
ಯಶ್ (ಯಶ್) ಅವರ ತಾಯಿ, ನಿರ್ಮಾಪಕಿಯೂ ಆಗಿರುವ ಪುಷ್ಪ ಅವರು ಇಂದು (ಜನವರಿ 10) ಹಾಸನದ ಬಡಾವಣೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಕೆಲ ದಿನಗಳ ಹಿಂದಷ್ಟೆ ಅವರಿಗೆ ಸೇರಿದ್ದು ಎನ್ನಲಾದ ಸ್ಥಳದಲ್ಲಿ ನಿರ್ಮಾಣವಾಗುತ್ತಿದ್ದ ಕಾಂಪೌಂಡ್ ವ್ಯಕ್ತಿಯೊಬ್ಬರು ಹೊಡೆದು ಹಾಕಿದ್ದರು. ಅದರ ಬಗ್ಗೆ ದೂರು ದಾಖಲಾಗಿತ್ತು. ಅದರ ಬೆನ್ನಲ್ಲೇ ಪುಷ್ಪ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಠಾಣಾ ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪುಷ್ಪ ಅವರು, ತಾವು ಠಾಣೆಗೆ ಭೇಟಿ ನೀಡಿದ್ದೇಕೆ ಎಂದು ವಿವರಿಸಿದರು. ಮಾಹಿತಿಗಾಗಿ ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ