ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಪಾತ್ರದಲ್ಲಿ ರಾಜೇಶ್ ನಟರಂಗ ಅವರು ಅದ್ಭುತವಾಗಿ ನಟಿಸುತ್ತಿದ್ದಾರೆ. ರಾಜೇಶ್ ನಟರಂಗ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್, ಕನ್ನಡಪ್ರಭದ ಯುಗಾದಿ ಹಬ್ಬ ಸಂಭ್ರಮದಲ್ಲಿ ಭಾಗಿ ಆಗಿದ್ದರು. ಆ ವೇಳೆ ಸೀರಿಯಲ್ ಬಗ್ಗೆ ಕೂಡ ಮಾತನಾಡಿದ್ದಾರೆ.

ಗುಪ್ತಗಾಮಿನಿ, ತ್ರಿವೇಣಿ ಸಂಗಮ ಮುಂತಾದ ಧಾರಾವಾಹಿಗಳಲ್ಲಿ ನಟಿಸುತ್ತಿದ್ದೀರಿ. ಈಗ ಅಮೃತಧಾರೆ ಧಾರಾವಾಹಿಯಲ್ಲಿ ನಟಿಸುತ್ತಿದ್ದೀರಿ, ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ

ಕಲಾವಿದನಿಗೆ ಉಸಿರಾಟದ ಮೂಲಕ ಒಂದೇ ಅಲ್ಲದೆ, ಕಲೆ ಮೂಲಕ ಜೀವಂತವಾಗಿರಬೇಕು ಎನ್ನೋದಿರುತ್ತದೆ. ಧಾರಾವಾಹಿಗಳಲ್ಲಿನ ಪಾತ್ರಗಳಲ್ಲಿ ನಟಿಸಿ, ಅದನ್ನು ನಾನು ಅನುಭವಿಸಿದ್ದೀನಿ. ಹಣೆಬರಹವೋ, ನನ್ನ ತಂದೆ-ತಾಯಿ ಅಥವಾ ನಾನು ಮಾಡಿದ ಪುಣ್ಯವೋ ಏನೋ, ಇಂಥ ಪಾತ್ರ ಸಿಕ್ಕಿದೆ.

ನಾವು ಪಾತ್ರಗಳನ್ನು ಹುಡುಕಿಕೊಂಡು ಬರೋದಕ್ಕಿಂತ ಹೆಚ್ಚಾಗಿ, ಪಾತ್ರಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಎಲ್ಲವೂ ಕಾಲ ಕೂಡಿ ಬರಬೇಕು. ನಿರ್ಮಾಪಕರು, ಚಾನೆಲ್, ಕಥೆ ಎಲ್ಲವೂ ಬೇಕಿತ್ತು, ಅವೆಲ್ಲವೂ ಈಗ ಒಟ್ಟಾಗಿ ಕೂಡಿ ಬಂದಿದೆ.

ಧಾರಾವಾಹಿಯಲ್ಲಿ ಟ್ವಿಸ್ಟ್ ಬರುತ್ತಲೇ ಇದೆ, ಈ ಹಿಂದೆ ಮನೆಯಲ್ಲಿ ವೈಮನಸ್ಯ, ಜಗಳ, ಮನಸ್ತಾಪ ಎಲ್ಲವೂ ಇತ್ತು, ಈಗ ಈ ಸರ್ಕಲ್ ಕಂಪ್ಲೀಟ್ ಆಗಬೇಕು, ಈಗ ಮತ್ತೆ ಸಾಮ್ರಾಜ್ಯ ಕಟ್ಟುವ ಕಥೆ ಬರುತ್ತಿದೆ.

ತುಂಬ ಚೆನ್ನಾಗಿ ಬರುತ್ತಿದೆ, ಕೆಲವರಿಗೆ ವಾಸ್ತವ ಅರ್ಥ ಆಗಿದೆ. ನೀವು ಚೆನ್ನಾಗಿ ನಟಿಸ್ತೀರಿ, ಪಾತ್ರಗಳು ಚೆನ್ನಾಗಿ ಬರ್ತಿದೆ, ಮುಂದೆ ಹೀಗೆ ಆಗಬೇಕು ಎಂದು ಹೇಳುತ್ತಾರೆ. ಮುಂದೆ ಏನಾಗುವುದು ಎಂದು ಕೂಡ ಕೇಳುತ್ತಾರೆ. ನನ್ನ ಕೈಯಲ್ಲಿ ಏನೂ ಇಲ್ಲ, ದುಡ್ಡು ಕೊಡ್ತಾರೆ, ನಟಿಸ್ತೀನಿ ಎಂದು ವೀಕ್ಷಕರಿಗೆ ಗೊತ್ತಿದೆ. ಇದರಾಚೆ ಕೂಡ ವೀಕ್ಷಕರ ಆಸೆಯನ್ನು ನಾವು ಡೈರೆಕ್ಟರ್ ಬಳಿ ಚರ್ಚೆ ಮಾಡ್ತೀವಿ

ಮೊಗ್ಗಿನ ಮನಸು ಸಿನಿಮಾದಲ್ಲಿ ಪ್ರೀತಿ ಮಾಡಿದ ಹುಡುಗಿಗೆ ಲೆಕ್ಷರರ್ ಬುದ್ಧಿ ಹೇಳುವ ದೃಶ್ಯ ಈಗ ಮತ್ತೆ ಈ ಸೀರಿಯಲ್‌ನಲ್ಲಿ ಬಂದಿತು..

ಹೌದು, ಅಂದು ಈ ದೃಶ್ಯ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಿತ್ತು. ಅಫೆಕ್ಷನ್‌ನ್ನೇ ಪ್ರೀತಿ ಎಂದುಕೊಂಡ ಹುಡುಗಿಗೆ ಲೆಕ್ಚರರ್ ಬುದ್ಧಿ ಹೇಳೋದು ಆಗ ಅಷ್ಟು ಪ್ರಚಲಿತದಲ್ಲಿ ಇರಲಿಲ್ಲ. ಇದನ್ನು ಸಿನಿಮಾದಲ್ಲಿ ಹೇಳಿದ್ಮೇಲೆ ದೊಡ್ಡ ಚರ್ಚೆ ಆಗಿತ್ತು. ಈಗ ಮತ್ತೆ ಧಾರಾವಾಹಿಯಲ್ಲಿ ಬಂದಿರೋದು ಖುಷಿ ಕೊಟ್ಟಿದೆ.

ಇತ್ತೀಚಿನ ಎಪಿಸೋಡ್‌ಗಳಲ್ಲಂತೂ ಸ್ಟಾಕ್ ಮಾರ್ಕೆಟ್, ಬ್ಯುಸಿನೆಸ್, ರಿಲೇಶನ್‌ಶಿಪ್ ಬಗ್ಗೆ ಅದ್ಭುತವಾದ ಸಂಭಾಷಣೆಗಳಿವೆ. ಈ ಮೂಲಕ ನಿಮಗೂ ಕೂಡ ಮಾಹಿತಿ ಸಿಗುತ್ತದೆ

ಹೌದು, ನಮಗೆ ಕೂಡ ಒಂದಿಷ್ಟು ವಿಷಯಗಳು ಗೊತ್ತಿರೋದಿಲ್ಲ. ನಾವು ಕೂಡ ದಿನವೂ ಕಲಿಯುತ್ತಿರುತ್ತೇವೆ.

ಅಮೃತಧಾರೆ ಧಾರಾವಾಹಿ ಇರಲಿ, ಬೇರೆ ಏನೇ ಇರಲಿ ಎಲ್ಲದಕ್ಕೂ ಒಂದು ಅಂತ್ಯ ಎನ್ನೋದು ಇದ್ದೇ ಇರುತ್ತದೆ, ಸಹಜ. ನಿರ್ಮಾಪಕರು, ಚಾನೆಲ್ ಯಾವಾಗ ಈ ಸೀರಿಯಲ್ ನಿಲ್ಲಿಸಬೇಕು ಎಂದುಕೊಳ್ತಾರೋ ಆಗ ಸೀರಿಯಲ್ ನಿಲ್ಲುತ್ತದೆ. ಅದರ ಬಗ್ಗೆ ಗಾಸಿಪ್ ಮಾಡೋದು ಬೇಡ

Source link
Amruthadhaare Serial ಮುಗಿತಿದ್ಯಾ? ಎಲ್ಲದಕ್ಕೂ ಅಂತ್ಯ ಎನ್ನೋದಿರುತ್ತೆ: ರಾಜೇಶ್ ನಟರಂಗ ಹೇಳಿದ್ದೇನು?