ಕ್ಯಾನ್ಸರ್ (ಕ್ಯಾನ್ಸರ್) ಎಂಬ ಮಹಾಮಾರಿ ದೇಶಾದ್ಯಂತ ಹರಡಿದೆ. ಗಾಳಿಯಿಂದ ನೀರು, ಆಹಾರ ಎಲ್ಲವೂ ಕಲುಷಿತವಾಗಿದ್ದು, ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ. ಈ ರೋಗ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಅದು ಜೀವಕ್ಕೆ ಅಪಾಯಕಾರಿಯಾಗಬಲ್ಲದು ಎಂಬುದು ತಿಳಿದ ವಿಚಾರ. ಅದಕ್ಕಾಗಿಯೇ ಈ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಕ್ಯಾನ್ಸರ್ ದಿನವನ್ನು ಪ್ರತಿ ವರ್ಷ ಫೆಬ್ರವರಿ 4 ರಂದು ಆಚರಿಸಲಾಗುತ್ತದೆ. ಯೂನಿಯನ್ ಫಾರ್ ಇಂಟರ್ನ್ಯಾಷನಲ್ ಕ್ಯಾನ್ಸರ್ ನಿಯಂತ್ರಣ (ಯುಐಸಿಸಿ) ಜಾಗತಿಕ ಕ್ಯಾನ್ಸರ್ ಪ್ರಕರಣಗಳನ್ನು ಕಡಿಮೆ ಮಾಡಲು ಮತ್ತು ರೋಗಿಗಳಿಗೆ ಬೆಂಬಲ ನೀಡಲು ಈ ದಿನದಂದು ಜಾಗತಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯ್ಕೆ ಮಾಡಲಾಗುತ್ತದೆ.
ವಿಶ್ವ ಕ್ಯಾನ್ಸರ್ ದಿನದ ಇತಿಹಾಸ
ಸಾಮಾನ್ಯವಾಗಿ ಈ ದಿನವನ್ನು ಪ್ರತಿ ವರ್ಷ ಫೆಬ್ರವರಿ 4 ರಂದು ಆಚರಿಸಿಕೊಂಡು ಬರಲಾಗುತ್ತಿದೆ. 2000 ಫೆಬ್ರವರಿ 4 ರಂದು ವಿಶ್ವ ಶೃಂಗಸಭೆಯಲ್ಲಿ ವಿಶ್ವ ಕ್ಯಾನ್ಸರ್ ದಿನವು ಅಸ್ತಿತ್ವಕ್ಕೆ ಬಂದಿತು. ಪ್ಯಾರಿಸ್ ನಲ್ಲಿ ನಡೆದ ಶೃಂಗಸಭೆಯಲ್ಲಿ ಯುನಿಯನ್ ಇಂಟರ್ ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ (ಯುಐಸಿ) ಮೂಲಕ ವಿಶ್ವ ಕ್ಯಾನ್ಸರ್ ದಿನದ ಆಚರಣೆಯನ್ನು ಜಾರಿಗೆ ತರಲಾಯಿತು. ಈ ದಿನದ ಆಚರಣೆ ರೋಗದ ಬಗ್ಗೆ ಜಾಗೃತಿ ಮೂಡಿಸಿ, ಅದನ್ನು ಸರಿಯಾದ ಸಮಯದಲ್ಲಿ ಪತ್ತೆ ಹಚ್ಚಿ, ತಡೆಗಟ್ಟುವ ಕ್ರಮಗಳ ಬಗ್ಗೆ ತಿಳಿದುಕೊಳ್ಳುವ ಉದ್ದೇಶವನ್ನು ಹೊಂದಿದೆ.
ಇದನ್ನೂ ಓದಿ: ವಿಶ್ವ ಕುಷ್ಠರೋಗ ದಿನ 2026: ಜನವರಿ 30 ರಂದು ವಿಶ್ವ ಕುಷ್ಠ ರೋಗ ದಿನವನ್ನು ಆಚರಿಸುವುದು ಏಕೆ?
ಕ್ಯಾನ್ಸರ್ ರೋಗಕ್ಕೆ ಈ ಅಂಶಗಳು:
ಮಹಾಮಾರಿ ಕ್ಯಾನ್ಸರ್ ರೋಗ ಬರಲು ಇಂತಹ ನಿರ್ದಿಷ್ಟವಾದ ಕಾರಣವಿಲ್ಲವಾದರೂ ಕೂಡ ಬದಲಾಗುತ್ತಿರುವ ನಮ್ಮ ಜೀವನಶೈಲಿ, ಆಹಾರ ಪದ್ಧತಿ ಇದಕ್ಕೆ ಪೂರಕ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ತುಂಬಾಕಿನ ಸೇವನೆ, ಧೂಮಪಾನ, ಮದ್ಯಪಾನ, ಆಹಾರಪದ್ಧತಿ, ಎ ಹಾಗೂ ಸಿ ಆಹಾರದ ಕೊರತೆ, ಹಾರ್ಮೋನು ಅಸಮತೋಲನ ರಾಸಾಯನಿಕ ಸೌಂದರ್ಯವರ್ಧಕಗಳ ಅತಿಯಾದ ಬಳಕೆ, ಇದೆಲ್ಲದರ ಜೊತೆಗೆ ಅನುವಂಶಿಕವಾಗಿ ಕ್ಯಾನ್ಸರ್ ರೋಗ ಬರುವ ಸಾಧ್ಯತೆ ಹೆಚ್ಚು. ಆದರೆ ಪ್ರಾರಂಭದಲ್ಲಿ ಕ್ಯಾನ್ಸರ್ ರೋಗ ಲಕ್ಷಣಗಳನ್ನು ಪತ್ತೆ ಹಚ್ಚಿ, ಚಿಕಿತ್ಸೆ ನೀಡಿದರೆ ಮಹಾಮಾರಿ ರೋಗದಿಂದ ಸ್ವಲ್ಪ ಮಟ್ಟಿಗೆ ಪಾರಾಗಬಹುದು. ಇವುಗಳ ಬಗ್ಗೆ ತಿಳಿದುಕೊಂಡ, ಆರಂಭದಲ್ಲಿಯೇ ಲಕ್ಷಣಗಳನ್ನು ಪತ್ತೆ ಮಾಡಿ ಇದರಿಂದ ಪಾರಾಗುವುದು ಉತ್ತಮ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 6:32 pm, ಮಂಗಳವಾರ, 3 ಫೆಬ್ರವರಿ 26