WPL 2026 Final Date and Time: ಆರ್​ಸಿಬಿ- ಡೆಲ್ಲಿ ನಡುವೆ ಫೈನಲ್ ಪಂದ್ಯ ಯಾವಾಗ, ಎಲ್ಲಿ, ಎಷ್ಟು ಗಂಟೆಗೆ ಆರಂಭ?

WPL 2026 Final Date and Time: ಆರ್​ಸಿಬಿ- ಡೆಲ್ಲಿ ನಡುವೆ ಫೈನಲ್ ಪಂದ್ಯ ಯಾವಾಗ, ಎಲ್ಲಿ, ಎಷ್ಟು ಗಂಟೆಗೆ ಆರಂಭ?


2026 ರ ಮಹಿಳಾ ಪ್ರೀಮಿಯರ್ ಲೀಗ್ (ವುಮೆನ್ಸ್ ಪ್ರೀಮಿಯರ್ ಲೀಗ್) ಇದೀಗ ಅಂತಿಮ ಹಂತಕ್ಕೆ ಬಂದು ನಿಂತಿದೆ. ಸುತ್ತಿನ ಪ್ರದರ್ಶನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (RCB vs ದೆಹಲಿ ಕ್ಯಾಪಿಟಲ್ಸ್) ತಂಡ ಮುಖಾಮುಖಿಯಾಗಲಿವೆ. ಒಂದೆಡೆ ಆರ್ ಸಿಬಿ ಮೊದಲ ಹಂತದ 6 ಪಂದ್ಯಗಳನ್ನು ಗೆದ್ದು ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದಿದ್ದರೆ, ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಎಲಿಮಿನೇಟರ್ ಗುಜರಾತ್ ಜೈಂಟ್ಸ್‌ಗೆ ಸೋಲುಣಿಸಿ ಸತತ ನಾಲ್ಕನೇ ಬಾರಿಗೆ ಫೈನಲ್‌ಗೆ ಎಂಟ್ರಿಕೊಟ್ಟಿದೆ. ಡೆಲ್ಲಿ ತಂಡ 4 ಬಾರಿ ಫೈನಲ್ ಆಡಿದರೂ ಇದುವರೆಗೆ ಟ್ರೋಪಿ ಎತ್ತಿಹಿಡಿಯಲು ಸಾಧ್ಯವಾಗಿಲ್ಲ. ಇತ್ತ 2024 ರ ಆವೃತ್ತಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದ ಆರ್ಸಿಬಿ, ಇದೇ ಡೆಲ್ಲಿ ತಂಡವನ್ನು ಮಣಿಸಿ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಹೀಗಾಗಿ ಆರ್ಸಿಬಿ ಅದೇ ಇತಿಹಾಸವನ್ನು ಮರುಕಳಿಸಲು ನೋಡುತ್ತಿದ್ದಾರೆ, ಇತ್ತ ಡೆಲ್ಲಿ ತನ್ನ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದೆ.

ಮಹಿಳಾ ಪ್ರೀಮಿಯರ್ ಲೀಗ್ 2026 ರ ಫೈನಲ್ ಪಂದ್ಯ ಯಾವಾಗ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಫೈನಲ್ ಪಂದ್ಯ ಫೆಬ್ರವರಿ 5 ರಂದು ಗುರುವಾರ.

ಮಹಿಳಾ ಪ್ರೀಮಿಯರ್ ಲೀಗ್ 2026 ರ ಫೈನಲ್ ಪಂದ್ಯ ಯಾವುದು?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಫೈನಲ್ ಪಂದ್ಯ ವಡೋದರಾದ ಬಿಸಿಎ ಸ್ಟೇಡಿಯಂನಲ್ಲಿ.

ಮಹಿಳಾ ಪ್ರೀಮಿಯರ್ ಲೀಗ್ 2026 ರ ಫೈನಲ್ ಪಂದ್ಯ ಎಷ್ಟು ಗಂಟೆಗೆ?

ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯವು ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಪ್ರಾರಂಭವಾಗಲಿದೆ. ಸಂಜೆ 7 ಗಂಟೆಗೆ ಸರಿಯಾಗಿ.

ಮಹಿಳಾ ಪ್ರೀಮಿಯರ್ ಲೀಗ್ 2026 ರ ಫೈನಲ್ ಪಂದ್ಯವನ್ನು ನೇರ ಪ್ರಸಾರ ಮಾಡುವುದು ಹೇಗೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ದೆಹಲಿ ಕ್ಯಾಪಿಟಲ್ಸ್ ನಡುವಿನ ಫೈನಲ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಿದೆ. ಜೊತೆಗೆ ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿಯೂ ಪಂದ್ಯವನ್ನು ವೀಕ್ಷಿಸಬಹುದು.

WPL 2026: 8 ವಿಕೆಟ್‌ಗಳಿಂದ ಗೆದ್ದು ನೇರವಾಗಿ ಫೈನಲ್‌ಗೆ ಎಂಟ್ರಿಕೊಟ್ಟ ಆರ್ಸಿಬಿ

ಉಭಯ ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ಸಯಾಲಿ ಸತ್ಘರೆ, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಲಾರೆನ್ ಬೆಲ್, ಲಿನ್ಸೆ ಸ್ಮಿತ್, ಪ್ರೇಮಾ ರಾವತ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಗ್ರೆಸ್ಯೂಷಾ ನಾಯಕಿ, ಗ್ರೆಸ್ಯೂಷಾ ನಾಯಕಿ, ಗೌಲತಾ ಹ್ಯಾರಿಸ್

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಲಿಜೆಲ್ ಲೀ, ಶಫಾಲಿ ವರ್ಮಾ, ಲಾರಾ ವೊಲ್ವಾರ್ಡ್ಟ್, ಜೆಮಿಮಾ ರಾಡ್ರಿಗಸ್(ನಾಯಕಿ), ಮರಿಜಾನ್ನೆ ಕಪ್, ಚಿನೆಲ್ಲೆ ಹೆನ್ರಿ, ನಿಕಿ ಪ್ರಸಾದ್, ಸ್ನೇಹ್ ರಾಣಾ, ಮಿನ್ನು ಮಣಿ, ಶ್ರೀ ಚರಣಿ, ನಂದನಿ ಶರ್ಮಾ, ಎಡ್ಲಾ ಸೃಜನಾ, ಪ್ರಗತಿ ಸಿಂಗ್, ಲೂಸಿಲಾ ಹ್ಯಾಮಿಲ್ಟನ್, ತಾನಿಯಾ ಭಾಟಿಯಾ.

ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *