ಮಹಿಳಾ ಪ್ರೀಮಿಯರ್ ಲೀಗ್ 2026 ರ ಮೆಗಾ ಹರಾಜು ಭರದಿಂದ ಆರಂಭವಾಗಿದೆ. ಈ ವರ್ಷ, ಮೆಗಾ ಹರಾಜು ಆಗಿರುವುದರಿಂದ ಒಟ್ಟು 276 ಆಟಗಾರರನ್ನು ಬಿಡ್ ಮಾಡಲಾಗುತ್ತಿದ್ದು, 73 ಸ್ಥಾನಗಳು ಭರ್ತಿಯಾಗಬೇಕಿದೆ. ಈ ಹರಾಜಿನಲ್ಲಿ ಎಲ್ಲರ ಕಣ್ಣು 2ನೇ ಆವೃತ್ತಿಯ ಚಾಂಪಿಯನ್ ಆರ್ಸಿಬಿಯಲ್ಲಿದೆ, ಪ್ರಸ್ತುತ ಆರ್ಸಿಬಿ ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ರಾಧಾ ಯಾದವ್ ಅವರನ್ನು ತಂಡಕ್ಕೆ ಸೇರಿಸಿದೆ.