ತಿಂಗಳಿಗೆ 1.6 ಲಕ್ಷ ರೂ ನೀಡಿ ಮುದ್ದಿನ ನಾಯಿಯನ್ನು ಕಿಂಡರ್ ಸ್ಕೂಲ್‌ಗೆ ಹಾಕಿದ ಮಹಿಳೆ, ಕೆಲಸದ ಕಾರಣದಿಂದ ತಾನು ಸಾಕಿದ ನಾಯಿ ಮನೆಯಲ್ಲಿ ಏಕಾಂಗಿಯಾಗಿರುವುದು ಬೇಡ ಎಂದು ಕಿಂಡರ್‌ಗಾರ್ಟನ ಸ್ಕೂಲ್‌ಗೆ ಸೇರಿಸಿದ್ದಾರೆ.

ಪೋಷಕರು ಇಬ್ಬರು ಕೆಲಸದಲ್ಲಿ ಬ್ಯೂಸಿ ಇದ್ದಾಗ ಮಕ್ಕಳನ್ನು ಮೊಂಟೆಸರಿ, ಕಿಂಡರ್‌ಗಾರ್ಟನ್ ಸೇರದಂತೆ ಹಲವು ಡೇ ಕೇರ್ ಸೆಂಟರ್‌ಗೆ ಸೇರಿಸುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಸಾಕು ನಾಯಿಯನ್ನು ನಾಯಿಗಳ ಕಿಂಡರ್‌ಗಾರ್ಟನ್ ಸ್ಕೂಲ್‌ಗೆ ಸೇರಿಸಿದ್ದಾರೆ. ಇದಕ್ಕಾಗಿ ಬರೊಬ್ಬರಿ 1.6 ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದಾಳೆ.

ದಕ್ಷಿಣ ಚೀನಾದ ಮಹಿಳೆಯ 6 ತಿಂಗಳ ನಾಯಿಯನ್ನು ಕಿಂಡರಗಾರ್ಟನ್ ಸ್ಕೂಲ್‌ಗೆ ಸೇರಿಸಿದ್ದಾಳೆ. ಕೆಲಸಕ್ಕೆ ಹೋಗುವ ಕಾರಣ 8 ರಿಂದ 10 ಗಂಟೆ ನಾಯಿ ಮನೆಯಲ್ಲಿ ಏಕಾಂಗಿಯಾಗುತ್ತಿದೆ. ಹೀಗಾಗಿ ಮಹಿಳೆ ಮನೆಯಿಂದ ಕೆಲ ದೂರದಲ್ಲಿರುವ ಕಿಂಡರ್‌ಗಾರ್ಟನ್ ನಾಯಿ ಸ್ಕೂಲ್‌ಗೆ ಸೇರಿಸಿದ್ದಾಳೆ.

ಕಿಂಡರ್‌ಗಾರ್ಟನ್‌ನಲ್ಲಿ ನಾಯಿಗಳಿಗೆ ತಕ್ಕ ಸಮಯಕ್ಕೆ ಆಹಾರ ಸೇರಿದಂತೆ ಇತರ ಎಲ್ಲಾ ಸೌಲಭ್ಯಗಳನ್ನು ನೀಡಲಾಗಿತ್ತು. ಎರಡು ದಿನಕ್ಕೊಮ್ಮೆ ಹೆಲ್ತ್ ಚೆಕ್‌ಅಪ್ ಎಲ್ಲವೂ ಮಾಡಲಾಗುತ್ತದೆ. ನಾಯಿಗೆ ಸ್ನಾನ, ಕ್ರೀಡೆಗಳು ಲಭ್ಯವಿದೆ. ಇತರ ನಾಯಿಗಳ ಜೊತೆ ಬೆರೆಯಲು ಸಮಯ ನೀಡಲಾಗುತ್ತದೆ.

ಮೊಬೈಲ್ ಮೂಲಕ ರಿಯಲ್ ಟೈಮ್ ಲೈವ್ ಲಭ್ಯವಿದೆ. ಹೀಗಾಗಿ ನಾಯಿ ಏನು ಮಾಡುತ್ತಿದೆ, ಕೊಟ್ಟ ಆಹಾರ ತಿಂದಿದೆಯಾ, ಸಿಬ್ಬಂದಿಗಳು ಸರಿಯಾಗಿ ನೋಡಿಕೊಳ್ಳುತ್ತಿದ್ದಾರಾ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ನೋಡಲು ಸಾಧ್ಯವಿದೆ. ಇದೀಗ ಮಹಿಳೆ ನೆಮ್ಮದಿಯಾಗಿ ಆಫೀಸ್ ಕೆಲಸಕ್ಕೆ ತೆರಳಿ ಬರುತ್ತಿರುವುದಾಗಿ ಹೇಳಿದ್ದಾರೆ.

ನಾಯಿಗಳ ಕಿಂಡರ್‌ಗಾರ್ಟನ್‌ಗೆ ನಾಯಿಗಳನ್ನು ಕರೆದುಕೊಂಡು ಹೋಗುವುದು, ಮರಳಿ ಕರೆತರುವುದು ಎರಡನ್ನೂ ಮಾಲೀಕರೇ ಮಾಡಬೇಕು. ಹೀಗಾಗಿ ಮಹಿಳೆ ಕಚೇರಿಗೆ ತೆರಳುವಾಗ ನಾಯಿಯನ್ನು ಸ್ಕೂಲ್‌ನಲ್ಲಿ ಬಿಡುತ್ತಾರೆ. ಬಳಿಕ ಕಚೇರಿಯಿಂದ ಮರಳುವಾಗ ಕರೆತರುತ್ತಾರೆ.

ಕಿಂಡರ್‌ಗಾರ್ಟನ್‌ಗೆ ಮಾಲೀಕರೇ ಬಿಡಬೇಕು

Source link
ತಿಂಗಳಿಗೆ 1.6 ಲಕ್ಷ ರೂ ನೀಡಿ ಮುದ್ದಿನ ನಾಯಿಯನ್ನು ಕಿಂಡರ್ ಸ್ಕೂಲ್‌ಗೆ ಹಾಕಿದ ಮಹಿಳೆ