ಭಾರತೀಯ ಅಕ್ಕಿ ಮೇಲೆ ಟ್ರಂಪ್ ಕಣ್ಣು; ಟ್ಯಾರಿಫ್ ಹೆಚ್ಚಿಸಿದರೆ ಭಾರತದ ಮೇಲೇನು ಪರಿಣಾಮ?

ಭಾರತೀಯ ಅಕ್ಕಿ ಮೇಲೆ ಟ್ರಂಪ್ ಕಣ್ಣು; ಟ್ಯಾರಿಫ್ ಹೆಚ್ಚಿಸಿದರೆ ಭಾರತದ ಮೇಲೇನು ಪರಿಣಾಮ?


ನವೆಂಬರ್, ಡಿಸೆಂಬರ್ 9: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇದೀಗ ಭಾರತದ ಅಕ್ಕಿ ಮೇಲೆ ಕಣ್ಣಿಟ್ಟಿದ್ದಾರೆ. ಅಮೆರಿಕದಲ್ಲಿ ಭಾರತದ ಅಕ್ಕಿಯನ್ನು ಡಂಪ್ ಮಾಡಲಾಗುತ್ತಿರುವುದು ಸರಿಯಲ್ಲ, ಟ್ಯಾರಿಫ್ ಹಾಕುವುದಾಗಿ ಬೆದರಿಕೆ ಒಡ್ಡಿದೆ. ಭಾರತದ ಹೆಚ್ಚಿನ ಸರಕುಗಳ ಮೇಲೆ ಅಮೆರಿಕ ಶೇ. 50ರಷ್ಟು ಟ್ಯಾರಿಫ್ ಹಾಕುತ್ತಿದೆ. ಅಕ್ಕಿಯ ಮೇಲೆ ಶೇ. 53ರಷ್ಟು ಟ್ಯಾರಿಫ್ ಇದೆ. ಇದರ ಮೇಲೆ ಇನ್ನೂ ಅಧಿಕ ಸುಂಕ ಹೇರಲು ಯೋಜಿಸಲಾಗುತ್ತಿದೆ ಅಮೆರಿಕ ಅಧ್ಯಕ್ಷರು.

ಭಾರತದ ಅಕ್ಕಿ ಮೇಲೆ ಟ್ರಂಪ್ಗೆ ಯಾಕೆ ಕೆಂಗಣ್ಣು?

ಡೊನಾಲ್ಡ್ ಟ್ರಂಪ್ ಅವರಿಗೆ ನಿಷ್ಠರಾಗಿರುವ ಮತದಾರರಲ್ಲಿ ಅಮೆರಿಕನ್ ರೈತರೂ ಇದ್ದಾರೆ. ಹೀಗಾಗಿ, ರೈತರಿಗೆ ಪೂರಕವಾಗಿರುವ ಕ್ರಮಗಳನ್ನು ಟ್ರಂಪ್ ಸರ್ಕಾರ ಕೈಗೊಳ್ಳುತ್ತಿದೆ. ಹೊರದೇಶ ಅಕ್ಕಿ ಮತ್ತು ರಸಗೊಬ್ಬರ ಬರುವುದರಿಂದ ಅಮೆರಿಕದ ರೈತರ ಉತ್ಪನ್ನಗಳಿಗೆ ಬೇಡಿಕೆ ಕಡಿಮೆ ಆಗುತ್ತಿದೆ. ಭಾರತ, ಥಾಯ್ಲೆಂಡ್ ಮುಂತಾದ ದೇಶಗಳಿಂದ ಅಮೆರಿಕಕ್ಕೆ ಅಕ್ಕಿ ಬರುತ್ತದೆ. ಕೆನಡಾದಿಂದ ರಸಗೊಬ್ಬರ ಬರುತ್ತದೆ. ಎಲ್ಲವನ್ನೂ ಟ್ಯಾರಿಫ್ ಹಾಕುವುದಾಗಿ ಟ್ರಂಪ್ ಹೇಳಿದ್ದಾರೆ. ಅದೇ ವೇಳೆ, ಅಮೆರಿಕನ್ ರೈತರಿಗೆ ನೆರವಾಗಲು 12 ಬಿಲಿಯನ್ ಡಾಲರ್ ಪ್ಯಾಕೇಜ್ ಕೂಡ ನೀಡಲಾಗಿದೆ.

ಇದನ್ನೂ ಓದಿ: ನವೆಂಬರ್‌ನಲ್ಲಿ ವಾಹನಗಳ ಮಾರಾಟ; ಡಿಸೆಂಬರ್ ನಲ್ಲೂ ಇದೇ ಟ್ರೆಂಡ್

ಟ್ರಂಪ್ ಟ್ಯಾರಿಫ್, ಭಾರತದ ಅಕ್ಕಿ ರಫ್ತಿಗೆ ಎಷ್ಟು ಪರಿಣಾಮ?

2024-25ರಲ್ಲಿ ಅಮೆರಿಕಕ್ಕೆ ಭಾರತ 392 ಮಿಲಿಯನ್ ಡಾಲರ್‌ನಷ್ಟು ಮೌಲ್ಯದ, 2.74 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ರಫ್ತು ಮಾಡಿದೆ. ಭಾರತ ಒಟ್ಟಾರೆ ರಫ್ತಿನಲ್ಲಿ ಇದು ಶೇ. 3 ಮಾತ್ರವೇ. ಹೀಗಾಗಿ, ಅಮೆರಿಕಕ್ಕೆ ಅಕ್ಕಿ ರಫ್ತು ನಿಂತು ಹೋದರೆ ಭಾರತಕ್ಕೆ ಅಂಥ ದೊಡ್ಡ ಘಾಸಿಯೇನೂ ಆಗುವುದಿಲ್ಲ.

ಅಮೆರಿಕಕ್ಕೆ ರಫ್ತಾಗುವ ಅಕ್ಕಿಯಲ್ಲಿ ಬಾಸ್ಮತಿಯೇ ಶೇ. 86ರಷ್ಟಿದೆ. ಬಾಸ್ಮತಿ ಅಕ್ಕಿಗೆ ಅಮೆರಿಕ 4ನೇ ಅತಿದೊಡ್ಡ ಭಾರತದ ಮಾರುಕಟ್ಟೆ ಎನಿಸಿದೆ. ಇತರ ಸಾಮಾನ್ಯ ಅಕ್ಕಿಗೆ ಅಮೆರಿಕ 24ನೇ ಅತಿದೊಡ್ಡ ಭಾರತದ ಮಾರುಕಟ್ಟೆ ಎನಿಸಿದೆ.

ಇದನ್ನೂ ಓದಿ: ಮನೆಯಲ್ಲಿ ತಯಾರಿಸುವ ಸಸ್ಯಾಹಾರ, ಮಾಂಸಾಹಾರ ಅಡುಗೆ ವೆಚ್ಚದಲ್ಲಿ ಇಳಿಕೆ; ತರಕಾರಿ, ಕೋಳಿ ಬೆಲೆ ಇಳಿಕೆ ಪರಿಣಾಮ

ಭಾರತದ ಬಾಸ್ಮತಿ ಅಕ್ಕಿ ಬಹಳ ವಿಶೇಷ ಗುಣ ಹೊಂದಿದೆ. ಅದರ ಸುವಾಸನೆ, ಆಕಾರ, ರುಚಿ, ಇವ್ಯಾವುದಕ್ಕೂ ಸಾಟಿಯಾಗುವ ಅಕ್ಕಿ ಅಮೆರಿಕದಲ್ಲಿ ಇಲ್ಲ. ಹೀಗಾಗಿ, ಭಾರತದ ಬಾಸ್ಮತಿ ಅಕ್ಕಿಗೆ ಬಹಳ ಬೇಡಿಕೆಯಿದೆ. ಟ್ರಂಪ್ ಬಾಸ್ ಅವರಿಗೆ ಅಧಿಕ ಸುಂಕ ಹಾಕಿದರೂ ಮತಿ ಅಕ್ಕಿಗಿರುವ ಬೇಡಿಕೆ ಕಡಿಮೆ ಆಗದೇ ಇರಬಹುದು. ಟ್ಯಾರಿಫ್ನ ಹೊರೆಯನ್ನು ಅಂತಿಮವಾಗಿ ಅಮೆರಿಕದ ಗ್ರಾಹಕರು ಹೊರಬೇಕಾಗಬಹುದು.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *