ಬೆಂಗಳೂರಲ್ಲಿ ಐಪಿಎಲ್ ಆಯೋಜನೆ ಆಗುತ್ತಾ? ಇಂದೇ ಅಂತಿಮ ನಿರ್ಧಾರ ಪ್ರಕಟ!

ಬೆಂಗಳೂರಲ್ಲಿ ಐಪಿಎಲ್ ಆಯೋಜನೆ ಆಗುತ್ತಾ? ಇಂದೇ ಅಂತಿಮ ನಿರ್ಧಾರ ಪ್ರಕಟ!

ಬೆಂಗಳೂರಲ್ಲಿ ಐಪಿಎಲ್ ಆಯೋಜನೆ ಆಗುತ್ತಾ? ಇಂದೇ ಅಂತಿಮ ನಿರ್ಧಾರ ಪ್ರಕಟ!

ಬೆಂಗಳೂರು: 19ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಲಿದೆಯೇ ಎನ್ನುವ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ ನೋಡಿ

2026ರ ಐಪಿಎಲ್‌ನ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆಯೇ ಇಲ್ಲವೇ ಎಂಬುದು ಶುಕ್ರವಾರ ನಿರ್ಧಾರವಾಗಲಿದೆ. ಮೂಲಗಳ ಪ್ರಕಾರ, ಪಂದ್ಯಗಳಿಗೆ ಹಸಿರು ನಿಶಾನೆ ತೋರುವುದು ಬಹುತೇಕ ಖಚಿತ ಎಂದು ಗೊತ್ತಾಗಿದೆ.

ಚಿನ್ನಸ್ವಾಮಿಯಲ್ಲಿ ಪಂದ್ಯ ನಡೆಸಲು ಸರ್ಕಾರ ಈಗ ಷರತ್ತುಬದ್ಧ ಅನುಮತಿ ನೀಡಿದೆ. ಆದರೆ, ಯಾವುದೇ ಕ್ರೀಡಾಂಗಣದಲ್ಲಿ ಪಂದ್ಯ ನಡೆಸಬೇಕಿದ್ದರೆ ಅಲ್ಲಿನ ರಾಜ್ಯ ಸರ್ಕಾರದ ಷರತ್ತು ರಹಿತ ಅನುಮತಿಯನ್ನು ಪಡೆದಿರಬೇಕು ಎಂಬುದು ಬಿಸಿಸಿಐ ನಿಯಮ.

ಹೀಗಾಗಿ ಚಿನ್ನಸ್ವಾಮಿಯಲ್ಲಿ ಪಂದ್ಯ ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ)ಗೆ ಷರತ್ತಿಲ್ಲದ ಅನುಮತಿ ಬೇಕಿದೆ. ಕ್ರೀಡಾಂಗಣದಲ್ಲಿ ಆಗಬೇಕಿರುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದ ಬಳಿಕವೇ ಷರತ್ತಿಲ್ಲದ ಅನುಮತಿ ಪತ್ರ ನೀಡುವುದಾಗಿ ಸರ್ಕಾರ ತಿಳಿಸಿತ್ತು.

ಸರ್ಕಾರ ನಿಯೋಜಿಸಿದ ತಜ್ಞರ ಸಮಿತಿಯು ಮಾ.13ರಂದು ಕ್ರೀಡಾಂಗಣದಲ್ಲಿ ಅಂತಿಮ ಸುತ್ತಿನ ಪರಿಶೀಲನೆ ನಡೆಸಿ, ಅದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಅದನ್ನು ಅವಲೋಕಿಸಿ ಸರ್ಕಾರ ಅನುಮತಿ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.

ಈ ಬಗ್ಗೆ ‘ಕನ್ನಡಪ್ರಭ’ ಪತ್ರಿಕೆಗೆ ಮಾಹಿತಿ ನೀಡಿರುವ ಕೆಎಸ್‌ಸಿಎ ಮಾಧ್ಯಮ ವಕ್ತಾರ ವಿನಯ್‌ ಮೃತ್ಯುಂಜಯ, ‘ತಜ್ಞರ ಸಮಿತಿ ಕ್ರೀಡಾಂಗಣದಲ್ಲಿ ಪರಿಶೀಲನೆ ನಡೆಸಲಿದೆ. ಅದರ ಬಳಿಕ ಸರ್ಕಾರದ ನಿರ್ಧಾರದ ಬಗ್ಗೆ ಸಂಜೆ ವೇಳೆ ನಾವು ಮಾಹಿತಿ ನೀಡಲಿದ್ದೇವೆ’ ಎಂದಿದ್ದಾರೆ.

19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 28ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಮ್ಯಾಚ್‌ಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸುವುದು ಬಹುತೇಕ ಖಚಿತವೆನಿಸಿದೆ.

Source link

Leave a Reply

Your email address will not be published. Required fields are marked *