ನಟ ಯಶ್ ಅವರಿಗೆ ಜನವರಿ 8 ಜನ್ಮದಿನ. ಹುಟ್ಟುಹಬ್ಬಕ್ಕೂ ಮೊದಲು ಅವರು ಸ್ಟೈಲಿಶ್ ಆಗಿ ಫೋಟೋಶೂಟ್ ಮಾಡಿ ಗಮನ ಸೆಳೆದಿದ್ದಾರೆ. ಅವರು ಹ್ಯಾಂಡ್ಸಮ್ ಹಂಕ್ ರೀತಿ ಕಾಣಿಸಿದ್ದಾರೆ. ಅವರ ಈ ಫೋಟೋಗಳಿಗೆ ಮಹಿಳಾ ಅಭಿಮಾನಿಗಳು ಮನಸೋತಿದ್ದಾರೆ.
ಯಶ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾ ಫಾಲೋವರ್ಸ್ಗಳನ್ನು ಹೆಚ್ಚಿಸಲು ಸೆಲೆಬ್ರಿಟಿಗಳು ಫೋಟೋಶೂಟ್ ಮಾಡಿಸುತ್ತಾ ಇರುತ್ತಾರೆ. ಯಶ್ ಕೂಡ ಇದಕ್ಕೆ ಹೊರತಾಗಿಲ್ಲ.
ಯಶ್ ಅವರ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19 ರಂದು ರಿಲೀಸ್ ಆಗುತ್ತಿದೆ. ಯಶ್ ಬರ್ತ್ಡೇನ ಫ್ಯಾನ್ಸ್ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದಾರೆ. ಮೆಟ್ರೋದಲ್ಲಿ ಯಶ್ ಅವರ ಫೋಟೋ ಹಾಗೂ ಟಾಕ್ಸಿಕ್ ಸಿನಿಮಾ ಪೋಸ್ಟರ್ ರಾರಾಜಿಸುತ್ತಿದೆ. ಅಭಿಮಾನಿಗಳು ಮೆಟ್ರೋಗೆ ಜಾಹೀರಾತು ಪ್ರಕಟಣೆ.
ಯಶ್ ಅವರು ಸಮಯ ಸಿಕ್ಕಾಗ ಕುಟುಂಬದ ಜೊತೆ ಕಳೆಯಲು ಇಷ್ಟಪಡುತ್ತಾರೆ. ಆದರೆ, ‘ಟಾಕ್ಸಿಕ್’ ಕೆಲಸಗಳು ಹೆಚ್ಚಿರುವುದರಿಂದ ಅವರಿಗೆ ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಉತ್ತಮ ರೀತಿಯಲ್ಲಿ ಸಿನಿಮಾ ತರುವ ಪ್ಲ್ಯಾನ್ ಅಲ್ಲಿ ತಂಡವಿದೆ.
‘ಕೆಜಿಎಫ್ 2’ ಬಳಿಕ ರಿಲೀಸ್ ಆಗುತ್ತಿರುವ ಸಿನಿಮಾ ‘ಟಾಕ್ಸಿಕ್’. ಎರಡೂ ಸಿನಿಮಾ ಮಧ್ಯೆ 4 ವರ್ಷಗಳ ಅಂತರ ಇದೆ. ಈ ಚಿತ್ರವನ್ನು ‘ಕೆವಿಎನ್’ ನಿರ್ಮಾಣ ಮಾಡಿದೆ. ಯಶ್ ಅವರು ಕೂಡ ಈ ಚಿತ್ರಕ್ಕೆ ನಿರ್ಮಾಪಕರು. ಕನ್ನಡದ ಜೊತೆ ಇಂಗ್ಲಿಷ್ನಲ್ಲೂ ಸಿನಿಮಾ ಶೂಟ್ ಆಗಿದೆ.




