ಗ್ರಾಮಸ್ಥರ ಬೆಚ್ಚಿಬೀಳಿಸಿದ ಗಜಪಡೆ: ಹೊಸೂರು ಬಳಿ ಹಳ್ಳಿಗೆ ನುಗ್ಗಿದ 40ಕ್ಕೂ ಹೆಚ್ಚು ಕಾಡಾನೆ ಹಿಂಡು!

ಗ್ರಾಮಸ್ಥರ ಬೆಚ್ಚಿಬೀಳಿಸಿದ ಗಜಪಡೆ: ಹೊಸೂರು ಬಳಿ ಹಳ್ಳಿಗೆ ನುಗ್ಗಿದ 40ಕ್ಕೂ ಹೆಚ್ಚು ಕಾಡಾನೆ ಹಿಂಡು!


ಆನೇಕಲ್, ಡಿಸೆಂಬರ್ 25: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ತಮಿಳುನಾಡು ಗಡಿ ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡಿದೆ. ಕಾಡಿನಿಂದ ನಾಡಿಗೆ ದಾಗುಂಡಿ ಇಟ್ಟ ಕಾಡಾನೆಗಳ ದೊಡ್ಡ ಹಿಂಡು ರೈತರ ಬೆಳೆಗಳನ್ನು ನಾಶಪಡಿಸಿ ಆತಂಕ ಮೂಡಿಸಿದೆ. ತಮಿಳುನಾಡಿನ ಹೊಸೂರು ಸಮೀಪದ ಶಾನಮಾವು ಪ್ರದೇಶದಲ್ಲಿ ನಲ್ವತ್ತಕ್ಕೂ ಹೆಚ್ಚು ಕಾಡನೆಗಳಿರುವ ಹಿಂಡು ಶಾನಾಗಿದ್ದು, ಕಳೆದ ಎರಡು ದಿನಗಳಿಂದ ನಮಾವು, ಪಿರ್ಜೆಹಳ್ಳಿ ಹಾಗೂ ನಾಯಕನಹಳ್ಳಿ ಗ್ರಾಮಗಳ ಬೀಡು ಬಿಟ್ಟಿವೆ. ಈ ಹಾವಳಿಯಿಂದಾಗಿ ರೈತರು ಬೆಳೆದ ರಾಗಿ ಸೇರಿದಂತೆ ಇತರ ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ.

ರಾತ್ರಿ ವೇಳೆಯಲ್ಲಿ ಕೃಷಿ ಭೂಮಿಗೆ ನುಗ್ಗುತ್ತಿರುವ ಕಾಡಾನೆಗಳ ಹಿಂಡು ಹೊಲಗಳಲ್ಲಿ ಬೆಳೆದ ಬೆಳೆಗಳನ್ನು ತುಳಿದು ನಾಶಪಡಿಸುತ್ತಿರುವ ರೈತರು ತೀವ್ರ ಕಂಗಾಲಾಗಿದ್ದಾರೆ. ಕಾಡಾನೆಗಳ ಭಯದಿಂದಾಗಿ ರೈತರು ಹೊಲಗಳಿಗೆ ಹೋಗಲು ಕೂಡ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *