ಪಲ್ಲಿಕ್ಕಿ ಮೆರವಣಿಗೆಯನ್ನ ನೋಡುವುದ್ದಕ್ಕೆ ಸಾವಿರಾರು ಜನ ಸುತ್ತಮುತ್ತಲಿನ ಗುಡ್ಡ, ಮನೆಯ ಮಹಡಿ ಮೇಲೆ ಕುಳಿತು ಪಲ್ಲಕ್ಕಿ ಮೇಲೆ ಭಂಡಾರವನ್ನ ಎರಚಿದರು. ಮೈಲಾರಲಿಂಗೇಶ್ವರನ ಪಲ್ಲಕ್ಕಿ ಮೇಲೆ ಕುರಿ ಮರಿಗಳನ್ನ ಎಸೆಯುವ ವಾಡಿಕೆಯಿತ್ತು. ಆದರೆ ಪ್ರಾಣಿ ಹಿಂಸೆಯನ್ನು ನಿಷೇಧಿಸಲಾಗಿದೆ. ಇದರ ಜೊತೆಗೆ ರೈತರು ಬೆಳೆದ ಜೋಳದ ದಂಡು (ಜೋಳದ ದಂಡು) ಹಾಗೂ ಕುರಿಗಳ ಉಣ್ಣೆಯನ್ನ ಪಲ್ಲಕ್ಕಿ ಮೇಲೆ ಆವಾಹನೆ. ಹೀಗೆ ಮಾಡುವುದರಿಂದ ಯಾವುದೇ ರೋಗ ರುಜಿನ ಬರಲ್ಲ, ಹಾಗೆ ಬೆಳೆ ಕೂಡ ಚೆನ್ನಾಗಿ ಬರುತ್ತೆ ಎಂದು ಭಕ್ತರ ನಂಬಿಕೆ.