Headlines

ಟಾಕ್ಸಿಕ್‌ ಮುಂಬೈ ಶೂಟಿಂಗ್ ಮುಗಿಸಿ ಲಂಡನ್‌ಗೆ ಹಾರಿದ ಯಶ್‌: ಏನಿದು ಗ್ಲೋಬಲ್ ಪಾರ್ಟನರ್‌ಶಿಪ್‌?

ಟಾಕ್ಸಿಕ್‌ ಮುಂಬೈ ಶೂಟಿಂಗ್ ಮುಗಿಸಿ ಲಂಡನ್‌ಗೆ ಹಾರಿದ ಯಶ್‌: ಏನಿದು ಗ್ಲೋಬಲ್ ಪಾರ್ಟನರ್‌ಶಿಪ್‌?

ಟಾಕ್ಸಿಕ್‌ ಮುಂಬೈ ಶೂಟಿಂಗ್ ಮುಗಿಸಿ ಲಂಡನ್‌ಗೆ ಹಾರಿದ ಯಶ್‌: ಏನಿದು ಗ್ಲೋಬಲ್ ಪಾರ್ಟನರ್‌ಶಿಪ್‌?

ಈಗಾಗಲೇ ಟಾಕ್ಸಿಕ್ ಸಿನಿಮಾ ಅಮೆರಿಕದಲ್ಲಿ ಹಾಲಿವುಡ್ ಜೊತೆ ವ್ಯವಹಾರದ ಸಹಯೋಗ ಮಾಡಿಕೊಂಡಿದ್ದು ಇಂಗ್ಲೀಷ್‌ನಲ್ಲೂ ತಯಾರಾಗುತ್ತಿದೆ. ಈ ನಡುವೆ ಯಶ್‌ ಲಂಡನ್‌ಗೆ ಪ್ರಯಾಣ ಬೆಳೆಸಿದ್ದಾರೆ.

ಯಶ್‌ ನಟನೆ, ನಿರ್ಮಾಣದ ಅದ್ದೂರಿ ಬಜೆಟ್‌ ಚಿತ್ರ ‘ಟಾಕ್ಸಿಕ್‌’ನ ಮುಂಬೈ ಶೆಡ್ಯೂಲ್‌ ಶೂಟಿಂಗ್‌ ಮುಕ್ತಾಯಗೊಂಡಿದೆ. ಸುಮಾರು 45 ದಿನಗಳ ಕಾಲ ಇಲ್ಲಿ ಶೂಟಿಂಗ್‌ ನಡೆದಿತ್ತು.

ಹಾಲಿವುಡ್ ಸಾಹಸ ನಿರ್ದೇಶಕ ಜೆಜೆ ಪೆರ್ರಿ 45 ದಿನಗಳ ಕಾಲ ಮುಂಬೈನಲ್ಲಿ ಬೀಡುಬಿಟ್ಟು ಸಿನಿಮಾದ ಹೈ ವೋಲ್ಟೇಜ್‌ ಆ್ಯಕ್ಷನ್‌ ಸೀನ್‌ಗಳ ಚಿತ್ರೀಕರಣವನ್ನು ಮುಗಿಸಿಕೊಟ್ಟಿದ್ದಾರೆ.

ಮುಂದಿನ ಹಂತದ ಚಿತ್ರೀಕರಣ ಬೆಂಗಳೂರಲ್ಲಿ ನಡೆಯಲಿದೆ. ಇಲ್ಲಿ ಅಂತಿಮ ಹಂತದ ಚಿತ್ರೀಕರಣ ನಡೆಯಲಿದ್ದು, ಬಳಿಕ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯಲಿವೆ.

ಈ ನಡುವೆ ಯಶ್‌ ಲಂಡನ್‌ಗೆ ಪ್ರಯಾಣ ಬೆಳೆಸಿದ್ದಾರೆ. ಸಿನಿಮಾವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವ ನಿಟ್ಟಿನಲ್ಲಿ ಗ್ಲೋಬಲ್ ಪಾರ್ಟನರ್‌ಶಿಪ್‌ ಬಗ್ಗೆ ಇಲ್ಲಿ ಪ್ರಮುಖ ಕಂಪನಿಗಳ ಜೊತೆ ಮಾತುಕತೆ ನಡೆಯಲಿದೆ ಎನ್ನಲಾಗಿದೆ.

ಈಗಾಗಲೇ ಟಾಕ್ಸಿಕ್ ಸಿನಿಮಾ ಅಮೆರಿಕದಲ್ಲಿ ಹಾಲಿವುಡ್ ಜೊತೆ ವ್ಯವಹಾರದ ಸಹಯೋಗ ಮಾಡಿಕೊಂಡಿದ್ದು ಇಂಗ್ಲೀಷ್‌ನಲ್ಲೂ ತಯಾರಾಗುತ್ತಿದೆ. ಈ ಸಿನಿಮಾ ಮಾರ್ಚ್ 19, 2026ಕ್ಕೆ ಬಿಡುಗಡೆ ಆಗುತ್ತಿದೆ.

‘ಟಾಕ್ಸಿಕ್’ ಸಿನಿಮಾಗೆ ಮಲಯಾಳಂನ ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡದ ಕೆವಿಎನ್ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಡುಗಡೆ ಕಾಣುತ್ತಿದೆ.

Source link

Leave a Reply

Your email address will not be published. Required fields are marked *