ಬೆಂಗಳೂರು, ಫೆ.24: ಈ ಹುಡುಗಿಯರು ಹೊಸ ಫೋನ್, ಬಟ್ಟೆ, ಅಥವಾ ಯಾವುದೇ ವಸ್ತು ತೆಗೆದುಕೊಂಡರೂ ಯಾರೂ ಗಿಫ್ಟ್ ಕೊಟ್ಟದ್ದು ಎಂಬ ಪ್ರಶ್ನೆಗಳು ಬರುತ್ತವೆ. ಆರ್ಥಿಕವಾಗಿ ಎಷ್ಟೇ ಸದೃಢರಾದರೂ, ಅವರ ದುಬಾರಿ ವಸ್ತುಗಳ ಖರೀದಿಯನ್ನು ಸಮಾಜವು ಅವರ ಜೀವನದಲ್ಲಿರುವ ಪುರುಷನ ಯಶಸ್ಸಿಗೆ ಹೋಲಿಸುತ್ತಾರೆ. ಇದೀಗ ಮಹಿಳೆಯರು ಸ್ವಂತವಾಗಿ ಏನನ್ನು ಖರೀದಿಸಲು ಎಂಬ ಪ್ರಶ್ನೆ ಇದೆ. ಈ ಪ್ರಶ್ನೆಯನ್ನು ಮಾಡಿರುವುದು ಬೆಂಗಳೂರಿನ ಅನು ಎಂಬುವವರು. ಅನು ಅವರು ಇತ್ತೀಚೆಗೆ ತಮ್ಮ ಸ್ವಂತ ದುಡಿಮೆಯ ಹಣದಿಂದ ಹೊಸ iPhone ಒಂದನ್ನು ಖರೀದಿಸಿದ್ದರು. ಅದನ್ನು ನೋಡಿದ ಅವರ ಐದು ವರ್ಷಗಳ ಹಳೆಯ ಸ್ನೇಹಿತ, “ಸಖತ್ ಆಗಿದ್ದಾನೆ ಗುರು, ನಿನ್ನ ಬಾಯ್ಫ್ರೆಂಡ್ ಕೊಡಿಸಿದ್ದಾ?” ಎಂದು ಕೇಳಿದ್ದಾನೆ.
ಗೆಳಯನ ಮಾತಿಗೆ ಸಿಟ್ಟಾದ ಅನು, ಅಲ್ಲ ನಿನಗೆ ಯಾಕೆ ನಾನು ಖರೀದಿ ಮಾಡಬಹುದೆಂದು ಅನ್ನಿಸಿಲ್ಲ ಎಂದು ಕೇಳಿದ್ದಾರೆ. ಅದಕ್ಕೆ ಆ ಸ್ನೇಹಿತ, “ನಿನ್ನವನು ಶ್ರೀಮಂತನಿದ್ದಾನೆ, ನೀನು ಅವನನ್ನು ಆರಿಸಿಕೊಂಡೆ ಅಲ್ವಾ?” ಎಂದು ಉಡಾಫೆಯಿಂದ ಉತ್ತರಿಸಿದ್ದಾನೆ. ಅನು ಅವರು ಹೇಳಿರುವ ಪ್ರಕಾರ, ಅವನಿಗೆ ಕೆಲಸ ಇಲ್ಲದಾಗ, ಕಡೆಯಲ್ಲಾ ಇವರೇ ಬಿಲ್ಲು ಹೋದರು. ಇಷ್ಟಾದರೂ ಮಹಿಳೆಯ ಸ್ವಾವಲಂಬನೆಯನ್ನು ಒಪ್ಪದೆ, ಬಾಯ್ಫ್ರೆಂಡ್ ಶ್ರೀಮಂತಿಕೆಯ ಬಗ್ಗೆ ಮಾತನಾಡಿದ್ದು ಅನು ಅವರಿಗೆ ಬೇಸರ ಉಂಟು ಮಾಡಿದೆ.
ಇದನ್ನೂ ಓದಿ: ಬೆಂಗಳೂರು ಜೀವನ ಇಷ್ಟೊಂದು ದುಬಾರಿನಾ?; ತಿಂಗಳ ಖರ್ಚು 70 ಸಾವಿರ ರೂ., ಪಟ್ಟಿ ಬಿಚ್ಚಿಟ್ಟ ಯುವಕ
ಇಲ್ಲಿದೆ ವೈರಲ್ ಪೋಸ್ಟ್;
ನಾನು ನನ್ನ ಮೊದಲ ಐಫೋನ್ ಖರೀದಿಸಿದಾಗ ನಾವಿಬ್ಬರೂ ಡೇಟಿಂಗ್ ಮಾಡುತ್ತಿದ್ದೆವು. ಎರಡು ದಿನಗಳ ನಂತರ ನಾನು ಸ್ನೇಹಿತನನ್ನು ಭೇಟಿಯಾದೆ ಮತ್ತು ಅವನ ಮೊದಲ ಹೇಳಿಕೆ “ಸಾಹಿ ಹೈ ಭಾಯ್, ಬಂದೇ ನೆ ಫೋನ್ ದಿಲಾ ದಿಯಾ”
ನಾನು ಅವನನ್ನು ಕುತೂಹಲದಿಂದ ನೋಡಿದೆ ಮತ್ತು ಇದು ನನ್ನ ಹುಡುಗನಿಂದ ಉಡುಗೊರೆ ಎಂದು ಅವನು ಏಕೆ ಭಾವಿಸಿದನು ಮತ್ತು ನಾನು ತಂದದ್ದು ಅಲ್ಲ ಎಂದು ಕೇಳಿದೆ. ಅವರ ಉತ್ತರ… pic.twitter.com/w4XjBGFhOQ
– ಅನು (@ ಎಸ್ಕೇಪ್ಪ್ಲೇಸ್__) ಫೆಬ್ರವರಿ 23, 2026
ನಮ್ಮ ಸಾಧನೆಗಳ ಹಿಂದೆ ಒಬ್ಬ ಪುರುಷನ ಎಂದು ಬಿಂಬಿಸುವುದು ಯಾವಾಗ ನಿಲ್ಲುತ್ತದೆ? ಎಂದು ಪ್ರಶ್ನೆ ಮಾಡಿದ್ದಾರೆ. ಅನು ಅವರ ಈ ಪೋಸ್ಟ್ 45,000 ಹೆಚ್ಚು ವೀಕ್ಷಣೆ ಪಡೆದಿದ್ದು, ಇವರ ಈ ಪೋಸ್ಟ್ಗೆ ಮಿಶ್ರ ಪ್ರಕ್ರಿಯೆಗಳು ಬಂದಿದೆ. “ಮಹಿಳೆಯರು ಮನೆ, ಕಾರು ಕೊಂಡರೂ ಅವರ ಗಂಡ ಅಥವಾ ತಂದೆ ಕೊಡಿಸಿದ್ದು ಎಂದುಕೊಳ್ಳುತ್ತಾರೆ. ಈ ಪಿತೃಪ್ರಧಾನ ಬದಲಾಗಬೇಕು” ಎಂದು ಮಹಿಳೆಯರು ಬೆಂಬಲ ಹೇಳುತ್ತಾರೆ. “ಇತ್ತೀಚಿನ ದಿನಗಳಲ್ಲಿ ಅನೇಕ ಯುವತಿಯರು ದುಬಾರಿ ಉಡುಗೊರೆಗಳನ್ನು ನಿರೀಕ್ಷಿಸುತ್ತಾರೆ, ಇಲ್ಲದಿದ್ದರೆ ಸ್ನೇಹಿತ ಹಾಗೆ ಹೇಳಬಹುದೇ” ಎಂದು ಮತ್ತೊಬ್ಬರು ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ