ಬಿಸಿಸಿಐ ಐತಿಹಾಸಿಕ ನಿರ್ಧಾರ; ವರ್ಷಾಂತ್ಯದಲ್ಲಿ ಮಹಿಳಾ ಆಟಗಾರ್ತಿಯರಿಗೆ ಭರ್ಜರಿ ಗಿಫ್ಟ್

ಬಿಸಿಸಿಐ ಐತಿಹಾಸಿಕ ನಿರ್ಧಾರ; ವರ್ಷಾಂತ್ಯದಲ್ಲಿ ಮಹಿಳಾ ಆಟಗಾರ್ತಿಯರಿಗೆ ಭರ್ಜರಿ ಗಿಫ್ಟ್


ಭಾರತ ಮಹಿಳಾ ಕ್ರಿಕೆಟ್ ತಂಡ ಇತ್ತೀಚೆಗಷ್ಟೇ ನಡೆದಿದ್ದ 2025 ರ ಏಕದಿನದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಮೊಟ್ಟ ಮೊದಲ ಬಾರಿಗೆ ಎತ್ತಿ ಹಿಡಿದಿತ್ತು. ಇದಾದ ಬಳಿಕ ಬಿಸಿ ಕೂಡ ಮಹಿಳಾ ತಂಡಕ್ಕೆ ಭಾರಿ ಮೊತ್ತದ ಬಹುಮಾನ ಘೋಷಿಸಿತ್ತು. ಇದೆಲ್ಲದರ ನಡುವೆ ಇದೀಗ ಬಿಸಿ ಭಾರತದ ಮಹಿಳಾ ಆಟಗಾರ್ತಿಯರಿಗೆ ಮಹತ್ವದ ಉಡುಗೊರೆಯನ್ನು ನೀಡಲಾಗಿದೆ. ಅದೇನೆಂದರೆ ಬಿಸಿ, ದೇಶೀಯ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಪಂದ್ಯದ ಶುಲ್ಕದಲ್ಲಿ ಭಾರಿ ಮೊತ್ತ ಮಾಡಿದೆ. ಈಗ, ದೇಶೀಯ ಕ್ರಿಕೆಟ್‌ನಲ್ಲಿ ಮಹಿಳಾ ಆಟಗಾರ್ತಿಯರ ಪಂದ್ಯದ ಶುಲ್ಕವು ಪುರುಷ ಆಟಗಾರರಿಗೆ ಸಮಾನವಾಗಿದೆ.

ಮಹಿಳಾ ಆಟಗಾರ್ತಿಯರಿಗೆ ಬಿಸಿ ಮಾಡಿದ ಗಿಫ್ಟ್

ಮಹಿಳಾ ಕ್ರಿಕೆಟ್‌ಗೆ ಸಾಕಷ್ಟು ಶ್ರಮಿಸುತ್ತಿರುವ ಬಿಸಿ ಈಗ, ಮಹಿಳಾ ಆಟಗಾರ್ತಿಯರ ಪಂದ್ಯದ ಅಧಿಕಾರಿಗಳ ಪಂದ್ಯದ ಶುಲ್ಕವನ್ನು ದ್ವಿಗುಣಗೊಳಿಸಿದ್ದು, ದೇಶೀಯ ಕ್ರಿಕೆಟ್‌ನಲ್ಲಿ ಪಂದ್ಯದ ಶುಲ್ಕವನ್ನು ನೀಡಲು ಮುಂದಾಗಿದೆ. ಇದರ ಪ್ರಕಾರ, ದೇಶೀಯ ಏಕದಿನ ಮತ್ತು ಬಹು-ದಿನ (ದೀರ್ಘ ಸ್ವರೂಪ) ಪಂದ್ಯಗಳಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಮಹಿಳಾ ಆಟಗಾರ್ತಿಯರು ದಿನಕ್ಕೆ 50,000 ರ ಪಂದ್ಯ ಶುಲ್ಕವನ್ನು ಪಡೆಯಲಿದ್ದಾರೆ. ಜೊತೆಗೆ ಮೀಸಲು ಆಟಗಾರ್ತಿಯರು ಪ್ರತಿ ಪಂದ್ಯಕ್ಕೆ 25,000 ರೂ. ಪಂದ್ಯ ಶುಲ್ಕ ಪಡೆಯಲಿದ್ದಾರೆ. ಟಿ20 ಪಂದ್ಯಗಳ ಪ್ಲೇಯಿಂಗ್ 11 ರಲ್ಲಿ ಆಟಗಾರ್ತಿಯರು 25,000 ರೂ. ವೇತನ ಪಡೆದರೆ, ಮೀಸಲು ಆಟಗಾರ್ತಿಯರು ಪ್ರತಿ ಪಂದ್ಯಕ್ಕೆ 12,500 ರೂ. ವೇತನ ಪಡೆಯಲಿದ್ದಾರೆ. ಈ ಹಿಂದೆ, ಹಿರಿಯ ಮಹಿಳಾ ಆಟಗಾರ್ತಿಯರು 11ನಲ್ಲಿದ್ದಾರೆ, ಅವರಿಗೆ 20,000 ರೂ. ವೇತನ ಮತ್ತು ಮೀಸಲು ಆಟಗಾರ್ತಿಯರು ಪ್ರತಿ ಪಂದ್ಯಕ್ಕೆ 10,000 ರೂ. ವೇತನ ಪಡೆಯಲು.

ಜೂನಿಯರ್ ಮಟ್ಟದಲ್ಲಿ ಬದಲಾವಣೆ

ಜೂನಿಯರ್ ಮಟ್ಟದ ಪಂದ್ಯಾವಳಿಗಳಲ್ಲಿಯೂ ಸಮಾನತೆಯನ್ನು ತರಲಾಗಿದೆ. ಬಹು-ದಿನ ಅಥವಾ ಏಕದಿನ ಪಂದ್ಯಗಳಲ್ಲಿ, ಪ್ಲೇಯಿಂಗ್ 11 ರಲ್ಲಿ ಆಟಗಾರ್ತಿಯರಿಗೆ ದಿನಕ್ಕೆ 25,000 ರೂ. ವೇತನ ಮತ್ತು ಮೀಸಲು ಆಟಗಾರರಿಗೆ 12,500 ರೂ. ವೇತನ ಸಿಗಲಿದೆ. ಜೊತೆಗೆ ಟಿ20 ಪಂದ್ಯಗಳಲ್ಲಿ ಆಡುವ 11 ಆಟಗಾರ್ತಿಯರಿಗೆ 12,500 ರೂ. ವೇತನ ಮತ್ತು ಮೀಸಲು ಆಟಗಾರರಿಗೆ 6,250 ವೇತನ ಸಿಗಲಿದೆ.

ಅಂಪೈರ್‌, ಪಂದ್ಯದ ಅಧಿಕಾರಿಗಳ ವೇತನ ಸಂಖ್ಯೆ

ಮತ್ತೊಂದೆಡೆ, ಅಂಪೈರ್‌ಗಳು ಮತ್ತು ಮ್ಯಾಚ್ ರೆರಿಗಳು ಸೇರಿದಂತೆ ಪಂದ್ಯದ ಅಧಿಕಾರಿಗಳ ವೇತನದ ಮೊತ್ತವಾಗಿದೆ. ದೇಶೀಯ ಪಂದ್ಯಾವಳಿಗಳಲ್ಲಿ ಪಂದ್ಯಗಳಿಗೆ ಅಂಪೈರ್‌ಗಳು ಮತ್ತು ಮ್ಯಾಚ್ ರೆಫರಿಗಳಿಗೆ ದಿನಕ್ಕೆ 40,000 ರೂ. ವೇತನ ಸಿಗಲಿದೆ. ನಾಕೌಟ್ ಪಂದ್ಯಗಳಿಗೆ, ದೈನಂದಿನ ವೇತನ 50,000 ರಿಂದ 60,000 ಇರಲಿದೆ. ಈ ವರ್ಷದ ಅಡಿಯಲ್ಲಿ, ರಣಜಿ ಟ್ರೋಫಿ ಪಂದ್ಯಾವಳಿಗಳಲ್ಲಿ ಅಂಪೈರ್ ಮಾಡುವವರು ಈಗ ಪ್ರತಿ ಪಂದ್ಯಕ್ಕೆ 1.60 ಲಕ್ಷ ರೂ. ವೇತನ ಪಡೆಯುತ್ತಾರೆ. ಹಾಗೆಯೇ ನಾಕೌಟ್ ಪಂದ್ಯಗಳಲ್ಲಿ ಅಂಪೈರ್ ಮಾಡುವವರು ಪ್ರತಿ ಪಂದ್ಯಕ್ಕೆ 2.5 ಲಕ್ಷದಿಂದ 3 ಲಕ್ಷದವರೆಗೆ ವೇತನ ಪಡೆಯಲಿದ್ದಾರೆ.

ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *