
ತಂದೆ-ತಾಯಿಗೂ ಮಕ್ಕಳು ಮದುವೆಯಾಗಬೇಕು, ಅವರ ಜೀವನವನ್ನು ಅವರು ಕಟ್ಟಿಕೊಳ್ಳಬೇಕೆಂಬ ಕನಸಿರುತ್ತದೆ. ಮಕ್ಕಳಿಗೂ ತಮ್ಮ ಕಾಲ ಮೇಲೆ ನಾವು ನಿಲ್ಲಬೇಕು ಚೆನ್ನಾಗಿ ಸಂಪಾದನೆ ಮಾಡಬೇಕು ಮದುವೆ ಏನಿದ್ದರೂ ಆಮೇಲೆ ಎಂಬಂತೆ ಇರುತ್ತದೆ. ಆದರೆ ಮಕ್ಕಳಿಗೆ ಅಪ್ಪ-ಅಮ್ಮನ ನೋಯಿಸಲೂ ಇಷ್ಟ ಇರುವುದಿಲ್ಲ. ಅಂಥಾ ಸಮಯದಲ್ಲಿ ಎಂಥಾ ಆಲೋಚನೆಗಳು ಬರುತ್ತವೆ ನೋಡಿ.
ಯುವತಿಯೊಬ್ಬಳು ಮದುವೆ ಒತ್ತಡದಿಂದ ತಪ್ಪಿಸಿಕೊಳ್ಳಲು ತಲೆ ಬೋಳಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ವೈಯಕ್ತಿಕ ಸ್ವಾತಂತ್ರ್ಯ ಮತ್ತು ಹೆಣ್ಣುಮಕ್ಕಳ ಮೇಲೆ ಇರಿಸಲಾಗಿರುವ ಸಾಮಾಜಿಕ ನಿರೀಕ್ಷೆಗಳ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
@kajals_move_ ಎಂಬುವವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಈ ಕ್ಲಿಪ್ ಅನ್ನು ಸುಮಾರು 3.7 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಅನೇಕ ನೆಟ್ಟಿಗರು ಅವರ ಜೀವನದ ಮೇಲೆ ಹಿಡಿತ ಸಾಧಿಸುವ ನಿರ್ಧಾರವನ್ನು ಶ್ಲಾಘಿಸಿದ್ದಾರೆ.
ತನಗೆ ಕೂದಲೆಂದರೆ ತುಂಬಾ ಇಷ್ಟ ನನಗೆ ಕೂದಲು ಕತ್ತರಿಸಲು ಇಷ್ಟವಾಗಲಿಲ್ಲ, ಆದರೆ ಮನೆಯಲ್ಲಿ ಮದುವೆಯಾಗುತ್ತಾಳೆ ಎಂದು ಒತ್ತಡ ಹೇರಿದ್ದರಿಂದ ಕೂದಲು ಕತ್ತರಿಸಿಕೊಂಡಿದ್ದಾಳೆ ಎಂದು ಯುವತಿ ಹೇಳಿದ್ದಾಳೆ. ಹಲವಾರು ಕಾಮೆಂಟ್‌ಗಳು ತನ್ನ ಭವಿಷ್ಯಕ್ಕೆ ಆದ್ಯತೆ ನೀಡುವ ಅವಳ ದೃಢ ಸಂಕಲ್ಪವನ್ನು ಶ್ಲಾಘಿಸುತ್ತವೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ