Headlines

WTC 2027: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸರಣಿಗೆ 3 ತಂಡಗಳ ಸೇರ್ಪಡೆ

WTC 2027: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸರಣಿಗೆ 3 ತಂಡಗಳ ಸೇರ್ಪಡೆ


ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸರಣಿಗೆ ಮೂರು ತಂಡಗಳನ್ನು ಸೇರಿಸಲಾಯಿತು. ಪ್ರಸ್ತುತ ಇರುವ 9 ತಂಡಗಳು ಅಫ್ಘಾನಿಸ್ತಾನ್, ಝಿಂಬಾಬ್ವೆ ಮತ್ತು ಐರ್ಲೆಂಡ್ ತಂಡಗಳು ಕೂಡ 2027 ರಿಂದ ಶುರುವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸರಣಿಯಲ್ಲಿ ಕಣಕ್ಕಿಳಿಯಲಿದೆ ಎಂದು ಐಸಿಸಿ ಮೂಲಗಳು ತಿಳಿಸಿವೆ.

2025 ರಿಂದ 202 ರ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸರಣಿಯಲ್ಲಿ ಒಟ್ಟು 9 ತಂಡಗಳು ಕಣಕ್ಕಿಳಿಯುತ್ತಿವೆ, ಇದಾಗ್ಯೂ ಐದನೇ ಸೀಸನ್‌ಗೆ (WTC 2027) ಮೂರು ತಂಡಗಳನ್ನು ಸೇರಿಸಲು ಐಸಿಸಿ ನಿರ್ಧರಿಸಿದೆ. ಅದರಂತೆ ಅಫ್ಘಾನಿಸ್ತಾನ್, ಐರ್ಲೆಂಡ್ ಹಾಗೂ ಝಿಂಬಾಬ್ವೆ ತಂಡಗಳು ಚೊಚ್ಚಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸರಣಿ ಆಡಲಿದೆ.

ಏನಿದು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸರಣಿ

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸರಣಿಯು ಟೆಸ್ಟ್ ತಂಡಗಳ ನಡುವಣ ಐಸಿಸಿ ಕ್ರಿಕೆಟ್ ಪಂದ್ಯಾವಳಿ. 2021 ರಿಂದ ಆರಂಭವಾದ ಈ ಸರಣಿಯಲ್ಲಿ ಫೈನಲ್ ಪಂದ್ಯದ ಮೂಲಕ ಆಯ್ಕೆ ತಂಡವನ್ನು ನಿರ್ಧರಿಸಲಾಗಿದೆ. ಸದ್ಯ 9 ಟೆಸ್ಟ್ ಆಡುವ ರಾಷ್ಟ್ರಗಳು ಈ ಸರಣಿಯಲ್ಲಿ ಕಾಣಿಸಿಕೊಂಡಿವೆ, ಅದರಂತೆ ಪಾಯಿಂಟ್ಸ್ ಟೇಬಲ್‌ನಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್ ಆಡ.

ಆದರೆ ಇಲ್ಲಿ ಗೆಲುವಿನ ಶೇಕಡಾವಾರು (ಪರ್ಸಂಟೇಜ್) ಮೇಲೆ ಪಾಯಿಂಟ್ಸ್ ಟೇಬಲ್ನಲ್ಲಿ ಸ್ಥಾನ ನಿರ್ಧಾರವಾಗುತ್ತದೆ. ಅದರಂತೆ ಗೆಲುವುಗಳ ಸಂಖ್ಯೆ, ಡ್ರಾ ಪಂದ್ಯಗಳ ಸಂಖ್ಯೆ ಕೂಡ ಇಲ್ಲಿ ಗಣನೆಗೆ ಬರಲಿದೆ. ಇದರಿಂದ ಹೆಚ್ಚು ಪಂದ್ಯ ಗೆದ್ದ ತಂಡ ಅಧಿಕ ಪಾಯಿಂಟ್ ಪಡೆದರೂ, ಗೆಲುವು ಹಾಗೂ ಡ್ರಾ ಸಾಧಿಸಿದ ತಂಡ ಪಾಯಿಂಟ್ ಟೇಬಲ್‌ನಲ್ಲಿ ಮೇಲೇರಲು ಅವಕಾಶವಿದೆ.

ಅಂದರೆ ಇಲ್ಲಿ ಪ್ರತಿ ಪಂದ್ಯಕ್ಕೆ 12 ಅಂಕಗಳನ್ನು ನಿಗದಿಪಡಿಸಲಾಗಿದೆ. ಜೊತೆಗೆ ಪಂದ್ಯ ಟೈ ಆದರೆ 6 ಅಂಕ ಹಾಗೂ ಪಂದ್ಯ ಡ್ರಾ ಆದರೆ 4 ಅಂಕಗಳು. ಈ ಸರಣಿಗಳ ಪಂದ್ಯಾವಳಿಯ ಲೆಕ್ಕಚಾರ ಸಮಗೊಳ್ಳಲಿದೆ. ಇಲ್ಲಿ ಗೆದ್ದ ಪಂದ್ಯಗಳಿಗೆ ಮತ್ತು ಡ್ರಾ ಪಂದ್ಯಗಳಿಗೆ ಅನುಸಾರವಾಗಿ ಶೇಕಡಾವಾರಿನಂತೆ ತಂಡಗಳು ಪಾಯಿಂಟ್ಸ್ ಟೇಬಲ್‌ನಲ್ಲಿ ರ್ಯಾಂಕ್ ಪಡೆದುಕೊಳ್ಳುತ್ತವೆ.

ಈ ಪಂದ್ಯಗಳಿಗೆ ಅಥವಾ ಸರಣಿಗೆ ಅನುಸಾರವಾಗಿ ಶ್ರೇಯಾಂಕ ಪಟ್ಟಿ ಬದಲಾಗಬಹುದು. ಜೊತೆಗೆ ಪಾಯಿಂಟ್ ಟೇಬಲ್ ನಲ್ಲೂ ಪಂದ್ಯಕ್ಕನುಸಾರವಾಗಿ ಪೈಪೋಟಿ ಕಂಡು ಬರಲಿದೆ. ಅಂತಿಮವಾಗಿ ಪಾಯಿಂಟ್ಸ್ ಟೇಬಲ್‌ನಲ್ಲಿ ಮೊದಲ ಮತ್ತು ಎರಡನೇ ಸ್ಥಾನ ಪಡೆಯುವ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯವಾಡಲಿದೆ.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ವಿಶ್ವ ಟೆಸ್ಟ್ ಸರಣಿಯು ಟೆಸ್ಟ್ ಪಂದ್ಯಗಳ ಒಂದು ಸೈಕಲ್ ಎಂಬುದು. ಅಂದರೆ ಈ ಹಿಂದಿನ ಎಲ್ಲಾ ತಂಡಗಳು ಟೆಸ್ಟ್ ಸರಣಿಯನ್ನು ಆಡುತ್ತವೆ. ಆದರೆ ಈ ಸರಣಿಗಳ ಪಂದ್ಯಗಳ ಗೆಲುವು, ಸೋಲು ಮತ್ತು ಡ್ರಾಗಳ ಲೆಕ್ಕಾಚಾರಗಳನ್ನು ಮಾತ್ರ ಐಸಿಸಿ ತೆಗೆದುಕೊಳ್ಳುತ್ತದೆ. ಈ ಮೂಲಕ ಪಾಯಿಂಟ್ಸ್ ಟೇಬಲ್‌ಗಳಲ್ಲಿ ತಂಡಗಳ ಸ್ಥಾನಗಳನ್ನು ಆಯ್ಕೆ ಮಾಡಲಾಗಿಲ್ಲ.

ಇದನ್ನೂ ಓದಿ: ವಿರಾಟ್ ಕೊಹ್ಲಿಯ ಅನಗತ್ಯ ದಾಖಲೆ ಸರಿಗಟ್ಟಿದ ಬಾಬರ್ ಆಝಂ

ಈ ಸರಣಿಗಳನ್ನು ಆಯಾ ಕ್ರಿಕೆಟ್ ಬೋರ್ಡ್ ನಿರ್ವಹಿಸುತ್ತಾರೆ. ಆದರೆ ಫೈನಲ್ ಪಂದ್ಯವನ್ನು ನಡೆಸುವುದು ಇಂಟರ್ ನ್ಯಾಶನಲ್ ಕ್ರಿಕೆಟ್ ಕೌನ್ಸಿಲ್. ಅಂದರೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸರಣಿಗಳನ್ನು ಆಯಾ ಕ್ರಿಕೆಟ್ ಬೋರ್ಡ್ ಆಯೋಜಿಸಿದ್ದರೂ, ಚಾಂಪಿಯನ್ ಪಟ್ಟಕ್ಕಾಗಿ ನಡೆಯಲಿರುವ ಫೈನಲ್ ಪಂದ್ಯದ ಆಯೋಜನೆಯ ಹಕ್ಕು ಐಸಿಸಿ ಬಳಿ ಇದೆ. ಹೀಗಾಗಿಯೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸರಣಿಯನ್ನು ಸಹ ಐಸಿಸಿ ಪ್ರಶಸ್ತಿ ಎಂದು ಪರಿಗಣಿಸಲಾಗಿದೆ.

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸರಣಿಯಲ್ಲಿ ಕಣಕ್ಕಿಳಿಯುವ ತಂಡಗಳು:

  1. ಭಾರತ
  2. ಪಾಕಿಸ್ತಾನ್
  3. ಆಸ್ಟ್ರೇಲಿಯಾ
  4. ನ್ಯೂಝಿಲೆಂಡ್
  5. ಶ್ರೀಲಂಕಾ
  6. ಬಾಂಗ್ಲಾದೇಶ
  7. ವೆಸ್ಟ್ ಇಂಡೀಸ್
  8. ಇಂಗ್ಲೆಂಡ್
  9. ಸೌತ್ ಆಫ್ರಿಕಾ
  10. ಝಿಂಬಾಬ್ವೆ (2027 ರಿಂದ)
  11. ಅಫ್ಘಾನಿಸ್ತಾನ್ (2027 ರಿಂದ)
  12. ಐರ್ಲೆಂಡ್ (2027 ರಿಂದ)



Source link

Leave a Reply

Your email address will not be published. Required fields are marked *