
ಸ್ಟಾರ್ ಅಲ್ಲು ಅರ್ಜುನ್ (ಅಲ್ಲು ಅರ್ಜುನ್) ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾ ಮೂಲಕ ಗಳಿಸಿರುವ ಯಶಸ್ಸನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವ ಪ್ರಯತ್ನದಲ್ಲಿದ್ದಾರೆ. ಇದೇ ಕಾರಣಕ್ಕೆ ಅವರು ತ್ರಿವಿಕ್ರಮ್ ಆಫರ್ ಅನ್ನು ತ್ಯಜಿಸಿ ಅಟ್ಲಿ ಕೈ ಹಿಡಿದಿದ್ದಾರೆ. ಅಟ್ಲಿ, ಅಲ್ಲು ಅರ್ಜುನ್‌ಗಾಗಿ ಭಾರಿ ಬಜೆಟ್‌ನ ಹಾಲಿವುಡ್ ಮಾದರಿಯ ಫ್ಯಾಂಟಸಿ ಮಾದರಿಯ ಕಥೆ ಹೆಣೆದಿದ್ದು, ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಸಿನಿಮಾವನ್ನು ಯಶಸ್ಸು ಮಾಡುವ ಹಠಕ್ಕೆ ಬಿದ್ದಿರುವ ಅಟ್ಲಿ, ದೊಡ್ಡ ದೊಡ್ಡ ಸ್ಟಾರ್ ನಟಿಯರನ್ನು ಸಿನಿಮಾಕ್ಕೆ ಸೇರಿಸಿಕೊಳ್ಳುತ್ತಾ ಸಾಗಿದ್ದಾರೆ. ಸಿನಿಮಾದ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ. ಅವರೊಟ್ಟಿಗೆ ರಶ್ಮಿಕಾ ಮಂದಣ್ಣ ಸಹ ಇರಲಿದ್ದಾರೆ. ಇದೀಗ ಸ್ಟಾರ್ ಕ್ರಿಕೆಟಿಗನ ಪತ್ನಿಯನ್ನು ಸಹ ಸಿನಿಮಾಕ್ಕೆ ಎಳೆದುಕೊಂಡಿದ್ದಾರೆ.
ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ, ಅನುಷ್ಕಾ ಶರ್ಮಾ, ಅಲ್ಲು ಅರ್ಜುನ್ ಜೊತೆಗಿನ ಸಿನಿಮಾದಲ್ಲಿ ನಟಿಸಲಿದ್ದಾರೆ. ಆದರೆ ಇದು ನಾಯಕಿ ಪಾತ್ರಕ್ಕೆ ಬದಲಾಗಿ ಅತಿಥಿ ಪಾತ್ರ ಆಗಿರುತ್ತದೆ. ಆದರೆ ಕತೆಗೆ ಪ್ರಮುಖವಾದ ತಿರುವು ನೀಡುವ ಪಾತ್ರ ಸಹ ಆಗಿರುತ್ತದೆ ಎನ್ನಲಾಗುತ್ತಿದೆ. ಅನುಷ್ಕಾ ಶರ್ಮಾ ಅವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಒಂದು ವೇಳೆ ಇದು ಅಧಿಕೃತವಾದರೆ, ಅನುಷ್ಕಾ ಶರ್ಮಾ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಂತಾಗುತ್ತದೆ. 2022ರಲ್ಲಿ ತೆರೆಕಂಡ ‘ಖಾಲಾ’ ಚಿತ್ರದ ಅತಿಥಿ ಪಾತ್ರದ ನಂತರ ಅನುಷ್ಕಾ ಬೆಳ್ಳಿತೆರೆಯಿಂದ ದೂರವೇ ಉಳಿದಿದ್ದಾರೆ. ತಮ್ಮ ವೈಯಕ್ತಿಕ ಜೀವನ ಮತ್ತು ಮಕ್ಕಳ ಪಾಲನೆಯಲ್ಲಿ ಬ್ಯೂಸಿಯಾಗಿರುವ ಅವರು, ಈಗ ಈ ಭರ್ಜರಿ ಪ್ರಾಜೆಕ್ಟ್ ಮೂಲಕ ಕಮ್ಬ್ಯಾಕ್ ಮಾಡುತ್ತಾರಾ ಎಂಬುದು ಅಭಿಮಾನಿಗಳ ಕುತೂಹಲ.
ಅನುಷ್ಕಾ ಶರ್ಮಾ, ಚಿತ್ರರಂಗದಿಂದ ದೂ ಆಗಿದ್ದಾರೆ. ಅವರು ನಾಯಕಿಯಾಗಿ ನಟಿಸಿದ್ದ ಕೊನೆಯ ಸಿನಿಮಾ ‘ಜೀರೋ’ 2018 ರಲ್ಲಿ ಬಿಡುಗಡೆ ಆಗುತ್ತಿದೆ. ಅದಾದ ಬಳಿಕ 2022 ರಲ್ಲಿ ಸಿನಿಮಾ ಒಂದರಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಇದೀಗ ಹಲವು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಲಿದ್ದಾರೆ. ಅನುಷ್ಕಾ ಶರ್ಮಾ ಅವರನ್ನು ಅಟ್ಲಿ ಸಂಪರ್ಕಿಸಿದ್ದರೂ ಅವರು ನಟಿಸುವಾಗ ಖಾತ್ರಿ ಆಗಿಲ್ಲ.
ಇದನ್ನೂ ಓದಿ:ವಯಸ್ಸಿಗೆ ಮೀರಿದ ಸಾಧನೆ: ಅಪರೂಪದ ದಾಖಲೆ ಬರೆದ ಅಲ್ಲು ಅರ್ಜುನ್ ಪುತ್ರಿ ಆರ್ಹಾ
ಇನ್ನು ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಕ್ರಶ್ ರಶ್ಮಿಕಾ ಮಂದಣ್ಣ ಅವರು ಇದೇ ಮೊದಲ ಬಾರಿಗೆ ಖಳನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಲ್ಲ ಅರ್ಜುನ್ ಈ ಚಿತ್ರದಲ್ಲಿ ದ್ವಿಪಾತ್ರ ಅಥವಾ ಎರಡ ಹೆಚ್ಚು ಪಾತ್ರಗಳಲ್ಲಿ ಮಿಂಚಲಿದ್ದಾರೆ. ಚಿತ್ರವು ‘ಪ್ಯಾರಲಾಲ್ ಯೂನಿವರ್ಸ್’ ಕಥಾಹಂದರ ಹೊಂದಿರಲಿದೆ ಎಂಬ ಮಾಹಿತಿ ಇದೆ.
ಸದ್ಯಕ್ಕೆ ಅನುಷ್ಕಾ ಶರ್ಮಾ ಅವರ ಸೇರ್ಪಡೆಯ ಬಗ್ಗೆ ಚಿತ್ರತಂಡವಾಗಲಿ ಅಥವಾ ನಟಿಯಾಗಲಿ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ, ಏಪ್ರಿಲ್ 8ರಂದು ಅಲ್ಲ ಅರ್ಜುನ್ ಅವರ ಹುಟ್ಟುಹಬ್ಬದ ಅಂಗವಾಗಿ ಚಿತ್ರದ ಟೀಸರ್ ಅಥವಾ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ. ಸಾಯಿ ಅಭ್ಯಂಕರ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಸನ್ ಪಿಕ್ಚರ್ಸ್ ನವರು ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ