WPL ಸತತ 5 ಪಂದ್ಯ ಗೆದ್ದು ಪ್ಲೇ-ಆಫ್‌ಗೆ ಲಗ್ಗೆಯಿಟ್ಟ ಆರ್‌ಸಿಬಿ! ಇನ್ನೊಂದು ಕಪ್‌ ನಮ್ದೇ ಎಂದ ಫ್ಯಾನ್ಸ್

WPL ಸತತ 5 ಪಂದ್ಯ ಗೆದ್ದು ಪ್ಲೇ-ಆಫ್‌ಗೆ ಲಗ್ಗೆಯಿಟ್ಟ ಆರ್‌ಸಿಬಿ! ಇನ್ನೊಂದು ಕಪ್‌ ನಮ್ದೇ ಎಂದ ಫ್ಯಾನ್ಸ್

WPL ಸತತ 5 ಪಂದ್ಯ ಗೆದ್ದು ಪ್ಲೇ-ಆಫ್‌ಗೆ ಲಗ್ಗೆಯಿಟ್ಟ ಆರ್‌ಸಿಬಿ! ಇನ್ನೊಂದು ಕಪ್‌ ನಮ್ದೇ ಎಂದ ಫ್ಯಾನ್ಸ್

ವಡೋದರಾ: ನಾಲ್ಕನೇ ಸೀಸನ್ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನ ನಾಗಾಲೋಟ ಮುಂದುವರೆದಿದ್ದು, ಅಜೇಯವಾಗಿ ಪ್ಲೇ ಆಫ್ ಪ್ರವೇಶಿಸಿದೆ. ಇದರ ಬೆನ್ನಲ್ಲೇ ಆರ್‌ಸಿಬಿ ಫ್ಯಾನ್ಸ್ ಇನ್ನೊಂದು ಸಲ ಕಪ್ ನಮ್ದೇ ಎನ್ನುತ್ತಿದ್ದಾರೆ.

ಮಾಜಿ ಚಾಂಪಿಯನ್‌ ಆರ್‌ಸಿಬಿ ತಂಡ ಈ ಬಾರಿ ಡಬ್ಲ್ಯುಪಿಎಲ್‌ನಲ್ಲಿ ಸತತ 5ನೇ ಗೆಲುವು ದಾಖಲಿಸಿದ್ದು, ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದೆ. ಗುಜರಾತ್‌ 5 ಪಂದ್ಯಗಳಲ್ಲಿ 3ನೇ ಸೋಲನುಭವಿಸಿದೆ.

ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ 6 ವಿಕೆಟ್‌ಗೆ 178 ರನ್‌ ಕಲೆಹಾಕಿತು. 9 ರನ್‌ಗೆ 2 ವಿಕೆಟ್‌ ಕಳೆದುಕೊಂಡರೂ ಬಳಿಕ ತಂಡ ಚೇತರಿಸಿಕೊಂಡಿತು. ಗೌತಮಿ ನಾಯ್ಕ್‌ 55 ಎಸೆತಕ್ಕೆ 73 ರನ್‌ ಸಿಡಿಸಿದರೆ ನಾಯಕಿ ಸ್ಮೃತಿ ಮಂಧನಾ 26, ರಿಚಾ ಘೋಷ್ 27 ರನ್‌ ಕೊಡುಗೆ ನೀಡಿದರು.

ದೊಡ್ಡ ಗುರಿ ಬೆನ್ನತ್ತಿದ ಗುಜರಾತ್‌ 8 ವಿಕೆಟ್‌ ನಷ್ಟದಲ್ಲಿ 111 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ನಾಯಕಿ ಆ್ಯಶ್ಲೆ ಗಾರ್ಡ್ನರ್‌(54 ರನ್‌) ಏಕಾಂಗಿ ಹೋರಾಟ ತಂಡಕ್ಕೆ ಗೆಲುವು ತಂದುಕೊಡಲಿಲ್ಲ. ಸಯಾಲಿ ಸತ್ಗಾರೆ 3, ನ್ಯಾಡಿನ್‌ ಡೆ ಕ್ಲರ್ಕ್‌ 2 ವಿಕೆಟ್‌ ಪಡೆದರು.

WPL ಇತಿಹಾಸದಲ್ಲಿ ಸತತ ಐದು ಪಂದ್ಯಗಳನ್ನು ಗೆದ್ದ ಎರಡನೇ ತಂಡ ಎನ್ನುವ ಕೀರ್ತಿಗೆ ಆರ್‌ಸಿಬಿ ಪಾತ್ರವಾಗಿದೆ. ಈ ಮೊದಲು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು 2023ರ WPLನಲ್ಲಿ ಸತತ 5 ಪಂದ್ಯಗಳನ್ನು ಗೆದ್ದಿತ್ತು. ಆ ದಾಖಲೆಯನ್ನು ಆರ್‌ಸಿಬಿ ಸರಿಗಟ್ಟಿದೆ.

2024ರಲ್ಲಿ ನಡೆದ ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಮೃತಿ ಮಂಧನಾ ನೇತೃತ್ವದ ಆರ್‌ಸಿಬಿ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಸದ್ಯದ ಆರ್‌ಸಿಬಿ ತಂಡದ ಪ್ರದರ್ಶನ ಗಮನಿಸಿದ್ರೆ ಮತ್ತೊಂದು ಕಪ್ ನಮ್ದೇ ಎನ್ನುತ್ತಿದ್ದಾರೆ ಆರ್‌ಸಿಬಿ ಫ್ಯಾನ್ಸ್.

Source link

Leave a Reply

Your email address will not be published. Required fields are marked *