ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ

ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ,  ವಿಡಿಯೋ ನೋಡಿ


ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ,  ವಿಡಿಯೋ ನೋಡಿ

ಚಾಮರಾಜನಗರ, (ಡಿಸೆಂಬರ್ 15): ಚಾಮರಾಜನಗರ ಜಿಲ್ಲೆ ಗಡಿ ತಮಿಳುನಾಡಿನ ಮಾರ್ಗಮಧ್ಯ ಕಾಡಾನೆಗಳ ಓಡಾಟ ಜೋರಾಗಿದೆ. ಎತ್ತಕಟ್ಟಿ ಬೆಟ್ಟ ಹಾಗೂ ತಾಳವಾಡಿ ಸೇರಿದಂತೆ ಅಕ್ಕ ಪಕ್ಕದ ಗ್ರಾಮಗಳ ಬಳಿ ಕಾಡಾನೆಗಳು ಕಾಣಿಸಿಕೊಂಡಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಮುಖ್ಯರಸ್ತೆಯ ಕಾಡಾನೆಗಳು, ಪತ್ತೆಯಾಗುತ್ತಿವೆ. ಅದರಲ್ಲೂ ಒಂದು ಆನೆ ದಿಂಬಂ ಘಾಟ್ ನಲ್ಲಿ ಪೊಲೀಸರ ರೀತಿ ಲಾರಿಗಳನ್ನು ತಪಾಸಣೆ ನಡೆಸಲಾಗಿದೆ. ಹೌದು… ಚಾಮರಾಜನಗರದಿಂದ ತಮಿಳುನಾಡಿನ ಬಣ್ಣಾರಿಗೆ ತೆರಳುವ ರಸ್ತೆ ಮಧ್ಯೆ ಲಾರಿಗಳನ್ನು ಅಡ್ಡ ಹಾಕಿ ಕಬ್ಬು ತರಕಾರಿ ಕೀಳುತ್ತಿವೆ. ಒಂದು ವೇಳೆ ತಿನ್ನಲು ಲಾರಿಯಲ್ಲಿ ಏನು ಇಲ್ಲದಿದ್ದರೆ ಹಾಗೇ ಕಳುಹಿಸುತ್ತಿದೆ. ವಿಡಿಯೋ ನೋಡುತ್ತಿರುವ ಥೇಟ್ ಸೇಮ್ ಪೊಲೀಸರ ರೀತಿಯಲ್ಲೇ ಕಾಡಾನೆ ವಾಹನಗಳನ್ನು ಅಡ್ಡ ಹಾಕಿ ಪರಿಶೀಲನೆ ನಡೆಸುತ್ತಿದೆ. ನೀವೂ ಒಮ್ಮೆ ವಿಡಿಯೋ ನೋಡಿ.

ಕರ್ನಾಟಕದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *