
ರಾಯಚೂರು, ಮಾರ್ಚ್ 30: ಮಗುವಿಗೆ ಹಾಲುಣಿಸಿದ ಕೆಲವೇ ಕ್ಷಣಗಳಲ್ಲಿ ಅನುಮಾನಾಸ್ಪದವಾಗಿ ತಾಯಿ ಹೆಣವಾಗಿ (ಸಾವು) ಪತ್ತೆಯಾದ ನಗರದ ಐಬಿ ಕಾಲೋನಿಯಲ್ಲಿ ಘಟನೆ ನಡೆದಿದೆ. ವಿದ್ಯಾ (30) ಮೃತ ತಾಯಿ. ಗಂಡ ಮಂಜುನಾಥ್, ಅತ್ತೆ ಕವಿತಾ ನೇಣುಬಿಗಿದು ಕೊಲೆಗೈದಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ರಾಯಚೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಡಿವೈಎಸ್ ಪಿ ಶಾಂತವೀರ್ ನೇತೃತ್ವದಲ್ಲಿ ತನಿಖೆ ನಡೆದಿದೆ.
ನಡೆದಿದ್ದೇನು?
ಕಳೆದ ಎರಡು ವರ್ಷಗಳ ಹಿಂದೆ ವಿದ್ಯಾ ಮತ್ತು ಮಂಜುನಾಥ್ ವಿವಾಹವಾಗಿದೆ. ದಂಪತಿಗೆ 11 ತಿಂಗಳ ಮಗು ಕೂಡ ಇದೆ. ನಗರದ ಉಪ ವಿಜ್ಞಾನ ಕೇಂದ್ರದಲ್ಲಿ ವಿದ್ಯಾ ಕಾರ್ಯನಿರ್ವಹಿಸುತ್ತದೆ. ಮದುವೆ ಆದಾಗಿನಿಂದ ವರದಕ್ಷಿಣೆಗಾಗಿ ಗಂಡ ಮತ್ತು ಅತ್ತೆ ಪೀಡಿಸುತ್ತಿದ್ದರು. 30 ಗ್ರಾಂ ಚಿನ್ನಾಭರಣ, ಅರ್ಧ ಕೆಜಿ ಬೆಳ್ಳಿ ಆಭರಣವನ್ನ ವಿದ್ಯಾ ಕುಟುಂಬ ವರದಕ್ಷಿಣೆಯಾಗಿ ನೀಡಿದ್ದರು.
ಇದನ್ನೂ ಓದಿ: ಜಗದ್ಗುರು ಶಿವಾನಂದ ಮಠ ಕಟ್ಟಿದ್ದ ಶಿಕ್ಷಕ ಕಮ್ ಸ್ವಾಮೀಜಿ ಆತ್ಮಹತ್ಯೆ, ಕಾರಣ ನಿಗೂಢ
ನಿನ್ನೆ ಸಂಜೆ ಪತಿ ಮಂಜುನಾಥ್ ಕಂಠಪೂರ್ತಿ ಕುಡಿದು ಬಂದು ವಿದ್ಯಾಳನ್ನ ಕೆಲಸದಿಂದ ಕರೆತಂದಿದ್ದ. ಆ ಬಳಿಕ ಮನೆಯಲ್ಲಿ 11 ತಿಂಗಳ ಹಸುಗೂಸಿಗೆ ಹಾಲುಣಿಸಿದ ವಿದ್ಯಾ, ಇದೇ ವೇಳೆ ಗಂಡನ ಕುಡಿತದ ಬಗ್ಗೆ ಅತ್ತೆಗೆ ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ. ಇದಾದ ಕೆಲಹೊತ್ತಲ್ಲೇ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾ ಮೃತದೇಹ ಪತ್ತೆ ಆಗಿದೆ. ಗಂಡ ಮತ್ತು ಅತ್ತೆಯೇ ನೇಣುಬಿಗಿದು ಕೊಲೆಗೈದ ಆರೋಪ ಕೇಳಿಬಂದಿದೆ. ಸದ್ಯ ಮಂಜುನಾಥ್ ಮತ್ತು ಕವಿತಾ ವಿರುದ್ಧ ದೂರು ದಾಖಲಾಗಿದೆ.
ಖಾಸಗಿ ಆಸ್ಪತ್ರೆ ಮೇಲಿಂದ ಬಿದ್ದು ಬಾಣಂತಿ ಸಾವು
ಖಾಸಗಿ 3ನೇ ಮಹಡಿ ಮೇಲಿಂದ ಬಿದ್ದು ಬಾಣಂತಿ ಸಾವನ್ನಪ್ಪಿರುವಂತಹ ರಾಯಚೂರು ಆಸ್ಪತ್ರೆ ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ. ಇದೇ ಮಾರ್ಚ್ 26ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಾನ್ವಿ ಪಟ್ಟಣದ ಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಿದ್ದು ಐದು ದಿನದ ಬಾಣಂತಿ ವಾಸವಿ (22) ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಸೇರಿ ರಾಜ್ಯದಲ್ಲಿ ಮೂರು ಭೀಕರ ರಸ್ತೆ ಅಪಘಾತ: ಆರು ಬಂದಿ ಸಾವು
ಬಾಣಂತಿ ವಾಸವಿ ಐದು ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ಅನಾರೋಗ್ಯಕ್ಕೆ ಒಳಗಾದ ಮಗುವಿಗೆ ಲಕ್ಷ್ಮಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಣಂತಿ ಸಾವಿಗೂ ಮುನ್ನ ಮಹಡಿ ಹತ್ತುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾನ್ವಿ ಪೊಲೀಸ್ ಠಾಣಾ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.