ಕ್ರಿಕೆಟ್ ಲೋಕದ ಅತ್ಯಂತ ಪ್ರತಿಷ್ಠಿತ ಮತ್ತು ಅತ್ಯುನ್ನತ ಗೌರವಗಳಲ್ಲಿ ಒಂದಾದ ‘ವಿಸ್ಡನ್ ಕ್ರಿಕೆಟರ್ಸ್ ಆಫ್ ದಿ ಇಯರ್’ (ವರ್ಷದ ವಿಸ್ಡನ್ ಕ್ರಿಕೆಟಿಗರು) 2026 ರ ಸಾಲಿನ ಪಟ್ಟಿಯನ್ನು ಪ್ರಕಟಿಸಲಾಗಿದೆ. ಪ್ರತಿ ವರ್ಷ ಇಂಗ್ಲೆಂಡ್ನ ಬೇಸಿಗೆಯ ಸೀಸನ್ನಲ್ಲಿ ಅದ್ಭುತ ನೀಡಿದ ಐವರು ಆಟಗಾರರನ್ನು ಗುರುತಿಸುವ ಈ ಗೌರವದಲ್ಲಿ, ಈ ಬಾರಿಯ ಭಾರತೀಯ ಆಟಗಾರರು ಅಭೂತಪೂರ್ವ ಪ್ರಾಬಲ್ಯ ಮೆರೆದಿರುವುದು ವಿಶೇಷ.
ಈ ಮೂಲಕ ಇದೇ ಮೊದಲ ಬಾರಿಗೆ ಭಾರತದ ನಾಲ್ವರು ಆಟಗಾರರು ಜೊತೆಯಾಗಿ ‘ವಿಸ್ಡನ್ ಕ್ರಿಕೆಟರ್ಸ್ ಆಫ್ ದಿ ಇಯರ್’ ಗೌರವವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 2022ರಲ್ಲಿ ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಇಬ್ಬರು ಜೊತೆಯಾಗಿ ಐವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದೇ ದೊಡ್ಡ ಸಾಧನೆ ಮಾಡಿದೆ. ಆದರೆ ಈ ಬಾರಿ ಐವರ ಪಟ್ಟಿಯಲ್ಲಿ ನಾಲ್ವರು ಭಾರತೀಯರು ಕಾಣಿಸಿಕೊಂಡಿದ್ದಾರೆ.
2026ರ ವಿಸ್ಡನ್ ಶ್ರೇಷ್ಠ ಕ್ರಿಕೆಟಿಗರು:
2025 ರ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡವು ಟೆಸ್ಟ್ ಸರಣಿಯನ್ನು 2-2 ರಿಂದ ಡ್ರಾ ಮಾಡಿಕೊಂಡಿತ್ತು. ಈ ಸರಣಿಯಲ್ಲಿ ಭಾರತೀಯ ಆಟಗಾರರು ತೋರಿದ ಅಪ್ರತಿಮ ಪ್ರದರ್ಶನವೇ ಈ ಬಾರಿಯ ವಿಸ್ಡನ್ ಗೌರವದಲ್ಲಿ ಭಾರತದ ಪಾರುಪತ್ಯಕ್ಕೆ ಮುಖ್ಯ ಕಾರಣ. ಅದರಂತೆ ಈ ವರ್ಷದ ಪಟ್ಟಿಯಲ್ಲಿ ನಾಲ್ವರು ಭಾರತೀಯರು ಮತ್ತು ಓರ್ವ ಇಂಗ್ಲೆಂಡ್ ಆಟಗಾರ ಸ್ಥಾನ ಪಡೆದಿದ್ದಾರೆ. ಅವರೆಂದರೆ…
ಶುಭಮನ್ ಗಿಲ್ (ಭಾರತ): ಟೀಮ್ ಇಂಡಿಯಾದ ‘ಪ್ರಿನ್ಸ್’ ಎಂದು ಕರೆಯಲ್ಪಡುವ ಗಿಲ್, ಇಂಗ್ಲೆಂಡ್ ಸರಣಿಯಲ್ಲಿ ರನ್ ಮಳೆ ಹರಿಸಿದ್ದರು.
- ಪ್ರಮುಖ ಸಾಧನೆ: ಎಡ್ಜ್ಬಾಸ್ಟನ್ನಲ್ಲಿ ನಡೆದ ಎರಡನೇ ಟೆಸ್ಟ್ ಗಿಲ್ ದಾಖಲೆಯ 430 ರನ್ (ಎರಡೂ ಇನಿಂಗ್ಸ್ ಸೇರಿ) ಗಳಿಸಿದ್ದರು.
- ವಿಸ್ಡನ್ ಮೆಚ್ಚುಗೆ: ಕಠಿಣ ಇಂಗ್ಲಿಷ್ ಪರಿಸ್ಥಿತಿಯಲ್ಲಿ ಅವರ ಕ್ಲಾಸಿಕ್ ಬ್ಯಾಟಿಂಗ್ ಶೈಲಿ ಮತ್ತು ಸತತವಾಗಿ ರನ್ ಗಳಿಸುವ ಸಾಮರ್ಥ್ಯವನ್ನು ವಿಸ್ಡನ್ ಶ್ಲಾಘಿಸಿದೆ.
ರಿಷಭ್ ಪಂತ್ (ಭಾರತ): ಅಪಘಾತದ ನಂತರ ಕಮ್ಬ್ಯಾಕ್ ಮಾಡಿದ ಪಂತ್, ಇಂಗ್ಲೆಂಡ್ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದ್ದರು.
- ಪ್ರಮುಖ ಸಾಧನೆ: ಸರಣಿಯ ನಿರ್ಣಾಯಕ ಹಂತಗಳಲ್ಲಿ ವೇಗವಾಗಿ ಅರ್ಧಶತಕ ಮತ್ತು ಶತಕಗಳನ್ನು ಸಿಡಿಸಿ ಪಂದ್ಯದ ಗತಿಯನ್ನು ಬದಲಿಸಿದರು.
- ವಿಸ್ಡನ್ ಮೆಚ್ಚುಗೆ: ವಿಸ್ಡನ್ ಕೀಪಿಂಗ್ನಲ್ಲಿನ ಚುರುಕುತನ ಮತ್ತು ಒತ್ತಡದ ಸಮಯದಲ್ಲಿ ಎದುರಾಳಿ ಬೌಲರ್ಗಳ ಮೇಲೆ ಸವಾರಿ ಮಾಡುವ ಅವರ ಧೈರ್ಯಕ್ಕೆ ಈ ಗೌರವ ಸಂದಿದೆ.
ರವೀಂದ್ರ ಜಡೇಜಾ (ಭಾರತ): ವಿಶ್ವದ ನಂಬರ್ 1 ಟೆಸ್ಟ್ ಆಲ್ರೌಂಡರ್ ಆಗಿರುವ ಜಡೇಜಾ, ಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮ್ಯಾಜಿಕ್ ಬ್ಯಾಂಡ್ ಮಾಡಿದರು.
- ಪ್ರಮುಖ: ಸರಣಿಯಲ್ಲಿ 20ಕ್ಕೂ ಹೆಚ್ಚು ಸಾಧನೆಯನ್ನು ಪಡೆಯುವುದರ ಜೊತೆಗೆ, ಕೆಳಕ್ರಮದಲ್ಲಿ ಬಂದು ಉಪಯುಕ್ತ ರನ್ ಸೇರಿಸಿದ್ದರು.
- ವಿಸ್ಡನ್ ಮೆಚ್ಚುಗೆ: ಜಡೇಜಾ ಅವರ ಫೀಲ್ಡಿಂಗ್ ಮತ್ತು ಪಂದ್ಯದ ಯಾವುದೇ ಹಂತದಲ್ಲಿ ಬ್ರೇಕ್-ಥ್ರೂ ನೀಡುವ ಅವರ ಚಾಕಚಕ್ಯತೆಯನ್ನು ವಿಶೇಷವಾಗಿ ಗುರುತಿಸಲಾಗಿದೆ.
ಮೊಹಮ್ಮದ್ ಸಿರಾಜ್ (ಭಾರತ): ವೇಗದ ದಾಳಿಯ ಆಧಾರಸ್ತಂಭವಾಗಿರುವ ಸಿರಾಜ್, ಭಾರತದ ಇಂಗ್ಲೆಂಡ್ ಬ್ಯಾಟರ್ಗಳಿಗೆ ಸಿಂಹಸ್ವಪ್ನವಾಗಿದ್ದರು.
- ಪ್ರಮುಖ: ಲಾಾರ್ಡ್ಸ್ ಮತ್ತು ಓವಲ್ ಮೈದಾನಗಳಲ್ಲಿ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿಗಳ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದರು.
- ವಿಸ್ಡನ್ ಮೆಚ್ಚುಗೆ: ಹೊಸ ಚೆಂಡಿನಲ್ಲಿ ಪಡೆಯಲು ಮತ್ತು ಸುದೀರ್ಘ ಸ್ಪೆಲ್ ಸೆವೆಯುವ ಅವರ ಎನರ್ಜಿಯನ್ನು ವಿಸ್ಡನ್ ಕೊಂಡಾಡಿದೆ.
ಹಸೀಬ್ ಹಮೀದ್ (ಇಂಗ್ಲೆಂಡ್): ಈ ಪಟ್ಟಿಯಲ್ಲಿರುವ ಏಕೈಕ ಇಂಗ್ಲಿಷ್ ಆಟಗಾರ ಹಸೀಬ್. ಇಂಗ್ಲೆಂಡ್ ಆಟಗಾರನನ್ನು ಕಮ್ಬ್ಯಾಕ್ ಹೀರೊ ಎಂದೆಂದಿಗೂ ಕರೆಯಬಹುದು.
- ಪ್ರಮುಖ: ಕೌಂಟಿ ಚಾಂಪಿಯನ್ಶಿಪ್ನಲ್ಲಿ ನ್ಯಾಟಿಂಗ್ಹ್ಯಾಮ್ಶೈರ್ ಪರ 1,258 ರನ್ ಗಳಿಸಿ ತಂಡವನ್ನು ಗಳಿಸಿದರು.
- ವಿಸ್ಡನ್ ಮೆಚ್ಚುಗೆ: ಇಂಗ್ಲೆಂಡ್ ದೇಶೀಯ ಕ್ರಿಕೆಟ್ನಲ್ಲಿ ಅವರು ತೋರಿದ ಸ್ಥಿರ ಪ್ರದರ್ಶನ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಮರಳಲು ಅವರು ನಡೆಸಿದ ಹೋರಾಟವನ್ನು ಪರಿಗಣಿಸಿ ಈ ಗೌರವವನ್ನು ನೀಡಿದೆ.
ಇತರ ಪ್ರಮುಖ ಪ್ರಶಸ್ತಿಗಳು (2026):
ವಿಸ್ಡನ್ ಈ 163ನೇ ಆವೃತ್ತಿಯಲ್ಲಿ ಭಾರತದ ಇತರ ಆಟಗಾರರಿಗೂ ದೊಡ್ಡ ಗೌರವಗಳು ಸಂದಿವೆ. ಅವರೆಂದರೆ…
- ವಿಶ್ವದ ಪ್ರಮುಖ ಮಹಿಳಾ ಕ್ರಿಕೆಟರ್: ದೀಪ್ತಿ ಶರ್ಮಾ (ಭಾರತ) – 2025ರ ಮಹಿಳಾ ಏಕದಿನ ಸಾಧನೆಯಲ್ಲಿ ಅತಿ ಹೆಚ್ಚು ಸಾಧನೆ ಪಡೆದವರಿಗೆ ಈ ಗೌರವ ಕೊಡುಗೆ..
- ವಿಶ್ವದ ಪ್ರಮುಖ ಟಿ20 ಕ್ರಿಕೆಟ್: ಅಭಿಷೇಕ್ ಶರ್ಮಾ (ಭಾರತ) – ಒಂದೇ ವರ್ಷದಲ್ಲಿ 1,000ಕ್ಕೂ ಹೆಚ್ಚು ಟಿ20 ರನ್ ಗಳಿಸಿದ ಸಾಧನೆಗೆ ಈ ಗೌರವ ಸಲ್ಲಿಸಲಾಗಿದೆ.
- ವಿಶ್ವದ ಪ್ರಮುಖ ಪುರುಷ ಕ್ರಿಕೆಟಿಗ: ಮೈಕೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ) – 2025 ರಲ್ಲಿ 17. 32 ಸರಾಸರಿಯಲ್ಲಿ 55 ಟೆಸ್ಟ್ ಪಡೆದಿದ್ದಕ್ಕಾಗಿ ಈ ಗೌರವವನ್ನು ನೀಡಲಾಗುತ್ತದೆ.
ವಿರಾಟ್ ಕೊಹ್ಲಿ ಈ ಗೌರವಕ್ಕೆ ಪಾತ್ರರಾಗಿದ್ದಾರಾ?
ವಿರಾಟ್ ಕೊಹ್ಲಿ ಹಲವು ಬಾರಿ ವಿಸ್ಡನ್ ಗೌರವಕ್ಕೆ ಪಾತ್ರರಾಗಿದ್ದಾರೆ. ಅದರಲ್ಲೂ ಅವರು 2010 ರಲ್ಲಿ ಇತ್ತೀಚೆಗೆ ಏಕದಿನ ಕ್ರಿಕೆಟಿಗನಾಗಿ ಆಯ್ಕೆಯಾಗಿದ್ದರು ಎಂಬುದು ವಿಶೇಷ. ಅದರಂತೆ ಯಾವಾಗ ಕೊಯ್ಲು
- ಪ್ರಸ್ತುತ ಏಕದಿನ ಕ್ರಿಕೆಟಿಗ (2010s): 2021 ರಲ್ಲಿ, ವಿಸ್ಡನ್ ಅಲ್ಮನ್ಯಾಕ್ ವಿರಾಟ್ ಕೊಹ್ಲಿ ಅವರನ್ನು 2010-2019 ರ ಅತ್ಯುತ್ತಮ ಏಕದಿನ (ODI) ಕ್ರಿಕೆಟಿಗ ಎಂದು ಗೌರವಿಸಲಾಯಿತು.
- ವರ್ಷದ ಮುಂಚೂಣಿ ಕ್ರಿಕೆಟಿಗ: ಸತತವಾಗಿ ಮೂರು ಬಾರಿ (2016, 2017, ಮತ್ತು 2018) ವಿಸ್ಡನ್ನ ‘ವರ್ಷದ ಮುಂಚೂಣಿ ಕ್ರಿಕೆಟಿಗ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
- ವಿಸ್ಡನ್ ವರ್ಷದ ಕ್ರಿಕೆಟಿಗರು: 2018ರ ಅವರ ಅದ್ಭುತ ಪ್ರದರ್ಶನಕ್ಕಾಗಿ (ಇಂಗ್ಲೆಂಡ್ ಪ್ರವಾಸ ಸೇರಿದಂತೆ) ವಿರಾಟ್ ಕೊಹ್ಲಿ ಅವರನ್ನು ವಿಸ್ಡನ್ ವರ್ಷದ ಐವರು ಕ್ರಿಕೆಟಿಗರ ಪಟ್ಟಿಗೆ ಸೇರಿಸಲಾಯಿತು.
ಆಯ್ಕೆಯ ಮುಖ್ಯವೇನು?
ವಿಸ್ಡನ್ ‘ವರ್ಷದ ಐವರು ಕ್ರಿಕೆಟಿಗರು’ ಪ್ರಶಸ್ತಿಯನ್ನು ಮುಖ್ಯವಾಗಿ ಕಳೆದ ಇಂಗ್ಲೆಂಡ್ ಕ್ರಿಕೆಟ್ ಸೀಸನ್ನಲ್ಲಿ (ಇಂಗ್ಲಿಷ್ ಬೇಸಿಗೆ) ಆಟಗಾರರು ತೋರಿದ ಪ್ರದರ್ಶನದ ಆಧಾರದ ಮೇಲೆ. ಇದಕ್ಕಾಗಿ ಮೂರು ವಿಭಾಗಗಳಲ್ಲಿ ಆಟಗಾರರ ಪ್ರದರ್ಶನವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅಂದರೆ…
- ಇಂಗ್ಲೆಂಡ್ಗೆ ಪ್ರವಾಸ ಕೈಗೊಂಡ ತಂಡಗಳು: ಇಂಗ್ಲೆಂಡ್ ನೆಲದಲ್ಲಿ ಆ ಸೀಸನ್ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ವಿದೇಶಿ ಆಟಗಾರರು. (ಉದಾಹರಣೆಗೆ: ಈ ಬಾರಿ ಭಾರತ ತಂಡ ಇಂಗ್ಲೆಂಡ್ನಲ್ಲಿ ಆಡಿದ ಕಾರಣ ಭಾರತೀಯರಿಗೆ ಹೆಚ್ಚು ಅವಕಾಶ ಸಿಕ್ಕಿದೆ).
- ಇಂಗ್ಲೆಂಡ್ ದೇಶೀಯ ಕ್ರಿಕೆಟ್ (ಕೌಂಟಿ ಕ್ರಿಕೆಟ್): ಇಂಗ್ಲೆಂಡ್ನ ಆಟಗಾರರು ಅಥವಾ ಅಲ್ಲಿನ ಕೌಂಟಿ ಕ್ರಿಕೆಟ್ನಲ್ಲಿ ಆಡುವ ವಿದೇಶಿ ಆಟಗಾರರು ಆ ಸೀಸನ್ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದರು. (ಉದಾಹರಣೆಗೆ: ಈ ಪಟ್ಟಿಯಲ್ಲಿರುವ ಹಸೀಬ್ ಹಮೀದ್ ಅವರು ಕೌಂಟಿ ಕ್ರಿಕೆಟ್ ಸಾಧನೆಯ ಆಧಾರದ ಮೇಲೆ ಆಯ್ಕೆಯಾಗಿದ್ದಾರೆ).
- ವಿಶ್ವದ ಪ್ರಮುಖ ಕ್ರಿಕೆಟಿಗ: ವಿಸ್ಡನ್ ನೀಡುವ ‘ವಿಶ್ವದ ಪ್ರಮುಖ ಕ್ರಿಕೆಟಿಗ’ ಎಂಬ ಪ್ರತ್ಯೇಕ ಪ್ರಶಸ್ತಿಗೆ ಜಗತ್ತಿನಾದ್ಯಂತ ನಡೆದ ಎಲ್ಲಾ ಪಂದ್ಯಗಳ ಸಾಧನೆಯನ್ನು ನಡೆಸಲಾಯಿತು. ಈ ಬಾರಿ ಪ್ರಶಸ್ತಿಯನ್ನು ಪಡೆದ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್.