Headlines

ಪೆಟ್ರೋಲ್ ಉಳಿಸಲು ವರ್ಕ್ ಫ್ರಂ ಹೋಂ? ಕೋವಿಡ್ ಸಂದರ್ಭದ ರೂಲ್ಸ್ ಮತ್ತೆ ಜಾರಿ ಸಾಧ್ಯತೆ!

ಪೆಟ್ರೋಲ್ ಉಳಿಸಲು ವರ್ಕ್ ಫ್ರಂ ಹೋಂ? ಕೋವಿಡ್ ಸಂದರ್ಭದ ರೂಲ್ಸ್ ಮತ್ತೆ ಜಾರಿ ಸಾಧ್ಯತೆ!


ಪೆಟ್ರೋಲ್ ಉಳಿಸಲು ವರ್ಕ್ ಫ್ರಂ ಹೋಂ? ಕೋವಿಡ್ ಸಂದರ್ಭದ ರೂಲ್ಸ್ ಮತ್ತೆ ಜಾರಿ ಸಾಧ್ಯತೆ!

ಜನವರಿ, ಮಾರ್ಚ್ 21: ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಎದುರಾದ ತುರ್ತು ಪರಿಸ್ಥಿತಿ ಮತ್ತೆ ಸೃಷ್ಟಿಯಾಗಿದೆಯಾ? ಇಂಥದ್ದೊಂದು ಪ್ರಶ್ನೆಗೆ ಇದೀಗ ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (IEA) ನೀಡಿರುವ ಶಿಫಾರಸುಗಳು. ಸದ್ಯ ಇರಾನ್, ಇಸ್ರೇಲ್, ಅಮೆರಿಕ ಯುದ್ಧದ ಜಾಗತಿಕ ಇಂಧನ ಬಿಕ್ಕಟ್ಟಿನ ಸನ್ನಿವೇಶ ಸೃಷ್ಟಿಯಾಗಿದೆ. ಇದನ್ನು ಮತ್ತು ಇಂಧನ ಗ್ಯಾಸ್ ಬಳಕೆ ಕಡಿತಗೊಳಿಸುವಂತೆ ಐಐಎ ಪ್ರಮುಖ ಶಿಫಾರಸುಗಳನ್ನು ಮಾಡಿದೆ. ಒಳಗೆ ಲಾಕ್‌ಡೌನ್ ಪರಿಸ್ಥಿತಿಯನ್ನು ಸೃಷ್ಟಿಸಬಹುದು ಎಂಬ ಕಳವಳಗಳ ನಡುವೆ ಈ ಕ್ರಮಗಳನ್ನು ಸೂಚಿಸಲಾಗಿದೆ. ಪೆಟ್ರೋಲ್ ಉಳಿಸಲು ಮನೆಯಿಂದಲೇ ಕೆಲಸ ಮಾಡುವುದನ್ನು ಪ್ರೋತ್ಸಾಹಿಸುವುದು (ವರ್ಕ್ ಫ್ರಂ), ಇಂಧನ ಬಳಕೆ ಕಡಿಮೆ ಮಾಡುವ ದೃಷ್ಟಿಯಿಂದ ಕನಿಷ್ಠ ವಾಹನಗಳ ವೇಗ ಮಿತಿಯನ್ನು 10 ಕಿಲೋಮೀಟರ್ ಕಡಿತಗೊಳಿಸಲು ಸಂಸ್ಥೆ ಸಲಹೆ ನೀಡಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆಯನ್ನು ತಗ್ಗಿಸಲು ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸಲು, ಮತ್ತು ದೊಡ್ಡ ನಗರಗಳಲ್ಲಿ ಸಮ-ಬೆಸ ಮಾದರಿಯಲ್ಲಿ ಕಾರುಗಳ ಸಂಚಾರವನ್ನು ನಿರ್ಬಂಧಿಸಲು ಐಐಎ ಶಿಫಾರಸು ಮಾಡಿದೆ. ಕಾರುಗಳಲ್ಲಿ ಪ್ರಯಾಣಿಸುವಾಗ ಶೇರಿಂಗ್ ಮೂಲಕ ಪ್ರಯಾಣ ಹೆಚ್ಚಿಸುವಂತೆ ಪ್ರೇರೇಪಿಸಲಾಗಿದೆ. ವಾಣಿಜ್ಯ ವಾಹನಗಳ ದಕ್ಷ ಚಾಲನೆಗಾಗಿ ಲೋಡ್ ಆಪ್ಟಿಮೈಸೇಶನ್ ಮತ್ತು ಉತ್ತಮ ನಿರ್ವಹಣೆಯನ್ನು ಪ್ರೋತ್ಸಾಹಿಸಲು ತಿಳಿಸಲಾಗಿದೆ.

ಎಲ್ಪಿಜಿ ಬಳಕೆಗಾಗಿ, ಅಡುಗೆಯಂತಹ ಅಗತ್ಯಗಳಿಗೆ ಮಾತ್ರ ಎಲ್ಪಿಜಿಯನ್ನು ಬಳಸಬೇಕು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಸಾರಿಗೆ ಮತ್ತು ಇತರ ಕೆಲಸಗಳಿಗೆ ಎಲ್‌ಪಿಜಿ ಬಳಕೆ ಬೇಡ ಎಂದು ಹೇಳಲಾಗಿದೆ. ವಿಮಾನ ಪ್ರಯಾಣವನ್ನು ಸಾಧ್ಯವಾದಷ್ಟು ತಪ್ಪಿಸುವಂತೆ ಮತ್ತು ಎಲ್ಪಿಜಿ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಕರೆಂಟ್ ಸ್ಟಾವ್ ಮತ್ತು ಪರ್ಯಾಯ ಆಯ್ಕೆಗಳನ್ನು ಪ್ರೋತ್ಸಾಹಿಸಲು ಸೂಚಿಸಲಾಗಿದೆ. ಕೈಗಾರಿಕೆಗಳಲ್ಲಿ ಎಲ್ಪಿಜಿ ಬದಲಿಗೆ ನೈಸರ್ಗಿಕ ಅನಿಲ, ಬ್ಯೂಟನ್, ಪ್ರೋಪೇನ್, ಇಥೇನ್ ಮುಂತಾದ ಅನಿಲಗಳನ್ನು ಬಳಸಲು ಐಐಎ ಸಲಹೆ ನೀಡಿದೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *