ಭ್ರಷ್ಟಾಚಾರದ ಆರೋಪದ ಮೇಲೆ ಕುತಂತ್ರದಿಂದ ಜೈಲುಪಾಲಾಗಿರುವ ಕರ್ಣನನ್ನು ರಕ್ಷಿಸಲು ವಿವಿಧ ಸೀರಿಯಲ್ಗಳ ನಾಯಕಿಯರು ಒಂದಾಗಿದ್ದಾರೆ. ವಿಲನ್‌ಗಳಿಂದ ಅಪಹರಣಕ್ಕೊಳಗಾಗಿದ್ದ ಪ್ರಮುಖ ಸಾಕ್ಷಿಗಳನ್ನು ರಕ್ಷಿಸಿರುವ ಈ ನಾಯಕಿಯರು, ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಲು ಹರಸಾಹಸ ಪಡುತ್ತಿದ್ದಾರೆ.

ಕರ್ಣ ಸೀರಿಯಲ್ನಲ್ಲಿ (Karna Serial) ಸದ್ಯ ನಯನತಾರಾ, ರಮೇಶ್ ಕುತಂತ್ರದಿಂದ ಜೊತೆಗೆ, ಸೀರಿಯಲ್ ಆರೋಗ್ಯ ಸಚಿವನ ಭ್ರಷ್ಟಾಚಾರದಿಂದ ಕರ್ಣ ಜೈಲುಪಾಲಾಗಿದ್ದಾನೆ. ಆತನ ವಿರುದ್ಧವೇ ಎಲ್ಲಾ ಸಾಕ್ಷ್ಯಾಧಾರಗಳನ್ನು ಕಲೆ ಹಾಕಲಾಗಿದೆ.

ಇದೀಗ ಕರ್ಣನನ್ನು ಕಾಪಾಡಲು ವಿವಿಧ ಸೀರಿಯಲ್ ನಾಯಕಿಯರು ಬಂದಿದ್ದಾರೆ. ಬ್ರಹ್ಮಗಂಟು ದೀಪಾ, ಅಮೃತಧಾರೆ ಮಲ್ಲಿ, ಶ್ರಾವಣಿ ಸುಬ್ರಹ್ಯಣ್ಯ ಶ್ರಾವಣಿ, ಅಣ್ಣಯ್ಯ ದೇವಿ ಎಲ್ಲರೂ ಬಂದಿದ್ದಾರೆ. ಇದಾಗಲೇ ಈ ಎಲ್ಲಾ ನಟಿಯರು ರೌಡಿಗಳನ್ನು ಸದೆ ಬಡಿದಿದ್ದಾರೆ.

ಆಸ್ಪತ್ರೆಯಲ್ಲಿ ಕೆಲವರನ್ನು ಸತ್ತವರಂತೆ ನಟಿಸಲು ವಿಲನ್ಗಳು ಹೇಳಿದ್ದರು. ಅವರಿಗೆ ದುಡ್ಡನ್ನು ನೀಡಲಾಗಿತ್ತು. ಆದರೆ ಇದೀಗ ಅವರಿಗೆ ತಾವು ಮಾಡಿದ್ದು ಅನ್ಯಾಯ ಎಂದು ತಿಳಿದಿದೆ. ಕರ್ಣನಂಥ ದೇವರನ್ನು ಜೈಲಿಗೆ ಕಳುಹಿಸಿ ಮಹಾಪಾಪ ಮಾಡಿರುವುದಾಗಿ ತಿಳಿದಿದೆ.

ಅವರು ಸಾಕ್ಷಿ ನುಡಿಯುತ್ತಾರೆ ಎಂದು ಅವರನ್ನು ಕಿಡ್ನ್ಯಾಪ್ ಮಾಡಲಾಗಿತ್ತು. ಈ ನಟಿಯರೇ ಹೋಗಿ ಅವರನ್ನು ಬಿಡಿಸಿಕೊಂಡು ಬಂದಿದ್ದಾರೆ.

ಅವರೆಲ್ಲಾ ಸಾಕ್ಷಿ ಹೇಳಲು ತಯಾರಿದ್ದಾರೆ. ಕೋರ್ಟ್ ತೀರ್ಪು ನೀಡುವ ಮೊದಲೇ ಇವರೆಲ್ಲರೂ ಕೋರ್ಟ್ಗೆ ಹೋಗುವಂತೆ ಮಾಡಲು ನಟಿಯರು ಸಾಹಸ ಪಡುತ್ತಿದ್ದಾರೆ.

ಆದರೆ, ಇದು ಸಾಧ್ಯವಾಗತ್ತಾ? ಒಂದೇ ವೇಳೆ ಇವರು ಸಾಕ್ಷಿ ನುಡಿದರೆ ವಿಲನ್ಗಳು ಜೈಲುಪಾಲಾಗ್ತಾರೆ. ಹೀಗೆ ಆದರೆ ಸೀರಿಯಲ್ ಅಲ್ಲಿಗೆ ಸುಮಾರು ಮುಗಿದಂತೆ. ಆದ್ದರಿಂದ ಸುಲಭದಲ್ಲಿ ಇಷ್ಟು ಬೇಗೆ ವಿಲನ್ಗಳು ಸಿಕ್ಕಿಹಾಕಿಕೊಳ್ತಾರಾ ಎನ್ನುವುದು ಕೂಡ ಪ್ರಶ್ನೆ ಕಾಡ್ತಿದೆ.

Source link
Karna Serial: ನಟಿಯರಿಗೆ ಸಿಕ್ತು ಬಲವಾದ ಸಾಕ್ಷಿ- ಶಿಕ್ಷೆ ಆಗೋದ್ರೊಳಗೇ ಕರ್ಣನ ಕಾಪಾಡ್ತಾರಾ ಈ ನಾರಿಯರು?