ಬೆಂಗಳೂರು, ಫೆಬ್ರವರಿ 27: ಕ್ಯಾನ್ಸರ್ ಪೀಡಿತ ಗಂಡನ ಚಿಕಿತ್ಸೆ ಖರ್ಚಿಗೆಂದು ಕೆಲಸ ಮಾಡ್ತಿದ್ದ ಮನೆಯಲ್ಲಿಯೇ ಹೆಂಡತಿಯೋರ್ವಳು ಬೆಳ್ಳಿ ಕದ್ದಿರುವ ಘಟನೆ ಸಂಬಂಧ ಜೀವನ ಭೀಮಾನಗರ ಪೊಲೀಸ್ ಚೈತ್ರಾ ಎಂಬಾಕೆಯನ್ನು ಬಂಧಿಸಿದ್ದಾರೆ. ಪ್ರತಿಷ್ಟಿತ ಆಸ್ಪತ್ರೆ ಒಂದರಲ್ಲಿ ಸರ್ಜನ್ ಆಗಿದ್ದವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಚೈತ್ರಾ, ಹಂತ ಹಂತವಾಗಿ ಒಂದೊಂದೇ ಬೆಳ್ಳಿ ಪಾತ್ರೆಯಂತೆ ಒಟ್ಟು 12.5 ಕೆಜಿ ಬೆಳ್ಳಿ ದೋಚಿದ್ದಳು. ಈಕೆಯ ಗಂಡ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆ ಖರ್ಚಿಗೆ ಹೆಚ್ಚಿನ ಹಣದ ಅವಶ್ಯಕತೆ ಇತ್ತು. ಹೀಗಾಗಿ ಕಳೆದ ಒಂದೂವರೆ ವರ್ಷದಿಂದ ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಈ ಕಳ್ಳತನಕ್ಕೆ ಇಳಿದಿದ್ದಳು.
ಮಹಡಿ ಮೇಲೆ ಕೆಲ ಬೆಳ್ಳಿ ಸಾಮಗ್ರಿಗಳನ್ನು ಕೂಡಿಟ್ಟ ಮನೆಯವರು, ಹಬ್ಬದ ಸಂದರ್ಭದಲ್ಲಿ ಮಾತ್ರ ಆ ಪಾತ್ರೆಗಳನ್ನು ಉಪಯೋಗಿಸುತ್ತಿದ್ದರು. ಈ ಹಿನ್ನೆಲೆಯನ್ನು ಒಂದಾಗಿ ಎಗರಿಸಿದ್ದ ಚೈತ್ರಾ, ಅವನನ್ನು ಅಡವಿಟ್ಟು ಹಣ ಪಡೆದು ಬಳಸುತ್ತಿದ್ದಾರೆ. ನಂತರ ಅನುಮಾನ ಬಾರದಂತೆ ಬಂದು ಅದೇ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ದೀಪಾವಳಿ ಹಬ್ಬದ ನಂತರ ಆಕೆ ಕೆಲಸ ಬಿಟ್ಟಿದ್ದು, ದಸರಾ ಹಬ್ಬಕ್ಕೆ ಪಾತ್ರೆ ಚೀಲ ಓಪನ್ ಮಾಡಿದ್ದ ಮನೆಯವರು ಶಾಕ್ ಆಗಿದ್ದಾರೆ. ಈ ವೇಳೆ ಬೆಳ್ಳಿ ಪಾತ್ರೆಗಳು, ಪೂಜಾ ಸಾಮಗ್ರಿಗಳು ಕಾಣೆಯಾಗಿರೋದು ಕುಟುಂಬಸ್ಥರ ಗಮನಕ್ಕೆ ಬಂದಿದೆ. ಅವರು ನೀಡಿದ್ದ ದೂರಿನ ಅನ್ವಯ ತನಿಖೆಗೆ ಮುಂದಾದ ಪ್ರಕರಣ, ಅನುಮಾನಗೊಂಡು ಮನೆ ಕೆಲಸದವರ ವಿಚಾರಣೆ. ಚೈತ್ರಾಳ ವಿಚಾರಣೆ ವೇಳೆ ಬೆಳ್ಳಿ ಸಾಮಗ್ರಿ ಕಳ್ಳತನ ಮಾಡಿರುವ ಸತ್ಯ ಬಯಲಾಗಿತ್ತು, ಬಂಧಿತಳಿಂದ 35 ಲಕ್ಷ ಮೌಲ್ಯದ 12.5 ಕೆಜಿ ಬೆಳ್ಳಿ, 7.5 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲೂ ಅಂಡಾಣು ಮಾರಾಟ ದಂಧೆ? ಐವಿಎಫ್ ಕೇಂದ್ರಗಳ ಮೇಲೆ ಕಟ್ಟುನಿಟ್ಟಿನ ನಿಗಾಕ್ಕೆ ಆರೋಗ್ಯ ಇಲಾಖೆ ಸೂಚನೆ
ಚಿನ್ನದಂಗಡಿ ಮಾಲೀಕನ ಹೆಸರಿನಲ್ಲಿ ಸರ ಪಡೆದು ವಂಚಿಸಿದ ಆರೋಪಿಯನ್ನು ಬೆಂಗಳೂರಿನ ಭಾರತಿನಗರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ 5 ತಿಂಗಳ ಬಳಿಕ ರಾಜಸ್ಥಾನ ಮೂಲದ ಆರೋಪಿ ಧರ್ಮವೀರ್ ಸಿಂಗ್ ಅವರನ್ನು ಬಂಧಿಸಲಾಗಿದೆ, ಸುಮಾರು 33 ಲಕ್ಷ ರೂ. ಮೌಲ್ಯದ 239 ಗ್ರಾಂ ಚಿನ್ನದ ಸರವನ್ನು ಈತನಿಂದ ವಶಕ್ಕೆ ಪಡೆಯಲಾಗಿದೆ. ಮಹಾವೀರ್ ಜ್ಯುವೆಲ್ಲರಿ ಶಾಪ್‌ನಲ್ಲಿ ಕೆಲಸ ಮಾಡ್ತಿದ್ದ ಧರ್ಮವೀರ್ ಸಿಂಗ್, ಬೇರೆ ಚಿನ್ನದ ಅಂಗಡಿಗಳ ಜೊತೆ ಎಕ್ಸ್ ಚೇಂಜ್ ವ್ಯವಹಾರ ನಡೆಸುತ್ತಿದ್ದರು. ಜ್ಯೂವೆಲ್ಲರಿ ಅಂಗಡಿ ಮಾಲೀಕ ಹೈದರಾಬಾದ್‌ಗೆ ಹೋದ ಮಾಲೀಕನ ಹೆಸರು ಹೇಳಿ 7 ಲಾಂಗ್ ಚೈನ್ ಇದ್ದ ಆರೋಪಿ, ಅವರ ಸಮೇತ ರಾಜಸ್ಥಾನಕ್ಕೆ ಪರಾರಿಯಾಗಿದ್ದ. ಪೊಲೀಸರ ಕಣ್ಣುತಪ್ಪಿಸಿ 5 ತಿಂಗಳು ತಲೆಮರೆಸಿಕೊಂಡಿದ್ದ ಈತನನ್ನು ಕೊನೆಗೂ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.