world s softest idli batter recipe: ಇಡ್ಲಿ ಎಂದರೆ ಮಲ್ಲಿಗೆಯಂತೆ ಮೃದುವಾಗಿರಬೇಕು, ಬೆಳ್ಳಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಹಾಗಾದರೆ ಇಡ್ಲಿ ತಯಾರಿಸಲು ಸರಿಯಾದ ಅಳತೆ ಜೊತೆಗೆ ವಿಧಾನ ಕೂಡ ಮುಖ್ಯವಾಗಿದೆ.

ಅಡುಗೆ ಮಾಡುವಾಗ ನಾವು ಮಾಡುವ ಸಣ್ಣ ತಪ್ಪುಗಳು ಕೂಡ ಮ್ಯಾಟರ್ ಆಗುತ್ತವೆ, ಇದರಿಂದ ಅಡುಗೆ ಹಾಳಾಗುತ್ತವೆ. ಈಗ ಮಲ್ಲಿಗೆಯಂಥ ಇಡ್ಲಿ ಮಾಡಲು ಬಳಸುವ ಪದಾರ್ಥಗಳು, ವಿಧಾನ, ಟಿಪ್ಸ್ ಕೂಡ ಈ ಲೇಖನದಲ್ಲಿದೆ.

ಇಡ್ಲಿ ಅಕ್ಕಿ ಅಥವಾ ಸಣ್ಣ ಅಕ್ಕಿ-4 ಲೋಟ

ಉದ್ದಿನ ಬೇಳೆ (ಗುಂಡು ಉದ್ದು)- 1 ಲೋಟ

ಅವಲಕ್ಕಿ (ದಪ್ಪ ಅಥವಾ ತೆಳು)-ಅರ್ಧ ಲೋಟ

ಸಬ್ಬಕ್ಕಿ- ಅರ್ಧ ಲೋಟ

ಮೆಂತ್ಯ ಕಾಳು- 1 ಚಮಚ

ರುಚಿಗೆ ತಕ್ಕಷ್ಟು ಉಪ್ಪು

ನೆನೆಸುವುದು

ಮೊದಲು ಅಕ್ಕಿ, ಉದ್ದಿನ ಬೇಳೆಯನ್ನು, ಮೆಂತ್ಯ ಕಾಳುಗಳನ್ನು ಪ್ರತ್ಯೇಕವಾಗಿ ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಸಬೇಕು. ಉದ್ದಿನ ಬೇಳೆಯನ್ನು ಕೂಡ ತೊಳೆದು, ಬೇರೆ ಪಾತ್ರೆಯಲ್ಲಿ ಹಾಕಿ ನೆನೆಸಿ. ರುಬ್ಬುವ ಅರ್ಧ ಗಂಟೆ ಮೊದಲು ಅವಲಕ್ಕಿಯನ್ನು ತೊಳೆದು ನೆನೆಸಿಟ್ಟುಕೊಳ್ಳಿ.

ಮೊದಲು ಉದ್ದಿನ ಬೇಳೆಯನ್ನು ಮಿಕ್ಸಿ ಅಥವಾ ಗ್ರೈಂಡರ್‌ಗೆ ಹಾಕಿ, ಸ್ವಲ್ಪ ಸ್ವಲ್ಪವೇ ತಣ್ಣನೆಯ ನೀರು ಹಾಕಿ ಬೆಣ್ಣೆಯಂತೆ ನುಣ್ಣಗೆ, ಮೃದುವಾಗಿ ರುಬ್ಬಿಕೊಳ್ಳಿ. ನಂತರ ಅಕ್ಕಿ, ಸಬ್ಬಕ್ಕಿ, ನೆನೆಸಿದ ಅವಲಕ್ಕಿಯನ್ನು ಸ್ವಲ್ಪ ತರಿತರಿಯಾಗಿ (ರವೆಗಿಂತ ನುಣ್ಣಗೆ) ರುಬ್ಬಿಕೊಳ್ಳಿ. ಎರಡೂ ಮಿಶ್ರಣಗಳನ್ನು ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಈ ಮಿಶ್ರಣವನ್ನು ಕನಿಷ್ಠ 8-10 ಗಂಟೆಗಳ ಕಾಲ ಅಥವಾ ಇಡೀ ರಾತ್ರಿ ಇಡಿ. ಮರುದಿನ ಹಿಟ್ಟು ಉಬ್ಬಿ ಬಂದಿರುತ್ತದೆ.

ಇಡ್ಲಿ ಬೇಯಿಸುವುದು

ಈಗ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಇಡ್ಲಿ ತಟ್ಟೆಗೆ ಸ್ವಲ್ಪ ಎಣ್ಣೆ ಸವರಿ, ಹಿಟ್ಟನ್ನು ಹಾಕಿ. ಇಡ್ಲಿ ಪಾತ್ರೆಯಲ್ಲಿ ನೀರು ಕುದಿಯಲು ಪ್ರಾರಂಭವಾದ ಮೇಲೆ ತಟ್ಟೆಗಳನ್ನಿಟ್ಟು 10-12 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಹಬೆಯಲ್ಲಿ ಬೇಯಿಸಿ.

ಯಾವಾಗಲೂ ಹೊಸ, ಗುಣಮಟ್ಟದ ಉದ್ದಿನ ಬೇಳೆ ಬಳಸಿ.

ರುಬ್ಬುವಾಗ ಹೆಚ್ಚು ನೀರು ಮಾತ್ರ ಹಾಕಬೇಡಿ, ಹಿಟ್ಟು ಗಟ್ಟಿಯಾಗಿದ್ದರೆ ಇಡ್ಲಿ ಚೆನ್ನಾಗಿ ಬರುತ್ತದೆ. ಇದು ಇಡ್ಲಿಗೆ ಮಲ್ಲಿಗೆಯಂತಹ ಮೃದುತ್ವ ಮತ್ತು ಬಿಳುಪು ನೀಡುತ್ತದೆ.

ಬಿಸಿಬಿಸಿಯಾದ ಈ ಮಲ್ಲಿಗೆ ಇಡ್ಲಿಯನ್ನು ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಿರಿ.

Source link
Idli Batter: ಮಲ್ಲಿಗೆಯಂಥ ಮೃದುವಾದ ಇಡ್ಲಿ ಮಾಡಲು, ಮನೇಲಿರುವ ಈ ಪದಾರ್ಥ ಹಾಕಿ; ಅನೇಕರಿಗೆ ಗೊತ್ತಿಲ್ಲದ ಟಿಪ್ಸ್