World AIDS Day 2025: ಅಸುರಕ್ಷಿತ ದೈಹಿಕ ಸಂಪರ್ಕ ಒಂದೇ ಅಲ್ಲ, ಇವು ಕೂಡ ಏಡ್ಸ್‌ ರೋಗಕ್ಕೆ ಕಾರಣ

World AIDS Day 2025: ಅಸುರಕ್ಷಿತ ದೈಹಿಕ ಸಂಪರ್ಕ ಒಂದೇ ಅಲ್ಲ, ಇವು ಕೂಡ ಏಡ್ಸ್‌ ರೋಗಕ್ಕೆ ಕಾರಣ


ಹ್ಯೂಮನ್ ಇಮ್ಯೂನೊ ಡಿಫಿಷಿಯೆನ್ಸಿ ವೈರಸ್ (ಎಚ್ಐವಿ) ನಿಂದ ಬರುವ ಏಡ್ಸ್‌ ಮಾರಣಾಂತಿಕ ಕಾಯಿಲೆಯಾಗಿದೆ. ಆರಂಭಿಕ ಹಂತದಲ್ಲಿ ಸರಿಯಾದ ಚಿಕಿತ್ಸೆ ನೀಡದಿದ್ದರೆ, ಈ ಕಾಯಿಲೆ ಮಾರಣಾಂತಿಕವಾಗಿ ಪರಿಣಮಿಸುತ್ತದೆ. ಈ ರೋಗದ ಬಗ್ಗೆ ಹಲವು ತಪ್ಪು ಕಲ್ಪನೆಗಳಿವೆ ಮತ್ತು ಈ ಕಾಯಿಲೆಯಿಂದ ಬಳಲುತ್ತಿರುವವರನ್ನು ಸಮಾಜದಲ್ಲಿ ಬಹಳ ಕೀಳರಿಮೆಯಿಂದ ನೋಡುವುದಿಲ್ಲ. ಯಾವುದೇ ಏಡ್ಸ್ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು, ಈ ರೋಗದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸುವುದಿಲ್ಲ.

ವಿಶ್ವ ಏಡ್ಸ್ ದಿನದ ಇತಿಹಾಸವೇನು?

ವಿಶ್ವ ಏಡ್ಸ್ ದಿನವನ್ನು 1988 ರಲ್ಲಿ ಆಚರಿಸಲಾಯಿತು. 1981 ರಲ್ಲಿ ಮೊದಲ ಬಾರಿಗೆ ಏಡ್ಸ್ ಪ್ರಕರಣವೊಂದು ವರದಿಯಾದ ನಂತರದ ವರ್ಷಗಳಲ್ಲಿ ಹಲವಾರು ಜನರು ಈ ಕಾಯಿಲೆಗೆ ತುತ್ತಾಗಿ ಪ್ರಾಣವನ್ನು ಕಳೆದುಕೊಂಡರು. ಆದ್ದರಿಂದ ಈ ಗಂಭೀರ ಕಾಯಿಲೆಯ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಮತ್ತು ಸಮಾಜದಲ್ಲಿ ಈ ಕಾಯಿಲೆಗೆ ಸಂಬಂಧಿಸಿದ ತಪ್ಪು ಕಲ್ಪನೆಗಳನ್ನು ತೊಡೆದುಹಾಕಬೇಕು ಎಂಬ ಉದ್ದೇಶದಿಂದ 1987 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಕೆಲಸ ಮಾಡುತ್ತಿರುವ ಥಾಮಸ್ ನೆಟರ್ ಮತ್ತು ಜೇಮ್ಸ್ ಡಬ್ಲ್ಯೂ ಬನ್ ಈ ಎರಡು ಏಡ್ಸ್ ದಿನವನ್ನು ಆಚರಿಸುವ ಬಗ್ಗೆ ಪ್ರಸ್ತಾಪವನ್ನು ಮಾಡುತ್ತದೆ. ಅದರ ಮಾರನೇ ವರ್ಷವೇ ವಿಶ್ವ ಆರೋಗ್ಯ ಸಂಸ್ಥೆಯು ಈ ದಿನವನ್ನು ವಿಶ್ವ ಮಟ್ಟದಲ್ಲಿ ಆಚರಿಸಲು ಘೋಷಿಸಿತು.

ವಿಶ್ವ ಏಡ್ಸ್ ದಿನದ ಮಹತ್ವವೇನು?

  • ವಿಶ್ವ ಏಡ್ಸ್ ದಿನವು ಎಚ್‌ಐವಿ ಸೋಂಕು, ಅದರ ಕಾರಣಗಳು, ಲಕ್ಷಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ.
  • ಇದಲ್ಲದೆ ಈ ದಿನವು ಏಡ್ಸ್ ರೋಗಕ್ಕೆ ತುತ್ತಾದವರು ಸಮಾಜದಲ್ಲಿ ಯಾವುದೇ ತಾರತಮ್ಯವಿಲ್ಲದೆ ಸುರಕ್ಷಿತ ಜೀವನ ನಡೆಸಬೇಕು ಮತ್ತು ಈ ಮಾರಕ ರೋಗದ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ತೊಡೆದುಹಾಕಬೇಕು ಎಂಬ ಉದ್ದೇಶವನ್ನು ಸಹ ಹೊಂದಿದೆ.

ಇದನ್ನೂ ಓದಿ: ಬ್ರಾ ಸರಿಯಾಗಿ ಧರಿಸಿರುವುದು ಕೂಡ ಬ್ರೆಸ್ಟ್ ಕ್ಯಾನ್ಸರ್ ಗೆ ಕಾರಣವೇ? ಇಲ್ಲಿದೆ ಡಾ. ಹೇಮಂತ್ ಸಲಹೆ

ಹೆಚ್.ಐ.ವಿ ಸೋಂಕು ಹೇಗೆ ಹರಡುತ್ತದೆ?

ಹೆಚ್.ಐ.ವಿ ಸೋಂಕು ಹರಡಲು, ಏಡ್ಸ್ ರೋಗಕ್ಕೆ ಅಸುರಕ್ಷಿತ ದೈಹಿಕ ಸಂಪರ್ಕ ಮಾತ್ರವೇ ಕಾರಣ ಎಂಬ ತಪ್ಪು ಕಲ್ಪನೆಯಿದೆ. ಆದರೆ ಈ ಸೋಂಕು ಹರಡಲು ಇನ್ನೂ ಹಲವಾರು ಕಾರಣಗಳಿವೆ.

  • ಸೋಂಕು ತಗುಲಿರುವ ವ್ಯಕ್ತಿಯ ಜೊತೆಗೆ ಸಂಪರ್ಕ ಮಾಡುವುದರಿಂದಲೂ ಈ ಕಾಯಿಲೆ ಬರುತ್ತದೆ.
  • ಸೋಂಕು ತಗುಲಿದ ವ್ಯಕ್ತಿಯ ರಕ್ತವನ್ನು ಇನ್ನೊಬ್ಬ ವ್ಯಕ್ತಿ ದಾನವಾಗಿ ಪಡೆದರೆ, ಆ ರಕ್ತದ ಮೂಲಕ ವ್ಯಕ್ತಿಯ ದೇಹಕ್ಕೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ.
  • ಸೋಂಕಿತ ವ್ಯಕ್ತಿಗೆ ಬಳಸಿದ ಸಿರಿಂಜ್‌ಗಳು ಅಥವಾ ಇತರ ಇಂಜೆಕ್ಷನ್ ಉಪಕರಣಗಳನ್ನು ಇತರ ವ್ಯಕ್ತಿಗೆ ಬಳಸಿದಾಗ ಸೋಂಕು ಹರಡುತ್ತದೆ.
  • ಹೆ.ಐ.ವಿ ಸೋಂಕಿತ ತಾಯಿಯಿಂದ ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯ ನಂತರ ಹಾಲುಣಿಸುವ ಸಮಯದಲ್ಲಿ ಮಗುವಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ.
  • ಟ್ಯಾಟೂ ಹಾಕಿಸಿಕೊಳ್ಳುವುದರಿಂದಲೂ ಹೆಚ್.ಐ.ವಿ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಅಂದರೆ ಒಬ್ಬರಿಗೆ ಬಳಸಿದ ಸೂಜಿಯನ್ನು ಇತರರಿಗೆ ಬಳಸಿದಾಗ ಇದರಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *