ಶಿವಮೊಗ್ಗ, (ಅಕ್ಟೋಬರ್ 26): ಇಬ್ಬರು ಪರಸ್ಪರ ಪ್ರೀತಿಸಿ ಎರಡು ವರ್ಷಗಳ ಹಿಂದೆ ಅಷ್ಟೇ ಮದುವೆಯಾಗಿದ್ದರು. ಪ್ರೀತಿಯ ಮದುವೆಗೊಂಡು ಒಂದೂವರೆ ವರ್ಷದ ಮಗು ಕೂಡ ಇದೆ. ಸ್ವರ್ಗಕ್ಕೆ ಕಿಚ್ಚು ಹಚ್ಚುವಂಥಾ ಸಂಸಾರ ಇದ್ದಾಗ ಮಹಿಳೆ ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ದಾವಣಗೆರೆ ಜಿಲ್ಲೆಯ ಚನ್ನಗರಿ ತಾಲ್ಲೂಕಿನ ಹೊನ್ನೆಬಾಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಜಿಶಾನ್ (23) ಮತ್ತು ಜುನೇರಾ ಕೌಸರ್ (19) ಇಬ್ಬರು ಪ್ರೀತಿಸಿ ಮದುವೆಯಾಗಿ ಎರಡು ವರ್ಷವಾಗಿತ್ತು. ಈ ನಡುವೆ ಪತಿ ಪತ್ನಿ ನಡುವೆ ಮನಸ್ತಾಪ ಜಗಳ ಶುರುವಾಗಿತ್ತು. ಆದರೆ, ಪ್ರೀತಿ ನಂಬಿ ಬಂದಿದ್ದ ಜುನೇರಾ ಕೌಸರ್ ಏಕಾಏಕಿ ಹೆಣವಾಗಿದ್ದು, ಈ ಸಾವಿನ ಸುತ್ತು ಅನುಮಾಗಳು ಹುಟ್ಟಿಕೊಂಡಿವೆ.
ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದಲ್ಲಿ ವಾಸವಿದ್ದರು. ಚನ್ನಗಿರಿ ಪಟ್ಟಣದ ಜಿನೇರಾ ಕೌಸರ್ ಕಾಲೇಜ್ಗೆ ಹೋಗುತ್ತಿದ್ದಾಗ ಜಿಶಾನ್ ಪರಿಚಯವಾಗಿತ್ತು. ಇಬ್ಬರಿಗೂ ಪ್ರೇಮಾಂಕುರವಾಗಿ ಕೊನೆಗೆ ಪೋಷಕರನ್ನು ಒಪ್ಪಿಸಿ ಇಬ್ಬರು ಮದುವೆಯಾಗಿದ್ದರು. ಪತಿ ಜಿಶಾನ್ ಅಡಿಕೆ ವ್ಯಾಪಾರಸ್ಥನಾಗಿದ್ದ. ಮುದ್ದಾದ ಯುವತಿಯ ಜೊತೆ ಸಂಸಾರ ಮಾಡಬೇಕಿದ್ದ ಪತಿಯು ಪದೇ ಪದೇ ಜಗಳವಾಡುತ್ತಿದ್ದ. ಪತಿಯ ಕಾಟ ತಾಳಲಾರದೆ ಪತ್ನಿಯು ಕಳೆದ ವಾರ ತವರು ಮನೆಗೆ ಹೋಗಿದ್ದಳು. ಹೆತ್ತವರು ಗಂಡನ ಮನೆಗೆ ಬಂದು ಗುರುವಾರ ರಾಜೀ ಪಂಚಾಯತಿ ಮಾಡಿದರು. ರಾಜೀ ಪಂಚಾಯಿತಿ ಆಗಿ ಮೂರೇ ದಿನಕ್ಕೆ ಮಗಳು ಸಾವಿನ ಮನೆ ಸೇರಿದ್ದಾಳೆ. ಅವನು ಮಾಡಿದ ವಂಚನೆ ಮೋಸದಿಂದ ಮಗಳು ಸಾವು ಆಗಿದ್ದಾನೆ. ಮಗಳ ಸಾವಿನ ಕುರಿತು ಸೂಕ್ತ ತನಿಖೆಯಾಗಬೇಕೆಂದು ಹೆತ್ತವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ: ಮಹಾರಾಷ್ಟ್ರದ ಯುವಕನನ್ನ ಬೀದರ್ ನಲ್ಲಿ ಹೇಗೆ ಹೊಡೆದು ಕಂಡ್ರು ನೋಡಿ
ಪ್ರೀತಿಸಿ ಮದುವೆಯಾದ ಪತ್ನಿ ಜೊತೆ ಪತಿ ನಿತ್ಯ ಗಲಾಟೆ ಮಾಡಿ ವಿನಾಕಾರಣ ಕಿರುಕುಳ ನೀಡುತ್ತಿದ್ದ. ತಾನು ಮತ್ತೊಂದು ಯುವತಿಯನ್ನು ಲವ್ ಮಾಡುತ್ತಿದ್ದೇನೆ. ಅವಳ ಜೊತೆ ಮದುವೆ ಆಗುತ್ತೇನೆಂದು ಪತ್ನಿಗೆ ಮಾನಸಿಕ ದೈಹಿಕ ಕಿರುಕುಳ ಕೊಡುತ್ತಿದ್ದ. ಈ ನಡುವೆ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಇದರ ಬಳಿಕ ಕೌಸರ್ ನೇಣು ಬಿಗಿದ ಸ್ಥಿತಿಯಲ್ಲಿ ಬೆಡ್ ರೂಂನಲ್ಲಿ ಇದೆ. ಪತಿ ಮತ್ತು ಆತನ ಕುಟುಂಬಸ್ಥರು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಇಂದು (ಅಕ್ಟೋಬರ್ 26) ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಪತ್ನಿಯು ಕಾಣಿಸಿಕೊಂಡಿದ್ದಾಳೆ.
ಪತ್ನಿ ಶಿವನೊಗ್ಗದಲ್ಲಿ ಕಾಣಿಸಿಕೊಂಡಿರುವುದು ಖಚಿತವಾಗುತ್ತಿದ್ದಂತೆ ಪತಿಯು ಚನ್ನಗಿರಿ ಠಾಣೆಗೆ ಹೋಗಿ ಶರಣಾಗತಿಯಾಗಿದ್ದಾನೆ. ಮೃತಳ ದೇಹದ ತುಂಬೆಲ್ಲ ಹಲ್ಲೆ ಮಾಡಿರುವ ಗಾಯಗಳಿವೆ. ಇದನ್ನು ಗಮನಿಸಿದ ಮೃತ ಕುಟುಂಬಸ್ಥರು ಪತಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಚನ್ನಗಿರಿ ಪೊಲೀಸರು ಅನುಮಾನಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.