ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಅಂತ್ಯದವರೆಗೂ ಚಳಿಗಾಲಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಲ್ನಿನೊ ಪರಿಣಾಮವು ಕಾಲಗಳಲ್ಲಿ ಅನಿಯಮಿತವಾಗಿ ಕಂಡುಬರುತ್ತದೆ. ಇದಕ್ಕೆ ಮಾನವ ಚಟುವಟಿಕೆಗಳು ಪ್ರಮುಖ ಕಾರಣ. ಈ ವರ್ಷ ಮಳೆಗಾಲ ವಿಸ್ತರಿಸಿದಂತೆ ವಾತಾವರಣ ಬದಲಾವಣೆಗಳು ಮುಂದುವರಿಯುತ್ತಿವೆ. ಪರಿಸರ ನಾಶವನ್ನು ತಡೆಯಲು ಸಾಮೂಹಿಕ ಪ್ರಯತ್ನಗಳು ಈಗ ಪ್ರಾರಂಭವಾಗಬೇಕು.
ಪ್ರಸ್ತುತ ಚಳಿ ಸ್ವಲ್ಪ ಮಟ್ಟಿಗೆ ಬಿದ್ದಿದ್ದರೂ, ಮುಂದಿನ ದಿನಗಳಲ್ಲಿ ಉತ್ತಮ ಚಳಿಗಾಲ ಬರುವ ನಿರೀಕ್ಷೆಯಿದೆ. ಈ ಕಾರ್ಯಕ್ರಮದಲ್ಲಿ ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಪ್ರಮುಖ ಸಲಹೆಗಳು ಇಲ್ಲಿವೆ. ಸರ್ಕಾರದ ಮಾಹಿತಿ ಅನುಮಾನದಂತೆ ಈ ವರ್ಷ ಸ್ವಲ್ಪ ಚಳಿಯ ಪ್ರಮಾಣ ಹೆಚ್ಚಾಗಬಹುದು ಎಂಬ ಅನುಮಾನ ಇದ್ದೇ ಇದೆ.
ಚಳಿಗಾಲದ ಸಾಮಾನ್ಯ ಸಮಸ್ಯೆಗಳು:
- ಚರ್ಮವು ತೇವವನ್ನು ಕಳೆದುಕೊಳ್ಳುವುದು.ಕೈ-ಕಾಲುಗಳು ಒಡೆಯುವುದು ಮತ್ತು ನೋವು. ತುಟಿಗಳು ಒಡೆಯುವುದು.
- ಕೀಲು ನೋವು ಹೆಚ್ಚಾಗುವುದು.ಹಸಿವು ಹೆಚ್ಚಾಗುವುದು.ಕೂಡಲು ಒರಟಾಗುವುದು.ನೆಗಡಿ, ಶೀತ, ಕೆಮ್ಮು.
ಚಳಿಗಾಲಕ್ಕೆ ಸೂಕ್ತ ಆಹಾರಗಳು:
ಹಾಲು, ತುಪ್ಪಮೆಂತ್ಯೆ, ಶುಂಠಿ, ಮೆಣಸಿನಕಾಯಿ, ಗೋಧಿ, ಜೋಳ, ನವಣೆ, ಬಿಸಿ ಸೂಪುಗಳು, ಲಘು ಆಹಾರ, ಸೂರ್ಯನ ಬೆಳಕಿನಲ್ಲಿ ಒಣಗಿಸಿದ ಹಣ್ಣುಗಳು (ಡ್ರೈ ಫ್ರೂಟ್ಸ್). ಚಳಿಗಾಲದಲ್ಲಿ ನೀರು ಕುಡಿಯುವುದು ಇಚ್ಛೆ ಕಡಿಮೆಯಾದರೂ, ಎಷ್ಟು ನೀರು ಕುಡಿಯುವುದು ಅತ್ಯಗತ್ಯ. ವಾತಾವರಣದಿಂದ ದೇಹದ ಲಕ್ಷಣಗಳು. ಉಷ್ಣ ಆಹಾರ ಸೇವನೆ ಪ್ರಮಾಣ
ಚರ್ಮದ ರಕ್ಷಣೆ:
- ಎಣ್ಣೆ ಅಭ್ಯಂಗ (ತೈಲ ಮಾಲಿಶ್): ಎಳ್ಳೆಣ್ಣೆಯಿಂದ ಸಂಪೂರ್ಣ ದೇಹಕ್ಕೆ ಎಣ್ಣೆ ಹಚ್ಚಿ. ಬಿಸಿ ನೀರಿನಿಂದ ಸ್ನಾನ ಮಾಡಿ. ಬಾಟಲಿಯ ಮೇಲೆ “ಆಹಾರ ದರ್ಜೆ” ಎಂದು ಬರೆದಿರುವುದನ್ನು ಪರೀಕ್ಷಿಸಿ.“ಹೊರಗಿನ ಉಪಯೋಗಕ್ಕೆ ಮಾತ್ರ” ಎಂದಿರುವ ಎಣ್ಣೆ ಬಳಸಬೇಡಿ.
- ಸಾಬೂನು ಆಯ್ಕೆ: ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್‌ಗಳ ಆಫರ್‌ಗಳಿಗೆ ಮರುಳಾಗದೆ, ಈ ಮುಂದಿನ ಅಂಶಗಳನ್ನು ಗಮನಿಸಿ ಖರೀದಿಸಿ :
- ಗ್ರೇಡ್ 1 (ಪ್ರಥಮ ದರ್ಜೆ) ಸಾಬೂನು. TFM 76% ಅಥವಾ ಅದಕ್ಕಿಂತ ಹೆಚ್ಚು. TFM (ಟೋಟಲ್ ಫ್ಯಾಟಿ ಮ್ಯಾಟರ್) ಅಂದರೆ ಸಾಬೂನಿನಲ್ಲಿರುವ ಸ್ನಿಗ್ಧತ್ವದ ಪ್ರಮಾಣ — ಹೆಚ್ಚು ಇದ್ದರೆ ಗುಣಮಟ್ಟ ಉತ್ತಮ. ಟಿವಿಗಳಿಗೆ ಮಾತ್ರ ಅವಲಂಬಿಸಬೇಡಿ.ಆಯುರ್ವೇದ ಸಾಬೂನುಗಳಲ್ಲಿಯೂ ಈ ಮಾಹಿತಿಯನ್ನು ಪರೀಕ್ಷಿಸಿ.
ಹಿರಿಯರು ಮತ್ತು ಮಕ್ಕಳು ಚಳಿ ತಾಳುವ ಶಕ್ತಿ ಕಡಿಮೆ ಇರುತ್ತದೆ.ಬೆಚ್ಚಗಿನ ಹಾಸಿಗೆ, ಬಿಸಿ ನೀರಿನ ಚೀಲ ಉಪಯೋಗಿಸಬೇಕು ರಾತ್ರಿ ತಡವಾಗಿ ಹೊರ ಹೋಗುವುದನ್ನು ತಪ್ಪಿಸಬೇಕು. ಸೂರ್ಯನ ಬೆಳಕಿನಲ್ಲಿ ದಿನಕ್ಕೆ ಕನಿಷ್ಠ 15 ನಿಮಿಷ ಕುಳಿತುಕೊಳ್ಳುವುದು.
ನಿಯಮಿತ ವ್ಯಾಯಾಮ ಏಕೆ ಮುಖ್ಯ?
ಚಳಿಗಾಲದಲ್ಲಿ ಮಲಗುವ ಆಕರ್ಷಣೆ ಹೆಚ್ಚಾದರೂ, ವ್ಯಾಯಾಮ ತಪ್ಪಬಾರದು. ಯೋಗಾಸನ, ಪ್ರಾಣಾಯಾಮ, ಸೂರ್ಯನಮಸ್ಕಾರ.ಬೆಳಿಗ್ಗೆ ಎದ್ದು ಬಿಸಿ ನೀರಿನ ಕುಟುಕು ಕುಡಿಯಿರಿ. ಧ್ಯಾನದಿಂದ ಮನಸ್ಸಿಗೆ ಶಾಂತಿ. ರಕ್ತಸಂಚಾರ ಸುಧಾರಣೆ, ದೇಹದ ಉಷ್ಣತೆ ಮತ್ತು ರೋಗನಿರೋಧಕ ಶಕ್ತಿ ವೃದ್ಧಿ.
ಮುಖ್ಯ ಎಚ್ಚರಿಕೆಗಳು:
- ಯಾವುದೇ ವಸ್ತುವಿನ ಅತಿ ಹಾನಿಕಾರಕ
- ಚಳಿಗಾಲದ ಪದ್ಧತಿಗಳನ್ನು ಅನುಸರಿಸಬೇಡಿ
- ಉತ್ಪನ್ನ ಖರೀದಿ ಮಾಹಿತಿಯನ್ನು ಓದಿ, ಜಾಹೀರಾತುಗಳಿಗೆ ನಂಬಿಕೆ ಇಡಬೇಡಿ.
ಇದನ್ನೂ ಓದಿ: ಚಿಕ್ಕ ಮಕ್ಕಳ ಕೆಮ್ಮು ಬೇಗ ಕಡಿಮೆ ಆಗಬೇಕು ಅಂದ್ರೆ ಆಯುರ್ವೇದದಲ್ಲಿ ತಿಳಿಸಿರುವ ಈ ಮದ್ದನ್ನೊಮ್ಮೆ ಟ್ರೈ ಮಾಡಿ ಮಾಡಿ
ಸಾರಾಂಶ:
- ಆಹಾರ: ಎಳ್ಳು-ಬೆಲ್ಲ, ಆಹಾರ, ಸಾಕಷ್ಟು ನೀರು
- ಚರ್ಮ: ಎಳ್ಳೆಣ್ಣೆ ಅಭ್ಯಂಗ, ಉತ್ತಮ ಸಾಬೂನು, ನೈಸರ್ಗಿಕ ಲೇಪ
- ಬಟ್ಟೆ: ಸಂಪೂರ್ಣ ಮೈ ಮುಚ್ಚುವ ಬೆಚ್ಚಗಿನ ಬಟ್ಟೆ, ಕಿವಿ ರಕ್ಷಣೆ
- ಪಾದರಕ್ಷೆ: ಬೂಟು ಮತ್ತು ಸಾಕ್ಸ್
- ವ್ಯಾಯಾಮ: ಯೋಗ, ಸೂರ್ಯನಮಸ್ಕಾರ, ಧ್ಯಾನ
- ಸೂರ್ಯನ ಬೆಳಕು: ದಿನಕ್ಕೆ ಕನಿಷ್ಠ 15 ನಿಮಿಷಗಳು D ಗಾಗಿ
- ಎಚ್ಚರಿಕೆ: ಇತಿಮಿತಿಯಲ್ಲಿ ಬಳಕೆ, ಪ್ರಕಾರ ಬದಲಾವಣೆ.
ಈ ಮಾಹಿತಿಯು ಸಾಮಾನ್ಯ ಮಾರ್ಗದರ್ಶನಕ್ಕಾಗಿ ಮಾತ್ರ. ಯಾವುದೇ ನಿರ್ದಿಷ್ಟ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದೆ.
ಲೇಖನ: ಡಾ. ರವಿಕಿರಣ ಪಟವರ್ಧನ, ಆಯುರ್ವೇದ ವೈದ್ಯ, ಶಿರಸಿ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ