Lakshmi Nivasa Kannada Serial Actress Manasa Manohar: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನೀಲು ಪಾತ್ರದಲ್ಲಿ ನಟಿ ಮಾನಸಾ ಮನೋಹರ್ ಅವರು ಅಭಿನಯಿಸುತ್ತಿದ್ದಾರೆ. ಈ ಪಾತ್ರ ಬಹಳ ಪ್ರಮುಖವಾದುದು. ಆದರೆ ಈ ಸೀರಿಯಲ್‌ನಿಂದ ಮಾನಸಾ ಹೊರಬರುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನೀಲುಗೆ ಭಾವನಾಳನ್ನು ಕಂಡರೆ ಇಷ್ಟವೇ ಇಲ್ಲ. ಮನೆಯಲ್ಲಿ ಸಿದ್ದೇಗೌಡ್ರಿಗೆ ಬೆಲೆ ಕೊಡ್ತಾರೆ, ನನ್ನ ಗಂಡನಿಗೆ ಬೆಲೆ ಕೊಡೋದಿಲ್ಲ ಎಂದು ನೀಲುಗೆ ಬೇಸರವಿದೆ. ಸಿದ್ದೇಗೌಡ್ರು-ಭಾವನಾ ದೂರ ಆಗಬೇಕು ಎಂದು ನೀಲು ಪ್ರಯತ್ನ ಪಡುತ್ತಿದ್ದಾಳೆ.

ಈ ಸೀರಿಯಲ್‌ನಲ್ಲಿ ನೀಲು ದೊಡ್ಡ ಪ್ರಾಮುಖ್ಯತೆ ಇದೆ. ಆದರೆ ನೀಲು ಪಾತ್ರಧಾರಿ ನಟಿ ಮಾನಸಾ ಮನೋಹರ್ ಅವರು ಈ ಸೀರಿಯಲ್‌ನಲ್ಲಿ ಮುಂದುವರೆಯೋದು ಕಷ್ಟ ಇದೆ. ಹಾಗಾದರೆ ಏನು ಮಾಡ್ತಾರೆ?

ನೀಲು ಪಾತ್ರಧಾರಿ ಮಾನಸಾ ಮನೋಹರ್ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷ ಪ್ರೀತಂ, ಮಾನಸಾ ಮನೋಹರ್ ಅವರು ಮದುವೆಯಾಗಿದ್ದರು. ಇದು ಲವ್ ಮ್ಯಾರೇಜ್. ಈಗ ಈ ಜೋಡಿ ಕುಟುಂಬಕ್ಕೆ ಹೊಸ ಸದಸ್ಯರ ಆಗಮನವಾಗಲಿದೆ.

ಮಾನಸಾ ಮನೋಹರ್ ಅವರು ಒಂದಿಷ್ಟು ದಿನಗಳ ಶೂಟಿಂಗ್ ಮಾಡಿದರೂ ಕೂಡ, ತಿಂಗಳುಗಳ ಕಾಲ ಬ್ರೇಕ್ ತಗೊಳ್ಳಬೇಕಾಗಿ ಬರಬಹುದು. ಮಗು ಹುಟ್ಟಿದ ಬಳಿಕ, ಮಾನಸಾ ಅವರು ಒಂದಿಷ್ಟು ಟೈಮ್ ಬ್ರೇಕ್ ತಗೋಬೇಕಾಗಿ ಬರುವುದು. ಹೀಗಾಗಿ ಮಾನಸಾ ಅವರು ಸೀರಿಯಲ್‌ನಿಂದ ಹೊರನಡೆದರೂ ಕೂಡ ಆಶ್ಚರ್ಯವಿಲ್ಲ.

ಮಾನಸಾ ಅವರು ಸೀರಿಯಲ್‌ನಿಂದ ಹೊರಬಂದರೆ, ಬೇರೆ ಪಾತ್ರಧಾರಿಗಳ ಆಗಮನವಾಗುವುದು. ಮಾನಸಾ ಅವರು ಹೊರಗಡೆ ಬಂದರೆ, ಯಾರು ಸೀರಿಯಲ್‌ಗೆ ಎಂಟ್ರಿ ಕೊಡ್ತಾರೆ ಎಂದು ಕಾದು ನೋಡಬೇಕಿದೆ.

Source link
ಮಗುವಿನ ನಿರೀಕ್ಷೆಯಲ್ಲಿರೋ ಮಾನಸಾ ಮನೋಹರ್ Lakshmi Nivasa Serial ಬಿಡ್ತಾರಾ? ಹೊಸ ಪಾತ್ರಧಾರಿ ಯಾರು?