ಜನವರಿ 11: ಸ್ವಿಗ್ಗಿ, ಜೊಮಾಟೋ ಇತ್ಯಾದಿ ಫುಡ್ ಆಯಪ್ಗಳು (ಆಹಾರ ವಿತರಣಾ ವೇದಿಕೆಗಳು) ಜನರ ಮನೆ ಬಾಗಿಲಿಗೆ ಆಹಾರವನ್ನು ನೀಡುತ್ತವೆ. ಪ್ಲಾಟ್ಫಾರ್ಮ್ ಕಾರ್ಯನಿರ್ವಹಣೆ ಸೇರಿದಂತೆ ವಿವಿಧ ವೆಚ್ಚಗಳನ್ನು ಭರಿಸಲು ವಿವಿಧ ಶುಲ್ಕಗಳು ಸೇರಿದಂತೆ ಹೆಚ್ಚಿನ ಹಣವನ್ನು ಪಾವತಿಸಲಾಗುತ್ತದೆ. ಆದರೆ, ರೆಸ್ಟೋರೆಂಟ್ಗೆ ಹೋಗಿ ಊಟ ಮಾಡುವುದಕ್ಕೂ ಆನ್ಲೈನ್ನಲ್ಲಿ ಆರ್ಡರ್ ಮಾಡಿ ಊಟ ಮಾಡುವುದಕ್ಕೂ ಬೆಲೆಯಲ್ಲಿ ನೂರಾರು ರೂ ವ್ಯತ್ಯಾಸ ಆಗಿ ಹೋದರೆ? ಆನ್ಲೈನ್ನಲ್ಲಿ ಇಂಥದ್ದುಂದು ಡಿಬೇಟ್ ನಡೆದಿದೆ.
ನಳಿನಿ ಉನಾಗರ್ ಎಂಬಾಕೆ ಜೊಮಾಟೋ ಹೇಗೆ ವಿಪರೀತ ಬೆಲೆ ಹಾಕುತ್ತಿದೆ ಎಂದು ವಿವರಿಸಿ ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದಾಳೆ. ರೆಸ್ಟೋರೆಂಟ್ನಲ್ಲಿ 320 ರೂ ಬೆಲೆಯ ಆಹಾರವು ಜೊಮಾಟೊದಲ್ಲಿ 655 ರೂ ಆಗಿದೆ.
ಇದನ್ನೂ ಓದಿ: ಗ್ರೋಕ್ ಅಶ್ಲೀಲ ಅವಾಂತರಗಳು; ತಪ್ಪೊಪ್ಪಿಕೊಂಡು ಭಾರತ ಸರ್ಕಾರದ ಆದೇಶ ಪಾಲಿಸಿದ ಎಕ್ಸ್
ಒಂದೇ ಆಹಾರ ಮತ್ತು ಜೊಮಾಟೊ ಎರಡರಲ್ಲೂ ಬೆಲೆ ಹೋಲಿಕೆ ಇದೆ. ಚೈನೀಸ್ ಭೇಲ್ ಮತ್ತು ಮಂಚೂರಿಯನ್ ರೆಸ್ಟೋರೆಂಟ್ ನಿಂದ ಪಾರ್ಸಲ್ ಕಟ್ಟಿಸಿಕೊಂಡು, ಅದರ ಬಿಲ್ 320 ರೂ ಆಗಿದೆ. ಅದೇ ರೆಸ್ಟೋರೆಂಟ್ನಲ್ಲಿ ಅದೇ ಚೈನೀಸ್ ಭೇಲ್ ಮತ್ತು ಮಂಚೂರಿಯನ್ ಅನ್ನು ಬುಕ್ ಮಾಡಿದರೆ ಅವುಗಳ ಬೆಲೆ 600 ರೂ ಸೇರಿ ಒಟ್ಟು ಬಿಲ್ 655 ಆಗಿದೆ. ಇದರ ಫೋಟೋವನ್ನು ನಳಿನಿ ಅವರು ಶೇರ್ ಮಾಡಿದ್ದಾರೆ.
‘ಜೊಮಾಟೊದವರೆ, ನನ್ನ ಆರ್ಡರ್ನ ವಾಸ್ತವ ಬೆಲೆ 320 ರೂ. ಆದರೆ, ಜೊಮಾಟೊದಲ್ಲಿ 655 ರೂ ಆಗಿದೆ. ಎಲ್ಲಾ ಡಿಸ್ಕೌಂಟ್ಗಳನ್ನು ಹಾಕಿಯೂ ನಾನು 550 ರೂ ಪಡೆಯಬೇಕು. ಇಷ್ಟು ಬೆಲೆ ವ್ಯತ್ಯಾಸ ನಿಜಕ್ಕೂ ಅಸಹಜ. ಗ್ರಾಹಕರಿಂದ ಸಿಕ್ಕಾಪಟ್ಟೆ ವಸೂಲಿ ಮಾಡಲಾಗುತ್ತಿದೆ’ ಎಂದು ಈ ಮಹಿಳೆ ಟ್ವೀಟ್ ಮಾಡಿದ್ದಾರೆ.
ಅವರ ಟ್ವೀಟ್ಗೆ ಜೊಮಾಟೊ ಪ್ರತಿಕ್ರಿಯೆ ಇದೆ. ನಮ್ಮ ಪ್ಲಾಟ್ಫಾರ್ಮ್ನಲ್ಲಿ ಬೆಲೆಯನ್ನು ನಿರ್ಧರಿಸುವುದು ರೆಸ್ಟೋರೆಂಟ್ ಪಾರ್ಟ್ನರ್. ಗ್ರಾಹಕರು ಮತ್ತು ರೆಸ್ಟೋರೆಂಟ್ಗಳಿಗೆ ಮಧ್ಯವರ್ತಿಯಾಗಷ್ಟೇ ಜೊಮಾಟೊ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದೆ.
ಇದನ್ನೂ ಓದಿ: ಬಿಲ್ನಲ್ಲಿ ನಕಲಿ ಜಿಎಸ್ಟಿ ನಂಬರ್ ಕೊಟ್ಟು ಸರ್ಕಾರಕ್ಕೂ, ಗ್ರಾಹಕರಿಗೆ ಯಾಮಾರಿಸುತ್ತಾರೆ; ಅಸಲಿ ಪತ್ತೆ ಹಚ್ಚೋದು ಹೇಗೆ?
ಇದು ಆನ್ಲೈನ್ನಲ್ಲಿ ಚರ್ಚೆ ಹುಟ್ಟುಹಾಕಿದೆ. ರೆಸ್ಟೋರೆಂಟ್ ಪ್ಲಾಟ್ಫಾರ್ಮ್ಗಳಿಂದ ಜೊಮಾಟೊ ಶೇ. 35 ಕಮಿಷನ್ ಪಡೆಯುತ್ತದೆ ಎಂದು ಸಾಕಷ್ಟು ಎತ್ತಿತೋರಿಸಿದ್ದಾರೆ.
ನಳಿನಿ ಅವರ ಟ್ವೀಟ್
ಆತ್ಮೀಯ @zomatoನನ್ನ ಆರ್ಡರ್ನ ನಿಜವಾದ ಬೆಲೆ ₹320, ಆದರೆ Zomato ನಲ್ಲಿ ₹655. ರಿಯಾಯಿತಿಗಳನ್ನು ಅನ್ವಯಿಸಿದ ನಂತರವೂ ನಾನು ಇನ್ನೂ ₹ 550 ಪಾವತಿಸಬೇಕಾಗಿದೆ. ಈ ಬೆಲೆ ವ್ಯತ್ಯಾಸವು ಸಂಪೂರ್ಣವಾಗಿ ಹುಚ್ಚುತನವಾಗಿದೆ. ಗ್ರಾಹಕರಿಂದ ವಿಪರೀತ ಶುಲ್ಕ ವಿಧಿಸಲಾಗುತ್ತಿದೆ. pic.twitter.com/KE0JTUnuFW
— ನಳಿನಿ ಉನಗರ (@NalinisKitchen) ಜನವರಿ 10, 2026
ಪ್ಲಾಟ್ಫಾರ್ಮ್ಗಳಲ್ಲಿ ಕಾಣುವ ಆಹಾರಗಳ ಬೆಲೆಯನ್ನು ನಿರ್ಧರಿಸುವುದು ರೆಸ್ಟೋರೆಂಟ್ಗಳು. ಆದರೆ, ಭಾರೀ ದೊಡ್ಡ ಮೊತ್ತದ ಕಮಿಷನ್ ಅನ್ನು ಸರಿದೂಗಿಸಲು ರೆಸ್ಟೋರೆಂಟ್ಗಳ ಬೆಲೆ ಏರುತ್ತದೆ. ಬೆಲೆ ಏರಿಸಿದರೆ ಅದರಿಂದಲೂ ಫುಡ್ ಪ್ಲಾಟ್ಫಾರ್ಮ್ಗಳಿಗೆ ಲಾಭವಾಗುತ್ತದೆ. ಅಂತಿಮವಾಗಿ ಗ್ರಾಹಕರಿಗೆ ಹೊರೆಯಾಗುವುದು ಎಂದು ಹಲವು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ