Headlines

ಕಟಾವಿಗೆ ಬಂದಿದ್ದ ಬೆಳೆ ತಿಂದು ತೇಗಿದ ಒಂಟಿ ಸಲಗ: ಆನೆ ಓಡಿಸಲು ರೈತರ ಹರಸಾಹಸ

ಕಟಾವಿಗೆ ಬಂದಿದ್ದ ಬೆಳೆ ತಿಂದು ತೇಗಿದ ಒಂಟಿ ಸಲಗ: ಆನೆ ಓಡಿಸಲು ರೈತರ ಹರಸಾಹಸ


ಚಾಮರಾಜನಗರ, ಫೆಬ್ರವರಿ 18: ಗಡಿ ನಾಡು ಚಾಮರಾಜನಗರದಲ್ಲಿ ಮತ್ತೆ ಕಾಡಾನೆ ಹಾವಳಿ ಮೀರಿದೆ. ಕಟಾವಿಗೆ ಬಂದಿದ್ದ ಮೆಕ್ಕೆಜೋಳವನ್ನು ಒಂಟಿ ಸಲಗ ತಿಂದು ತೇಗಿದ್ದು, ತಡರಾತ್ರಿ 3 ಗಂಟೆಯವರೆಗೂ ಕಾಡನ್ನು ಓಡಿಸಲು ಹನೂರು ತಾಲೂಕಿನ ಕಾಡಂಚಿನ ಪ್ರದೇಶ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದ ರೈತರು ಹರಸಾಹಸ ಪಟ್ಟಿದ್ದಾರೆ. ನಂಜಶೆಟ್ಟಿ ಎಂಬುವವರಿಗೆ ಸೇರಿದ ಜಮೀನಿಗೆ ಲಗ್ಗೆಯಿಟ್ಟ ಕಾಡಾನೆ, 5 ಕೋಡಿಯಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ಸಂಪೂರ್ಣ ಹಾಳು ಮಾಡಿದೆ. ಒಂಟಿ ಸಲಗವನ್ನು ಓಡಿಸುವ ವೇಳೆ ಬಿದ್ದು ರೈತನ ಕಾಲಿಗೆ ಗಾಯ ಕೂಡ ಆಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *