ್ತು. ಆದರೆ ಇದೀಗ ಹಠಾತ್ತನೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಮುಂದೂಡಿದೆ. ಇದು ಯಶ್ ಅವರ ಅಭಿಮಾನಿಗಳಿಗೆ ಸಿನಿಮಾ ಪ್ರೇಮಿಗಳಿಗೆ ಸಹ ಸಾಕಷ್ಟು ಬೇಸರ ಮೂಡಿಸಿದೆ. ಆದರೆ ಯಶ್ ಹಾಗೂ ಚಿತ್ರತಂಡದ ಈ ನಿರ್ಧಾರದ ಹಿಂದೆ ಮುಖ್ಯವಾದ ಕಾರಣವೂ ಇದೆ.
ಪ್ರಸ್ತುತ ನಡೆಯುತ್ತಿರುವ ಇಸ್ರೇಲ್-ಅಮೆರಿಕ ಮತ್ತು ಇರಾನ್ ದೇಶಗಳ ನಡುವಿನ ಸಂಘರ್ಷದ ಕಾರಣದಿಂದ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಚಿತ್ರತಂಡ ಹೇಳಿದೆ. ಅಲ್ಲೆಲ್ಲೋ ಆಗುತ್ತಿರುವ ಯುದ್ಧಕ್ಕೆ ಭಾರತದಲ್ಲಿ ಸಿನಿಮಾ ಬಿಡುಗಡೆ ಮಾಡದಿರುವುದೇಕೆ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಬ್ಯುಸಿನೆಸ್ ದೃಷ್ಟಿಯಿಂದ ನೋಡಿದಾಗ ಯಶ್ ಮತ್ತು ತಂಡ ಭಾವನೆಗಳನ್ನು ಪಕ್ಕಕ್ಕಿಟ್ಟು ಸೂಕ್ತ ಮತ್ತು ಉದ್ಯಮಸಹಜ ನಿರ್ಣಯ ಕೈಗೊಂಡಿದೆ.
ಇಸ್ರೇಲ್-ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧ ಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಭಾರತೀಯ ಸಿನಿಮಾಗಳಿಗೆ ಉತ್ತಮ ಮಾರುಕಟ್ಟೆ ಆಗಿರುವ ಅರಬ್ ದೇಶಗಳ ಪರಿಸ್ಥಿತಿ ಹದಗೆಟ್ಟಿದೆ. ದುಬೈ, ಅಬುದಾಭಿ, ಶಾರ್ಜಾ, ಅಲ್ ಐನ್,ಯುಎಕ್ಯು ಇನ್ನೂ ಕೆಲವು ನಗರಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಯುಎಇಯಲ್ಲಿ ವಿಷಮ ಪರಿಸ್ಥಿತಿ ಇದ್ದು, ಈ ಸಮಯದಲ್ಲಿ ಅಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಅಸಾಧ್ಯ ಎಂದು ಅಮಾನವೀಯವೂ ಎನಿಸಿಕೊಳ್ಳಲಿದೆ.
ಇದನ್ನೂ ಓದಿ:ಕೊನೇ ಕ್ಷಣದಲ್ಲಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ಯಶ್; ಟಾಕ್ಸಿಕ್ ಸಿನಿಮಾ ರಿಲೀಸ್ ಮುಂದಕ್ಕೆ
YEI ಮಾತ್ರವೇ ಅಲ್ಲದೆ ಭಾರತೀಯ ಸಿನಿಮಾಗಳಿಗೆ ಒಳ್ಳೆಯ ಮಾರುಕಟ್ಟೆ ಆಗಿರುವ ಕುವೈತ್, ಒಮಾನ್ ದೇಶಗಳು ಸಹ ಈ ಯುದ್ಧದ ಪರಿಸ್ಥಿತಿಯಿಂದ ವಿಷಮ ಸ್ಥಿತಿಯಲ್ಲಿದ್ದು, ಅಲ್ಲಿಯೂ ಸಹ ಸಿನಿಮಾ ಬಿಡುಗಡೆ ಅಸಾಧ್ಯವೇ ಆಗಿದೆ. ಕತಾರ್‌ನಲ್ಲಿಯೂ ಇದೇ ಪರಿಸ್ಥಿತಿ ಇದೆ. ಅರಬ್ ರಾಷ್ಟ್ರಗಳು ಮಾತ್ರವೇ ಅಲ್ಲದೆ ಈ ಅಮೆರಿಕದಲ್ಲಿಯೂ ಸಹ ಪರಿಸ್ಥಿತಿ ಶಾಂತವಾಗಿಲ್ಲ. ಅಮೆರಿಕದಲ್ಲಿ ಪರ-ವಿರೋಧ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಇಂಥಹ ಪರಿಸ್ಥಿತಿಯಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಸಿನಿಮಾದ ಕಲೆಕ್ಷನ್ ದೃಷ್ಟಿಯಿಂದ ಒಳಿತಲ್ಲ.
ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವಾದರೂ ಸಹ ನೇರವಾಗಿ, ಪರೋಕ್ಷವಾಗಿ ಹಲವಾರು ದೇಶಗಳು ಪರಿಣಾಮಗಳನ್ನು ಎದುರಿಸುತ್ತಿವೆ. ಭಾರತವೂ ಸೇರಿದಂತೆ ಬಹ್ರೇನ್, ಕತಾರ್, ಸೌದಿ ಅರೇಬಿಯಾ, ಯುಇಐ, ಲೆಬನಾನ್, ಪೂರ್ವ ಮತ್ತು ಆಗ್ನೇಯ ಏಷ್ಯಾದ ದೇಶಗಳಾದ ಚೀನಾ, ಜಪಾನ್ ದಕ್ಷಿಣ ಕೊರಿಯಾ, ಕೊರಿಯಾ, ಇಂಡೋನೇಷಿಯಾ, ಥೈಲ್ಯಾಂಡ್, ಸಿಂಗಪುರ, ವಿಯೆತ್ನಾಮ್ ಮತ್ತು ಯುನಿಯನ್‌ನಲ್ಲಿ ಹಲವಾರು ದೇಶಗಳು ಸಹ ಪರೋಕ್ಷ ಪರಿಣಾಮಗಳನ್ನು ಎದುರಿಸುತ್ತಿವೆ. ‘ಟಾಕ್ಸಿಕ್’ ಸಿನಿಮಾ ಪ್ಯಾನ್ ಇಂಡಿಯಾ ಅಲ್ಲ ಬದಲಾಗಿ ಪ್ಯಾನ್ ವರ್ಲ್ಡ್ ಎಂಬುದು ಯಶ್ ಅವರ ಕನಸಾಗಿದ್ದರೆ, ವಿಶ್ವದ ಹಲವು ದೇಶಗಳು ಆತಂಕದಲ್ಲಿರುವಾಗ ಸಿನಿಮಾ ಬಿಡುಗಡೆ ಮಾಡುವುದು ಸೂಕ್ತವಲ್ಲ ಎಂದು ಚಿತ್ರತಂಡಕ್ಕೆ ಖಂಡಿತವಾಗಿಯೂ ಅನಿಸುತ್ತದೆ.
ಜೊತೆಗೆ ಸಿನಿಮಾದ ಪ್ರಚಾರಕ್ಕಾಗಿ ಯಶ್ ಹಾಗೂ ಚಿತ್ರತಂಡ ಭಾರತದಲ್ಲಿ ಅಮೆರಿಕ, ದುಬೈ, ಮಲೇಷ್ಯಾ, ಜಪಾನ್ ಇನ್ನೂ ಹಲವು ಕಡೆ ಸುತ್ತು ಹಾಕಲಿತ್ತು. ಆದರೆ ಯುದ್ಧದ ಪರಿಸ್ಥಿತಿ ಇರುವ ಕಾರಣ ವೈಮಾನಿಕ ಸಂಚಾರ ವ್ಯವಸ್ಥೆಯೇ ಅಸ್ಥವ್ಯಸ್ಥವಾಗಿದೆ, ಇದು ಸಿನಿಮಾದ ಪ್ರಚಾರದ ಮೇಲೆ ಪರಿಣಾಮ ಬೀರುವುದು ಮಾತ್ರವೇ ಅಲ್ಲದೆ ಯಶ್ ಸೇರಿದಂತೆ ಚಿತ್ರತಂಡದ ಜೀವಕ್ಕೂ ಅಪಾಯವಾಗುವ ಸಾಧ್ಯತೆಯಿದೆ. ಇದೆಲ್ಲವನ್ನೂ ಪರಿಗಣಿಸಿ ಚಿತ್ರತಂಡ ಸಿನಿಮಾದ ಬಿಡುಗಡೆಯನ್ನು ಚಿತ್ರತಂಡ ಮುಂದಕ್ಕೆ ಹಾಕಿಕೊಂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ