
ಬೆಂಗಳೂರು, ಏಪ್ರಿಲ್ 13: ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಕಿರುಕುಳ ಆರೋಪದ ಪ್ರಕರಣವು ಇದೀಗ ಮಹತ್ವದ ತಿರುವನ್ನು ಪಡೆದುಕೊಂಡಿದೆ. ಸ್ವಾಮೀಜಿ ಮೇಲೆ ಆರೋಪ ಹೊರಿಸಿರುವ ಮಹಿಳೆಯು ಇದೀಗ ಯು-ಟರ್ನ್ ಹೊಡೆದಿದ್ದಾರೆ. ವಿಡಿಯೋ ರಿಲೀಸ್ ಮಾಡಿರುವ ಅವರು, ತಾನು ಯಾವುದೇ ರೀತಿಯ ದೌರ್ಜನ್ಯಕ್ಕೆ ಒಳಗಾಗಿಲ್ಲ, ತನ್ನ ಸ್ವಾಮೀಜಿ ನಡುವೆ-ಭಕ್ತಿಯ ಸಂಬಂಧವಿದೆ ಎಂದು ವಿಡಿಯೊ ಮೂಲಕ ಸ್ಪಷ್ಟಪಡಿಸಿದ್ದಾರೆ. ನನ್ನ ಹೆಸರಿನಲ್ಲಿ ಯಾರೋ ದೂರು ದಾಖಲಿಸಿದ್ದಾರೆ. ಅದ ನನಗೂ ಯಾವುದೇ ಸಂಬಂಧವಿಲ್ಲ. ಜೊತೆಗೆ ಏಪ್ರಿಲ್ 6ರಂದು ದೂರು ನೀಡಿರುವುದು ಯಾರು ಅಂತಾ ಗೊತ್ತಿಲ್ಲ. ಅದೊಂದು ನಂಬು ಸುಳ್ಳು, ಆ ದೂರನ್ನು ಯಾರೂ ಬೇಡ. ನಾನು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾಲ್ಕು ದಿನಗಳ ನಂತರ ಬಂದು ಎಲ್ಲವನ್ನು ವಿವರವಾಗಿ ಹೇಳುತ್ತೇನೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.