
WPL 2026: ವುಮೆನ್ಸ್ ಪ್ರೀಮಿಯರ್ ಲೀಗ್ ನ ಸೀಸನ್-4ರ ಮೆಗಾ ಹಿರಾಜಿಗಾಗಿ ಸಿದ್ಧತೆಗಳು ಪ್ರಾರಂಭವಾಗಿದೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಎಲ್ಲಾ ಫ್ರಾಂಚೈಸಿಗಳು ರಿಟೈನ್ ಆಟಗಾರರ ಪಟ್ಟಿಯನ್ನು ಸಲ್ಲಿಸಲಾಗಿದೆ. ಇದರ ಬೆನ್ನಲ್ಲೇ ಎಲ್ಲಾ ಫ್ರಾಂಚೈಸಿಗಳು ಕೋಟಿ ಮೊತ್ತದ ಪರ್ಸ್‌ನೊಂದಿಗೆ ಆಟಗಾರರ ಖರೀದಿಗೆ ಪ್ಲ್ಯಾನ್ ರೂಪಿಸುತ್ತಿದೆ. ಅದರಂತೆ ಈ ಬಾರಿಯ ಮೆಗಾ ಆಕ್ಷನ್ ಮೂಲಕ ಯಾವ ಫ್ರಾಂಚೈಸಿ ಎಷ್ಟು ಆಟಗಾರರನ್ನು ಖರೀದಿಸಬಹುದು ಎಂದು ನೋಡುವುದಾದರೆ…

ಮುಂಬೈ ಇಂಡಿಯನ್ಸ್: ಹಾಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಒಟ್ಟು ಐವರು ಆಟಗಾರರನ್ನು ಉಳಿಸಿಕೊಂಡಿದೆ. ಇದೀಗ 5.75 ಕೋಟಿ ರೂ. ಪರ್ಸ್ ಮೊತ್ತ ಹೊಂದಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹರಾಜಿನ ಮೂಲಕ ಒಟ್ಟು 13 ಆಟಗಾರರನ್ನು ಖರೀದಿಸಬಹುದು.

ಡೆಲ್ಲಿ ಕ್ಯಾಪಿಟಲ್ಸ್: ಕಳೆದ ಬಾರಿಯ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಕೂಡ ಐವರು ಆಟಗಾರ್ತಿಯರನ್ನು ರಿಟೈನ್ ಮಾಡಿಕೊಂಡಿದ್ದಾರೆ. ಇದೀಗ 5.70 ಕೋಟಿ ರೂ. ಪರ್ಸ್ ಮೊತ್ತ ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಹರಾಜಿನ ಮೂಲಕ ಒಟ್ಟು 13 ಆಟಗಾರರನ್ನು ಖರೀದಿಸಬಹುದು.

ಗುಜರಾತ್ ಜೈಂಟ್ಸ್: ಗುಜರಾತ್ ಜೈಂಟ್ಸ್ ಫ್ರಾಂಚೈಸಿಯು ಈ ಬಾರಿ ಉಳಿಸಿಕೊಂಡಿರುವುದು ಕೇವಲ ಇಬ್ಬರನ್ನು ಮಾತ್ರ. ಅದರಂತೆ 9 ಕೋಟಿ ರೂ. ಪರ್ಸ್ ಮೊತ್ತ ಹೊಂದಿರುವ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಮೆಗಾ ಹರಾಜಿನ ಮೂಲಕ ಒಟ್ಟು 16 ಆಟಗಾರರನ್ನು ಖರೀದಿಸಬಹುದು.

ಯುಪಿ ವಾರಿಯರ್ಸ್: ಉತ್ತರ ಪ್ರದೇಶ ವಾರಿಯರ್ಸ್ ಪ್ರಾಂಚೈಸಿಯು ಏಕೈಕ ಆಟಗಾರನನ್ನು ಮಾತ್ರ ರಿಟೈನ್ ಮಾಡಿಕೊಂಡಿದೆ. ಇದೀಗ 14.5 ಕೋಟಿ ರೂ. ಪರ್ಸ್ ಮೊತ್ತ ಹೊಂದಿರುವ ಯುಪಿ ವಾರಿಯರ್ಸ್ ಮೆಗಾ ಹರಾಜಿನ ಮೂಲಕ ಒಟ್ಟು 17 ಆಟಗಾರರನ್ನು ಖರೀದಿಸಬಹುದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರ್ಸಿಬಿ ಫ್ರಾಂಚೈಸಿಯು ಈ ಬಾರಿ ನಾಲ್ವರು ಆಟಗಾರರನ್ನು ತಂಡದಲ್ಲೇ ಉಳಿಸಿಕೊಂಡಿದೆ. ಅದರಂತೆ 6.15 ಕೋಟಿ ರೂ. ಪರ್ಸ್ ಮೊತ್ತ ಹೊಂದಿರುವ ರಾಯಲ್ ಪಡೆ ಒಟ್ಟು 14 ಆಟಗಾರರನ್ನು ಖರೀದಿಸಬಹುದು.
ರಂದು ಪ್ರಕಟಿಸಲಾಗಿದೆ – 7:53 am, ಶನಿ, 8 ನವೆಂಬರ್ 25