ರೊಮಾನ್ಸ್​ ಮಾಡಲು ಬರದೇ ಪಾರ್ಕ್​ನಲ್ಲಿ ಕದ್ದುಮುಚ್ಚಿ ನೋಡ್ತಿದ್ರಂತೆ ಯಶ್​: ಆ ದಿನಗಳು ಹೇಗಿತ್ತೆಂದು ವಿವರಿಸಿದ ರಾಕಿಂಗ್​ ಸ್ಟಾರ್​

ರೊಮಾನ್ಸ್​ ಮಾಡಲು ಬರದೇ ಪಾರ್ಕ್​ನಲ್ಲಿ ಕದ್ದುಮುಚ್ಚಿ ನೋಡ್ತಿದ್ರಂತೆ ಯಶ್​: ಆ ದಿನಗಳು ಹೇಗಿತ್ತೆಂದು ವಿವರಿಸಿದ ರಾಕಿಂಗ್​ ಸ್ಟಾರ್​

ರೊಮಾನ್ಸ್​ ಮಾಡಲು ಬರದೇ ಪಾರ್ಕ್​ನಲ್ಲಿ ಕದ್ದುಮುಚ್ಚಿ ನೋಡ್ತಿದ್ರಂತೆ ಯಶ್​: ಆ ದಿನಗಳು ಹೇಗಿತ್ತೆಂದು ವಿವರಿಸಿದ ರಾಕಿಂಗ್​ ಸ್ಟಾರ್​

ನಟ ಯಶ್ ತಮ್ಮ ಆರಂಭಿಕ ದಿನಗಳಲ್ಲಿ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಲು ಪಟ್ಟ ಕಷ್ಟದ ಬಗ್ಗೆ ಹಂಚಿಕೊಂಡಿದ್ದಾರೆ. ರೊಮ್ಯಾನ್ಸ್ ಕಲಿಯಲು ಹೆಲ್ಮೆಟ್ ಧರಿಸಿ ಪಾರ್ಕ್‌ಗೆ ಹೋಗಿ ಜೋಡಿಗಳನ್ನು ಗಮನಿಸುತ್ತಿದ್ದರಂತೆ. ಅಷ್ಟೇ ಅಲ್ಲದೆ, ಮನೆಯಲ್ಲಿ ತಾಯಿಯ ಮೇಲೆಯೂ ರೊಮ್ಯಾನ್ಸ್ ಅಭ್ಯಾಸ ಮಾಡುತ್ತಿದ್ದರಂತೆ!

ರಾಕಿಂಗ್​ ಸ್ಟಾರ್​ ಎಂದೇ ಬಿರುದು ಪಡೆದಿರುವ ಸ್ಯಾಂಡಲ್​ವುಡ್​ ಸ್ಟಾರ್​ ನಟ ಯಶ್​ ಈಗ ಪ್ಯಾನ್​ ಇಂಡಿಯಾ ಮೀರಿ ದೇಶದ ಆಚೆಯೂ ಗುರುತಿಸಿಕೊಂಡಿದ್ದಾರೆ. ಆದರೆ ಬಹುತೇಕ ಎಲ್ಲಾ ಯಶಸ್ವಿ ಸೆಲೆಬ್ರಿಟಿಯ ಹಿಂದೆಯೂ ದುರ್ಗಮ ಹಾದಿಯೂ ಇರುತ್ತದೆ. ಕಠಿಣ ಪರಿಶ್ರಮವೂ ಇರುತ್ತದೆ.

ನಟನೆ ಎನ್ನುವುದು ಎಲ್ಲರಿಗೂ ಒಲಿಯುವುದಿಲ್ಲ. ಒಮ್ಮೆ ಅದು ಒಲಿದು ಬಿಟ್ಟರೆ, ಕೆಲವರಿಗೆ ಅದೃಷ್ಟದ ಸುರಿಮಳೆಯನ್ನೇ ತಂದುಬಿಡುತ್ತದೆ. ಅಂಥವರಲ್ಲಿ ಒಬ್ಬರು ಯಶ್​. ಇದೀಗ ಅವರ ಹಿಂದಿನ ವಿಡಿಯೋ ಒಂದು ವೈರಲ್​ ಆಗಿದೆ. ಅದರಲ್ಲಿ ಅವರು ತಮ್ಮ ಆರಂಭಿಕ ಸಿನಿಮಾ ದಿನಗಳ ಬಗ್ಗೆ ಕುತೂಹಲದ ವಿಷಯಗಳನ್ನು ಮಾತನಾಡಿದ್ದಾರೆ.

ವೀಕೆಂಡ್​ ವಿತ್​ ರಮೇಶ್​ ಕಾರ್ಯಕ್ರಮದಲ್ಲಿ ಈ ಬಗ್ಗೆ ನಟ ಯಶ್​ ಮಾತನಾಡಿದ್ದಾರೆ. ಅದಾಗಲೇ ಅವರು ಕೆಲವು ಸಿನಿಮಾಗಳಲ್ಲಿ ಪಾತ್ರ ಮಾಡಿದ್ದರೂ ರೊಮಾಂಟಿಕ್​ ಸೀನ್​ ಮಾತ್ರ ಮಾಡಲು ಬರುತ್ತಲೇ ಇರಲಿಲ್ಲವಂತೆ! ಅದಕ್ಕಾಗಿ ನಿರ್ದೇಶಕರಿಂದ ಬೈಸಿಕೊಂಡು ಸಾಕಾಗಿ ಹೋಗಿರುವ ಬಗ್ಗೆ ಈ ಷೋನಲ್ಲಿ ಅವರು ರಿವೀಲ್​ ಮಾಡಿದ್ದಾರೆ.

ರೊಮಾನ್ಸ್​ ಹೇಗೆ ಮಾಡುವುದು ಎಂದು ತಿಳಿದುಕೊಳ್ಳಲು ಹೆಲ್ಮೆಟ್​ ಹಾಕಿಕೊಂಡು ಪಾರ್ಕ್​ಗೆ ಹೋಗಿ ಕುಳಿತುಕೊಳ್ಳುತ್ತಿದ್ದರಂತೆ! ಪಾರ್ಕ್​ನಲ್ಲಿ ಬರುವ ಹುಡುಗ ಹುಡುಗಿಯರ ಬಾಡಿ ಲ್ಯಾಂಗ್ವೆಜ್​ ಕದ್ದುಮುಚ್ಚಿ ನೋಡುತ್ತಿದ್ದಂತೆ ಯಶ್​.

ಅದಾಗಲೇ ಕೆಲವು ಸಿನಿಮಾಗಳಲ್ಲ ನಟಿಸಿರುವುದರಿಂದ ತಾವು ನಟ ಎನ್ನುವುದು ತಿಳಿಯಬಾರದು ಎನ್ನುವ ಉದ್ದೇಶದಿಂದ ಹೆಲ್ಮೆಟ್​ಹಾಕಿಕೊಂಡು ಹೋಗುತ್ತಿದ್ದುದಾಗಿ ತಿಳಿಸಿದ್ದಾರೆ. ಕೆಲವೊಮ್ಮೆ ನೋಡಬಾರದ ದೃಶ್ಯಗಳನ್ನೆಲ್ಲಾ ನೋಡುತ್ತಿದ್ದೆ. ಆ ಕಡೆ ಮುಖ ಮಾಡುತ್ತಿದ್ದೆ ಎಂದಿದ್ದಾರೆ.

ಆ ಬಳಿಕ ರೊಮಾಂಟಿಕ್​ ಸೀನ್​ ಮಾಡಲು ಯಾರೂ ಸಿಗದಾಗ ತಮ್ಮ ತಾಯಿಯ ಮೇಲೆಯೇ ಅದರ ಪ್ರಯೋಗ ಮಾಡುತ್ತಿದ್ದೆ. ಅಮ್ಮ ಬೈಯುತ್ತಿದ್ದರು ಎಂದು ಅಲ್ಲಿಯೇ ಇದ್ದ ಅಮ್ಮ ಪುಷ್ಪಾ ಅರುಣ್​ ಕುಮಾರ್​ ಅವರನ್ನು ಉದ್ದೇಶಿಸಿ ಹೇಳಿದ್ದರು ಯಶ್​.

Source link

Leave a Reply

Your email address will not be published. Required fields are marked *