ಡಾ. ರವಿಕಿರಣ ಪಟವರ್ಧನ
ಪ್ರತಿ ವರ್ಷ ಫೆಬ್ರವರಿ 10 ರಂದು ವಿಶ್ವದಾದ್ಯಂತ ವಿಶ್ವ ದ್ವಿದಳ ಧಾನ್ಯ ದಿನವನ್ನು ಆಚರಿಸದಿದ್ದರೆ. ದ್ವಿದಳ ಧಾನ್ಯಗಳ ಪೌಷ್ಟಿಕ, ಪರಿಸರ ಮತ್ತು ಆರ್ಥಿಕ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ಜನರಿಗೆ ತಿಳಿಸುವ ಉದ್ದೇಶದಿಂದ ಸಂಯುಕ್ತ ರಾಷ್ಟ್ರಸಂಘದ ಮಹಾಸಭೆ 2018ರಲ್ಲಿ ಈ ದಿನವನ್ನು ಪ್ರಕಟಿಸಲಾಯಿತು. 2019ರಲ್ಲಿ ಮೊದಲ ಬಾರಿಗೆ ಆಚರಣೆ ಪ್ರಾರಂಭವಾಯಿತು. ಇದಕ್ಕೂ ಮೊದಲು 2016 ಅಂತರಾಷ್ಟ್ರೀಯ ದ್ವಿದಳ ಧಾನ್ಯ ವರ್ಷದಲ್ಲಿ ಆಚರಿಸಲಾಯಿತು, ಅದರ ಯಶಸ್ಸಿನ ಮುಂದುವರಿಕೆಯೇ ಈ ವಿಶೇಷ ದಿನ. ಸಾವಿರಾರು ವರ್ಷಗಳಿಂದ ಮಾನವ ಆಹಾರ ಸಂಸ್ಕೃತಿಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಈ ಧಾನ್ಯಗಳು ಇಂದು ಆರೋಗ್ಯಕರ ಜೀವನಶೈಲಿಯ ಅವಿಭಾಜ್ಯ ಅಂಗಗಳಾಗಿವೆ.
ಲೆಗ್ಯೂಮಿನೋಸೆ (ಲೆಗ್ಯೂಮಿನೋಸೇ) ಕುಟುಂಬಕ್ಕೆ ಸೇರಿದ ಸಸ್ಯಗಳ ಖಾದ್ಯ ಬೀಜಗಳನ್ನು ದ್ವಿದಳ ಧಾನ್ಯಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಸುಲಭವಾಗಿ ಸಂಗ್ರಹಿಸಬಹುದು ಹಾಗೂ ಮಾನವ ಮತ್ತು ಪಶು ಆಹಾರವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಭಾರತದಲ್ಲಿ ತೊಗರಿ, ಹೆಸರು, ಕಡಲೆ, ಉದ್ದು, ಮಸೂರ, ಅವರೆಕಾಳು, ಹುರುಳಿ, ಅಲಸಂದೆ, ರಾಜ್ಮಾ ಮತ್ತು ಸೋಯಾಬೀನ್ಸ್ ಮುಂತಾದ ಧಾನ್ಯಗಳು ಸಾಮಾನ್ಯವಾಗಿ ಬಳಸಲ್ಪಡುತ್ತವೆ. ನಮ್ಮ ದೈನಂದಿನ ಊಟದ ತಟ್ಟೆಯಲ್ಲಿ ಬೆಳೆಸಾರು, ದಾಲ್, ತೊವ್ವೆ, ಬಿಸಿಬೇಳೆಬಾತ್, ವಡೆ, ಅಂಬೋಡೆ ಮತ್ತು ಪಾಯಸಗಳ ರೂಪದಲ್ಲಿ ಇವುಗಳು ಸಾಮಾನ್ಯವಾಗಿ ಬಳಕೆಯಲ್ಲಿವೆ.
ಆರೋಗ್ಯದ ದೃಷ್ಟಿಯಿಂದ ದ್ವಿದಳ ಧಾನ್ಯಗಳು ಅತ್ಯಂತ ಪೌಷ್ಟಿಕ ಆಹಾರ. ಉತ್ಪನ್ನಗಳ ಉತ್ತಮ ಮೂಲವಾಗಿರುವ ಇವು ಸಸ್ಯಾಹಾರಿಗಳಿಗೆ ವಿಶೇಷವಾಗಿ ಉಪಯುಕ್ತವಾಗಿದೆ. ಜೊತೆಗೆ ಫೈಬರ್ ಅಧಿಕವಾಗಿರುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಮಲಬದ್ಧತೆ ಇರುತ್ತದೆ. ಕಬ್ಬಿಣ, ಜಿಂಕ್, ಫೋಲೆಟ್, ಮೆಗ್ನೀಸಿಯಂ ಮುಂತಾದ ಖನಿಜಗಳು ದೇಹದ ಸಮಗ್ರ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗುತ್ತವೆ. ಕಡಿಮೆ ಕೊಬ್ಬು ಮತ್ತು ಕೊಲೆಸ್ಟ್ರಾಲ್ ರಹಿತ ಗುಣಗಳಿಂದ ಹೃದಯರೋಗ, ಮಧುಮೇಹ ಮತ್ತು ತೂಕ ಹೆಚ್ಚಾಗುವ ಅಪಾಯವನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಅಂದರೆ, ದ್ವಿದಳ ಧಾನ್ಯಗಳು “ಪೂರ್ಣ ಪೌಷ್ಟಿಕ ಆಹಾರ” ಎಂದು ಹೇಳಬಹುದು.
ಪರಿಸರದ ದೃಷ್ಟಿಯಿಂದಲೂ ಇವು ಬಹಳ ಮಹತ್ವದ್ದಾಗಿವೆ. ದ್ವಿದಳ ಬೆಳೆಗಳ ಬೇರುಗಳಲ್ಲಿ ಇರುವ ರೈಜೋಬಿಯಂ ಮಣ್ಣಿನಲ್ಲಿ ಸಾರಜನಕವನ್ನು ಸ್ಥಿರೀಕರಿಸಿ ಮಣ್ಣಿನ ಫಲವತ್ತತೆಯನ್ನು ಹೊಂದಿದೆ. ಇದರಲ್ಲಿ ರಾಸಾಯನಿಕ ರಸಗೊಬ್ಬರಗಳ ಅವಶ್ಯಕತೆಯಿದೆ. ಜೊತೆಗೆ ಇತರ ಬೆಳೆಗಳಿಗೆ ಕಡಿಮೆ ನೀರು ಬೇಕಾಗುವುದು ಮತ್ತು ಕಡಿಮೆ ಹಸಿರುಮನೆ ಅನಿಲಗಳನ್ನು ಉತ್ಪತ್ತಿ ಮಾಡುವುದು ಪರಿಸರ ಸ್ನೇಹಿ ಕೃಷಿಗೆ ಸಹಾಯ ಮಾಡುತ್ತದೆ. ಹೀಗಾಗಿ, ದ್ವಿದಳ ಧಾನ್ಯಗಳು ಸುಸ್ಥಿರ ಕೃಷಿಯ ಪ್ರಮುಖ ಭಾಗವಾಗಿದೆ.
ಇದನ್ನೂ ಓದಿ: ಟೆಡ್ಡಿ ಡೇ ವ್ಯಾಲೆಂಟೈನ್ ವೀಕ್ನ ಭಾಗವಾಗಿದ್ದು ಹೇಗೆ? ಈ ದಿನದ ಹಿನ್ನೆಲೆಯ ಬಗ್ಗೆ ತಿಳಿಯಿರಿ
ಆರ್ಥಿಕವಾಗಿ ಕೂಡ ದ್ವಿದಳ ಧಾನ್ಯಗಳು ಬಹಳ ಪ್ರಯೋಜನಕಾರಿ. ಅಗ್ಗದ ಬೆಲೆಯಲ್ಲಿ ಲಭ್ಯವಾಗುವ ಈ ಧಾನ್ಯಗಳು ಜನರಿಗೆ ಪೌಷ್ಟಿಕ ಆಹಾರ ಭದ್ರತೆಯನ್ನು ಒದಗಿಸುತ್ತವೆ. ಸಣ್ಣ ಮತ್ತು ಮಧ್ಯಮ ರೈತರಿಗೆ ಉತ್ತಮ ಆದಾಯದ ಮೂಲ ಮತ್ತು ಸಂಗ್ರಹಿಸಬಹುದಾದ ಗುಣದಿಂದ ಆಹಾರ ಸುರಕ್ಷತೆಯನ್ನು ಹೊಂದಿದೆ. ಭಾರತವು ವಿಶ್ವ ದ್ವಿದಳ ಧಾನ್ಯಗಳ ಅತಿದೊಡ್ಡ ಉತ್ಪಾದಕ ಹಾಗೂ ಗ್ರಾಹಕ ರಾಷ್ಟ್ರವಾಗಿದ್ದು, ಕರ್ನಾಟಕದಲ್ಲಿ ತೊಗರಿ, ಹೆಸರು, ಕಡಲೆ, ಉದ್ದ ಮತ್ತು ಅವರ ಬೆಳೆಗಳು ಪ್ರಮುಖ ಸ್ಥಾನ ಪಡೆದಿವೆ.
ಸರಳವಾಗಿ ಕಾಣುವ ಈ ಸಣ್ಣ ಬೀಜಗಳು ಆರೋಗ್ಯಕರ ಸಮಾಜ, ಸುರಕ್ಷಿತ ಪರಿಸರ ಮತ್ತು ಸ್ಥಿರ ಆರ್ಥಿಕತೆಯ ಅಡಿಪಾಯ. ನಮ್ಮ ದೈನಂದಿನ ಆಹಾರದಲ್ಲಿ ದ್ವಿದಳ ಧಾನ್ಯಗಳನ್ನು ಹೆಚ್ಚು ಸೇರಿಸುವುದು ಕೇವಲ ಆರೋಗ್ಯಕ್ಕಲ್ಲ, ಭವಿಷ್ಯದ ಸುಸ್ಥಿರ ಬದುಕಿಗೆ ಸಹ ಮಹತ್ವದ ಹೆಜ್ಜೆಯಾಗಿದೆ. “ಸಣ್ಣ ಬೀಜಗಳು – ದೊಡ್ಡ ಶಕ್ತಿ” ಎಂಬ ಮಾತಿನಂತೆ, ದ್ವಿದಳ ಧಾನ್ಯಗಳಿಂದ ಆರೋಗ್ಯಕರ ಮತ್ತು ಸುಸ್ಥಿರ ನಾಳೆಯನ್ನು ನಿರ್ಮಿಸೋಣ.
ಲೇಖನ: ಡಾ. ರವಿಕಿರಣ ಪಟವರ್ಧನ, ಪಟವರ್ಧನ ಆಯುರ್ವೇದ ಕ್ಲಿನಿಕ್, ಶಿರಸಿ – 581401, ದೂರವಾಣಿ: 08384225836
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 11:05 am, ಮಂಗಳವಾರ, 10 ಫೆಬ್ರವರಿ 26