Headlines

ಬಡವರ ಬಾದಾಮಿ ಬೆಳೆದ ರೈತರಿಗೀಗ ಸಂಕಷ್ಟ: ದಲ್ಲಾಳಿ-ಕಮಿಷನ್ ಏಜೆಂಟ್ ಮೋಸದಿಂದ ಕಂಗಾಲು

ಬಡವರ ಬಾದಾಮಿ ಬೆಳೆದ ರೈತರಿಗೀಗ ಸಂಕಷ್ಟ: ದಲ್ಲಾಳಿ-ಕಮಿಷನ್ ಏಜೆಂಟ್ ಮೋಸದಿಂದ ಕಂಗಾಲು


ಶೇಂಗಾ, ರೈತರ ಪ್ರಭಾತನೆಚಿತ್ರ ಕ್ರೆಡಿಟ್ ಮೂಲ: tv9 ಕನ್ನಡ

ಯಾದಗಿರಿ, ಫೆಬ್ರವರಿ 06: ರೈತ ದೇಶದ ಬೆನ್ನೆಲುಬು ಅಂತಾರೆ, ಆದರೆ ರೈತರು ಬೆಳೆಗೆ ಸರಿಯಾದ ಬೆಲೆ ಸಿಗುವುದಿಲ್ಲ. ರೈತರು ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತೆ. ಏಕೆಂದರೆ ಯಾದಗಿರಿ ಜಿಲ್ಲೆಯ ರೈತರು ಸಾವಿರಾರು ರೂ. ಖರ್ಚು ಮಾಡಿ ಕಷ್ಟ ಪಟ್ಟು ಶೇಂಗಾ (ಕಡಲೆಕಾಯಿ) ಬೆಳೆಯನ್ನ ಬೆಳೆದರೆ ಸರಿಯಾದ ಬೆಲೆ ಸಿಗುತ್ತಿಲ್ಲ. ದಲ್ಲಾಳಿ ಹಾಗೂ ಕಮಿಷನ್ ಏಜೆಂಟ್‌ಗಳ ಮೋಸಕ್ಕೆ ಕಂಗಲಾಗಿ ಹೋಗಿದ್ದಾರೆ. ಹೀಗಾಗಿ ಕೊನೆಗೂ ರೊಚ್ಚಿಗೆದ್ದ ರೈತರು ಹಾಗೂ ಕಮಿಷನ್ ಏಜೆಂಟ್ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಯಾದಗಿರಿ ನಗರದ ಎಪಿಎಂಸಿ ಮುಂದೆ ಇಂದು ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ ಬಂದ್ ಮಾಡುವ ಮೂಲಕ ತಮಗೆ ಆಗುತ್ತಿರುವ ಅನ್ಯಾಯವನ್ನು ತೊಡಲಾಗಿದೆ. ರೈತರು ಈ ರೀತಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡುವುದಕ್ಕೆ ಕಾರಣವೇ ಶೇಂಗಾ ಬೆಳೆ ಕುಸಿತ.

ಕ್ವಿಂಟಲ್ಗೆ ಕೇವಲ 4 ರಿಂದ 6 ಸಾವಿರ ರೂ

ಜಿಲ್ಲೆಯಲ್ಲಿ ಸದ್ಯ ಶೇಂಗಾ ಬೆಳೆಯ ರಾಶಿ ನಡೆಯುತ್ತಿದೆ. ಹೀಗಾಗಿ ರೈತರು ಬೆಳೆದ ಸಾವಿರಾರು ಕ್ವಿಂಟಲ್ ಶೇಂಗಾ ಬೆಳೆಯುತ್ತಿರುವ ನಗರದ ಕೃಷಿ ಮಾರುಕಟ್ಟೆಗೆ ಬರುತ್ತಿದೆ. ಆದರೆ ಶೇಂಗಾ ಮಾರಾಟಕ್ಕೆ ಮುಂದಾದ ರೈತರಿಗೆ ಶಾಕ್ ಎದುರಾಗಿದೆ. ಏಕೆಂದರೆ ಕೆಲ ಕಳೆದ ದಿನಗಳಿಂದ ದಿಢೀರ್ ಶೇಂಗಾ ಬೆಳೆಯ ದರ ಕುಸಿತವಾಗಿದೆ. ಕ್ವಿಂಟಲ್‌ಗೆ 12 ಸಾವಿರಕ್ಕೆ ಮಾರಾಟವಾಗುತ್ತಿದ್ದ ಬೆಳೆ ಈಗ ಏಕಾಏಕಿ ಕ್ವಿಂಟಲ್‌ಗೆ ಕೇವಲ 4 ರಿಂದ 6 ಸಾವಿರಕ್ಕೆ ಮಾರಾಟವಾಗುತ್ತಿದೆ. ಇದು ರೈತರಿಗೆ ಶಾಕ್ ಕೊಟ್ಟಿದೆ. ಕಷ್ಟಪಟ್ಟು ಸಾವಿರಾರು ರೂ. ಖರ್ಚು ಮಾಡಿ ಬೆಳೆ ತಂದು ಮಾರಾಟ ಮಾಡಲು ಬಂದರೆ ಬೆಳೆಗೆ ಬೆಲೆನೇ ಕೊಡ್ತಾಯಿಲ್ಲ. ಹೀಗಾಗಿ ನಾವೆಲ್ಲಾ ವಿಷ ಕುಡಿದು ಸಾಯುವುದು ಒಂದೇ ಉಳಿದಿದೆ ಅಂತ ರೈತ ಮಲ್ಲಿಕಾರ್ಜುನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬರದ ನಾಡಲ್ಲಿ ಬಂಗಾರದ ಬೆಳೆ ಬೆಳೆದ ಯುವ ರೈತ: ಮೂರುವರೆ ಜಮೀನಿನಲ್ಲಿ ಲಕ್ಷಾಂತರ ರೂ ಲಾಭ

ಇನ್ನು ರೈತರು ಕಳೆದ ಮೂರು ತಿಂಗಳ ಹಿಂದೆ ಶೇಂಗಾ ಬೆಳೆಯುವುದಕ್ಕೆ ಎಪಿಎಂಸಿಯ ಕಮಿಷನ್ ಏಜೆಂಟ್‌ಗಳಿಂದ ಕ್ವಿಂಟಲ್‌ಗೆ 12 ಸಾವಿರ ರೂ. ಕೊಟ್ಟು ಶೇಂಗಾ ಬೀಜವನ್ನ ಖರೀದಿಸಿದ್ದರು. ಆದರೆ ಅದೇ ರೈತರು ಬೆಳೆದ ಶೇಂಗಾ ಬೆಳೆಯನ್ನ ಮಾರಾಟ ಮಾಡಲು ಬಂದರೆ ದಿಢೀರ್ ದರವನ್ನು ಇಳಿಸಲಾಗಿದೆ.

ಏಜೆಂಟ್ಗಳಿಂದ ರೈತರಿಗೆ ಮೋಸ

ಬೇರೆ ಬೇರೆ ರಾಜ್ಯಗಳು ಹಾಗೂ ಜಿಲ್ಲೆಗಳಿಂದ ಶೇಂಗಾ ಖರೀದಿ ಮಾಡುವುದಕ್ಕೆ ವ್ಯಾಪಾರಸ್ಥರು ಬಂದಿದ್ದರೂ, ಈ ಎಪಿಎಂಸಿ ಯಾರ್ಡ್‌ನ ವರ್ತಕರು ಹಾಗೂ ಕಮಿಷನ್ ಏಜೆಂಟ್‌ಗಳು ಬೇರೆ ಕಡೆಯಿಂದ ಬಂದಿದ್ದ ವ್ಯಾಪಾರಸ್ಥರನ್ನ ವಾಪಸ್ ಕಳುಹಿಸುವ ಕೆಲಸ ಮಾಡಿದ್ದಾರೆ. ಏಕೆಂದರೆ ಹೊರಗಿನಿಂದ ಬಂದಿದ್ದ ವ್ಯಾಪಾರಸ್ಥರು ಕ್ವಿಂಟಲ್‌ಗೆ 11 ರಿಂದ 13 ಸಾವಿರ ರೂ ಕೊಟ್ಟು ಖರೀದಿಸಲು ಮುಂದಾಗಿದ್ದರು. ಇದು ಸ್ಥಳೀಯ ಕಮಿಷನ್ ಏಜೆಂಟ್‌ಗಳಿಗೆ ಹೊಡೆತ ಬೀಳುತ್ತೆ ಎಂಬ ಕಾರಣಕ್ಕೆ ಖರೀದಿಸಲು ಬಿಡದೆ ವಾಪಸ್ ಕಳುಹಿಸಿದ್ದಾರೆ. ಆ ಮೂಲಕ ರೈತರಿಗೆ ಮೋಸ ಮಾಡಿದ್ದಾರೆ.

ಹೊರಗಿನಿಂದ ಬಂದ ವ್ಯಾಪಾರಸ್ಥರು ಹೆಚ್ಚಿನ ದರಕ್ಕೆ ಖರೀದಿ ಮಾಡಿದರೆ ರೈತರಿಗೆ ಲಾಭವಾಗುತ್ತಿತ್ತು. ಆದರೆ ಸ್ಥಳೀಯ ಏಜೆಂಟ್‌ಗಳಿಂದ ದೋಖಾ ಆಗಿದೆ. ಈ ಕಾರಣಕ್ಕೆ ಇಂದು ಎಪಿಎಂಸಿ ಮುಂದೆ ರಾಜ್ಯ ರೈತ ರೈತ ಹಾಗೂ ಸೇನೆ ಸಂಘಟನೆ ನೇತೃತ್ವದಲ್ಲಿ ನೂರಾರು ರೈತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ರೈತರ ಪ್ರತಿಭಟನೆಯಿಂದ ಎರಡು ಗಂಟೆ ಕಿ.ಮೀ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಇದನ್ನೂ ಓದಿ: ಮೈಲಾರಲಿಂಗನಿಗೆ ಬಲಿ ಕೊಡಲು ತಂದಿದ್ದ ಕುರಿಮರಿಗಳನ್ನು ವಶಕ್ಕೆ ಪಡೆದು ಮಾರಾಟ ಮಾಡಿದ ಅಧಿಕಾರಿಗಳು

ಒಟ್ಟಿನಲ್ಲಿ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತದೆ. ಮೊದಲೇ ಪ್ರವಾಹದಿಂದ ಮುಂಗಾರು ಬೆಳೆ ಕಳೆದುಕೊಂಡು ಕಂಗಾಲಾದ ಅನ್ನದಾರಿಗೆ ಹಿಂಗಾರು ಬೆಳೆಯಾಗಿ ಶೇಂಗಾ ಬೆಳೆ ಕೈ ಹಿಡಿದಿತ್ತು. ಆದರೆ ಈಗ ದಿಢೀರ್ ಕುಸಿತ ಆಗಿದ್ದಕ್ಕೆ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಅಧಿಕಾರಿಗಳು ಹಾಗೂ ಸರ್ಕಾರ ಮಧ್ಯಪ್ರವೇಶಿಸಲು ಒತ್ತಾಯಿಸಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *