ಚಾಮರಾಜನಗರ, ಡಿಸೆಂಬರ್ 28: ಚಾಮರಾಜನಗರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ‘ಬನಾನಾ ಬೇಬಿ’ ಎಂದು ಕರೆಯಲ್ಪಡುವ ಆನೆ ಮತ್ತೆ ಸಕ್ರಿಯವಾಗಿದೆ. ಕಳೆದ ಮೂರು ತಿಂಗಳಿನಿಂದ ಸೈಲೆಂಟ್ ಆಗಿದ್ದ ಈ ಆನೆ, ಇದೀಗ ಕಾಡಿನಿಂದ ನಾಡಿಗೆ ಆಹಾರ ಅರಸಿ ಬರುತ್ತಿದೆ. ಬಾಳೆಹಣ್ಣು ಹೊತ್ತು ಸಾಗುವ ವಾಹನಗಳೇ ಈ ಆನೆಯ ಮುಖ್ಯ ಗುರಿ ಹೊಂದಿದ್ದು, ನಡುರಸ್ತೆಯಲ್ಲೇ ವಾಹನಗಳನ್ನು ತಡೆದು ನಿಲ್ಲಿಸಲಾಗುತ್ತಿದೆ. ಪುಣಜನೂರಿನಿಂದ ತಮಿಳುನಾಡಿನ ಅಸನೂರು ರಸ್ತೆ ಬದಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಅರಣ್ಯ ಇಲಾಖೆ ಈ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಈ, ಕಡೂರು ತಾಲ್ಲೂಕಿನ ರಂಗೇನಹಳ್ಳಿ ಗ್ರಾಮದಲ್ಲಿ ಜನರ ಆತಂಕಕ್ಕೆ ಕಾರಣವಾದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.