ಜನವರಿ 11: ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಆದ ಎಕ್ಸ್‌ನಲ್ಲಿ ಇತ್ತೀಚೆಗೆ ಎಐ ದುರುಪಯೋಗಪಡಿಸಿಕೊಂಡು ಅಶ್ಲೀಲಾ ಕಾಂಟೆಂಟ್ ಅನ್ನು ಸೃಷ್ಟಿಸುತ್ತಿರುವ ಪ್ರಕರಣ ಜಾಗತಿಕವಾಗಿ ಪಿಡುಗಾಗಿ ಪರಿಣಿಸಿದೆ. ಭಾರತ ಸರ್ಕಾರ ಈ ವಿಚಾರದಲ್ಲಿ ಗಂಭೀರವಾಗಿದ್ದು, ಗ್ರೋಕ್ (ಗ್ರೋಕ್ ಎಐ) ಮೂಲಕ ಸೃಷ್ಟಿಯಾಗುತ್ತಿರುವ ಅಶ್ಲೀಲ ಕಾಂಟೆಂಟ್ ಅನ್ನು ಅಳಿಸಬೇಕೆಂದೂ ಮತ್ತು ಭಾರತೀಯ ಕಾನೂನು ನಿಯಮಗಳಿಗೆ ಬದ್ಧವಾಗಿರಬೇಕೆಂದೂ ಎಕ್ಸ್‌ಗೆ ಸರ್ಕಾರ ತಿಳಿಸಿತ್ತು. ಇದರ ಎಕ್ಸ್ (ಹಿಂದಿನ ಟ್ವಿಟರ್) ತನ್ನಿಂದ ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದು, ಭಾರತೀಯ ಕಾನೂನಿಗೆ ಬದ್ಧವಾಗಿದ್ದರೂ ಭರವಸೆ ನೀಡಿದೆ.
ಸರ್ಕಾರದ ಆದೇಶದಂತೆ ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ 3,500 ಕಾಂಟೆಂಟ್ ಅನ್ನು ಭಾರತದಲ್ಲಿ ಬ್ಲಾಕ್ ಮಾಡಲಾಗಿದೆ. ಈ ಅಶ್ಲೀಲ ಕಾಂಟೆಂಟ್ ಸೃಷ್ಟಿಗೆ ಕಾರಣವಾದ ಸುಮಾರು 600 ಅಕೌಂಟ್‌ಗಳನ್ನು ಡಿಲೀಟ್ ಮಾಡಲಾಗಿದೆ. ಇನ್ಮುಂದೆ ಅಶ್ಲೀಲ ಚಿತ್ರಗಳ ಸೃಷ್ಟಿಗೆ ಅವಕಾಶ ಕೊಡುವುದಿಲ್ಲ ಎಂದು ಅದು ಸರ್ಕಾರದ ಮೂಲಗಳು ಮಾಧ್ಯಮಗಳಿಗೆ ವರದಿಯಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿಯ ದೃಷ್ಟಿ ಮತ್ತು ನಿಲುವು ಕಂಡು ಅಚ್ಚರಿಗೊಂಡ ಐ ಸ್ಟಾರ್‌ಟಪ್‌ಗಳ ಮುಖ್ಯಸ್ಥರು
ಎಕ್ಸ್ ಬಳಕೆದಾರರಿಂದ ಗ್ರೋಕ್ ದುರುಪಯೋಗ
ಗ್ರೋಕ್ ಎಂಬುದು ಎಐ ಚಾಟ್ ಬೋಟ್ ಅಪ್ಲಿಕೇಶನ್. 2023ರಲ್ಲಿ ಇದರ ಬಿಡುಗಡೆಯಾಗಿದ್ದು. ಇದರಲ್ಲಿ ಗ್ರೋಕ್ ಇಮ್ಯಾಜಿನ್ ಎಂಬ ಹೊಸ ಫೀಚರ್ ಅನ್ನು ಪರಿಚಯಿಸಲಾಗಿದೆ. ಇದನ್ನು ಬಳಸಿ ವಯಸ್ಕರು ಅಥವಾ ಅಶ್ಲೀಲ ಕಾಂಟೆಂಟ್ ಸೃಷ್ಟಿಸಬಹುದು. ಪೇಯ್ಡ್ ಗ್ರಾಹಕರಿಗೆ ಈ ಫೀಚರ್ ಲಭ್ಯವಿದೆ. ಆದರೆ, ಎಕ್ಸ್ ಬಳಕೆದಾರರಿಗೆ ಈ ಚಾಟ್‌ಬಾಟ್ ಅನ್ನು ಉಚಿತವಾಗಿ ಬಳಸಲು ಅವಕಾಶವನ್ನು ನೀಡಲಾಗಿದೆ. ಎಕ್ಸ್ ಪೋಸ್ಟ್‌ಗಳಲ್ಲಿ ಗ್ರೋಕ್‌ಗೆ ಟ್ಯಾಗ್ ಮಾಡಿ ಬೇಕಾದುದನ್ನು ಕಮ್ಯಾಂಡ್ ಮಾಡಬಹುದು. ಪೋಸ್ಟ್ ಆಗಿರುವ ಒಬ್ಬ ವ್ಯಕ್ತಿ ಫೋಟೋವನ್ನು ನಗ್ನಗೊಳಿಸುವಂತೆ ಹೇಳಬಹುದು. ಒಂದು ವಿಚಾರದ ಬಗ್ಗೆ ಮಾಹಿತಿ ಹೆಕ್ಕಿ ತೆಗೆ ಎಂದರೆ ಅದನ್ನೂ ಮಾಡುತ್ತಾರೆ. ಆದರೆ ಎಕ್ಸ್‌ನಲ್ಲಿ ಇತ್ತೀಚೆಗೆ ಜನರು ಅಶ್ಲೀಲಾ ಕಾಂಟೆಂಟ್ ಸೃಷ್ಟಿ ಮಾಡುವ ಟ್ರೆಂಡ್ ಹೆಚ್ಚಾಗುತ್ತಿದೆ.
ಹಲವು ದೇಶಗಳು ಈ ವಿಚಾರದಲ್ಲಿ ಎಕ್ಸ್ ಮೇಲೆ ಕುಪಿತಗೊಂಡಿವೆ. ಇಂಡೋನೇಷ್ಯಾ ದೇಶ ಗ್ರೋಕ್ ಅನ್ನೇ ಬ್ಲಾಕ್ ಮಾಡಿದೆ. ಬ್ರೆಜಿಲ್, ಫ್ರಾನ್ಸ್, ಜರ್ಮನಿ, ಮಲೇಷ್ಯಾ ಮತ್ತು ಅಮೆರಿಕ ದೇಶಗಳ ಗ್ರೋಕ್ ವಿರುದ್ಧ ತನಿಖೆಗೆ ಯೋಜಿಸಲಾಗಿದೆ. ಅಮೆರಿಕದ ಮಾಜಿ ಸಂಸದ ಗೂಗಲ್ರು ಆಯಪ್ ಸ್ಟೋರ್ ಮತ್ತು ಪ್ಲೇಸ್ಟೋರ್ ಗ್ರೋಕ್ ಆಯಪ್ ಅನ್ನು ತೆಗೆದುಹಾಕುವಂತೆಯೂ ಆಯಪಲ್ ಮತ್ತು ಗೆ ಮನವಿ ಮಾಡಲಾಗಿದೆ.
ಇದನ್ನೂ ಓದಿ: ಬಿಲ್ನಲ್ಲಿ ನಕಲಿ ಜಿಎಸ್ಟಿ ನಂಬರ್ ಕೊಟ್ಟು ಸರ್ಕಾರಕ್ಕೂ, ಗ್ರಾಹಕರಿಗೆ ಯಾಮಾರಿಸುತ್ತಾರೆ; ಅಸಲಿ ಪತ್ತೆ ಹಚ್ಚೋದು ಹೇಗೆ?
ಗ್ರೋಕ್ ಸೃಷ್ಟಿತ ಅಶ್ಲೀಲ ಕಾಂಟೆಂಟ್‌ಗಳನ್ನು ತೆಗೆದುಹಾಕಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಜನವರಿ 2 ರಂದು ಭಾರತ ಕೂಡ ಎಕ್ಸ್‌ಗೆ ಎಚ್ಚರಿಕೆ ನೀಡಿತ್ತು. ಇದೀಗ ಎಕ್ಸ್ ತನ್ನ ತಪ್ಪು ಒಪ್ಪು, ಗ್ರೋಕ್ ಸೃಷ್ಟಿತ ಅಶ್ಲೀಲ ಕಾಂಟೆಂಟ್ ಅನ್ನು ಬ್ಲಾಕ್ ಮಾಡಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ