ಆಲಿಯಾ ಭಟ್ ಮೇಲೆ ನಂಬಿಕೆ 215 ಕೋಟಿ ಆಫರ್ ತಿರಸ್ಕರಿಸಿದ ವೈಆರ್​ಎಫ್

ಆಲಿಯಾ ಭಟ್ ಮೇಲೆ ನಂಬಿಕೆ 215 ಕೋಟಿ ಆಫರ್ ತಿರಸ್ಕರಿಸಿದ ವೈಆರ್​ಎಫ್


ಬಾಲಿವುಡ್‌ನ (ಬಾಲಿವುಡ್) ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್, ಒಂದರ ಹಿಂದೊಂದು ಭಾರಿ ಬಜೆಟ್ ಸಿನಿಮಾಗಳನ್ನು ಮಾಡುತ್ತಿದೆ. ಸಲ್ಮಾನ್ ಖಾನ್, ಶಾರುಖ್ ಖಾನ್, ರಣಬೀರ್ ಕಪೂರ್, ಹೃತಿಕ್ ರೋಷನ್, ಜೂ ಎನ್ ಟಿಆರ್ ಹೀಗೆ ಒಬ್ಬರಾದ ಮೇಲೆ ಒಬ್ಬ ಸೂಪರ್ ಸ್ಟಾರ್ ನಟರ ಭಾರಿ ಬಜೆಟ್ ಸಿನಿಮಾಗಳ ಮೇಲೆ ಸಾವಿರಾರು ಕೋಟಿ ಹಣ ಸುರಿಯುತ್ತಿದೆ. ಭಾರಿ ಬಜೆಟ್‌ನ ಆಕ್ಷನ್ ಸಿನಿಮಾಗಳು, ಸ್ಪೈ ಸಿನಿಮಾಗಳ ಮೇಲೆ ಬಂಡವಾಳ ಹೂಡುತ್ತಾ ಬಂದಿರುವ ಯಶ್ ರಾಜ್ ಫಿಲಂಸ್, ಇದೀಗ ಮಹಿಳಾ ಪ್ರಧಾನ ಸ್ಪೈ ಥ್ರಿಲ್ಲರ್ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ, ಸಿನಿಮಾಕ್ಕೆ ಆಲಿಯಾ ಭಟ್ ನಾಯಕಿ. ಸಿನಿಮಾಕ್ಕೆ ‘ಆಲ್ಫಾ’ ಎಂದು ಹೆಸರಿಸಲಾಗಿದೆ. ಈ ಸಿನಿಮಾಕ್ಕೆ ಬರೋಬ್ಬರಿ 215 ಕೋಟಿ ಆಫರ್ ಬಂದಿದ್ದರೂ ಸಹ ಅದನ್ನು ತಿರಸ್ಕಾರ ಮಾಡಿದೆ ಯಶ್ ರಾಜ್ ಫಿಲಂಸ್.

ಆಲಿಯಾ ಭಟ್ ಮತ್ತು ಶಾರ್ವರಿ ವಾಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘ಆಲ್ಫಾ’ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಖರೀದಿಸಲು ನೆಟ್‌ಫ್ಲಿಕ್ಸ್ ಮುಂದಾಗಿದೆ. ಇದಕ್ಕಾಗಿ ಭಾರಿ ಮೊತ್ತದ ಪ್ರಸ್ತಾಪವನ್ನು ಮುಂದಿಟ್ಟಿತ್ತು. ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡದೆ ನೇರವಾಗಿ ಒಟಿಟಿಯಲ್ಲಿ ಸ್ಟ್ರೀಮ್ ಮಾಡಲು ಈ ಆಫರ್ ನೀಡಲಾಯಿತು. 215 ಕೋಟಿ ರೂಪಾಯಿ ಹಣ ಆಫರ್ ನೀಡಲಾಗಿದೆ. ವೈಆರ್‌ಎಫ್ ಮುಖ್ಯಸ್ಥ ಆದಿತ್ಯ ಚೋಪ್ರಾ ಈ ಆಫರ್ ಅನ್ನು ತಿರಸ್ಕರಿಸದೆ, ಸಿನಿಮಾ ಮೊದಲು ಥಿಯೇಟರ್‌ಗಳಲ್ಲೇ ಬರಬೇಕು ಎಂಬ ನಿರ್ಧಾರಕ್ಕೆ ಬಂದಿದೆ.

ಆಲಿಯಾ ಭಟ್ ಮೇಲಿರುವ ನಂಬಿಕೆಯಿಂದಲೇ ಆದಿತ್ಯ ಚೋಪ್ರಾ ಈ ನಿರ್ಧಾರವನ್ನು ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಬಾಕ್ಸ್ ಆಫೀಸ್ ಪಂಡಿತರು ತುಸು ಅಭಿಪ್ರಾಯ ಮುಂದಿಟ್ಟಿದ್ದಾರೆ. ಆಲಿಯಾ ಭಟ್ ನಟನೆಯ ಹಿಂದಿನ ಈ ಆಕ್ಷನ್ ‘ಜಿಗ್ರ’ ಬಾಕ್ಸ್ ಆಫೀಸ್‌ನಲ್ಲಿ ಇನ್ನಿಲ್ಲದಂತೆ ನೆಲಕಚ್ಚಿತ್ತು, ಪ್ರೊಡಕ್ಷನ್ ವ್ಯಾಲ್ಯೂ, ಕತೆ, ಪಾತ್ರಧಾರಿಗಳು ಇದ್ದ ಒಳ್ಳೆಯ ಆ ಸಿನಿಮಾ ಬಂದಿಲ್ಲ, ಒಟಿನಲ್ಲಿಯೂ ಸಹ ಜನ ಆ ಸಿನಿಮಾವನ್ನು ನೋಡಿಲ್ಲ. ಹೀಗಿದ್ದಾಗ ‘ಆಲ್ಫಾ’ ಸಿನಿಮಾಕ್ಕೆ ಬಂದಿರುವ ಈ ದೊಡ್ಡ ಆಫರ್ ಅನ್ನು ಒಪ್ಪಿಕೊಂಡಿದ್ದರೆ ಯಶ್ರಾಜ್ ಫಿಲಂಸ್ ಗೆ ಲಾಭವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಕಳೆದ ಕೆಲವು ಸಮಯದಿಂದ ಯಶ್ ರಾಜ್ ಫಿಲ್ಮ್ಸ್ ನ ‘ಟೈಗರ್ 3’ ಮತ್ತು ‘ವಾರ್ 2’ ಅಂದುಕೊಂಡ ಮಟ್ಟಕ್ಕೆ ಯಶಸ್ಸು ಕಂಡಿಲ್ಲ ಎಂಬ ಮಾತುಗಳಿವೆ. ಇಂತಹ ಸಂದರ್ಭದಲ್ಲಿ 215 ಕೋಟಿಯಂತಹ ದೊಡ್ಡ ಮೊತ್ತವನ್ನು ಕೈಬಿಟ್ಟಿರುವುದು ಅತಿಯಾದ ಉತ್ಸಾಹ ಎನ್ನಲಾಗುತ್ತಿದೆ.

ಇದನ್ನೂ ಓದಿ:ಬಾಲಿವುಡ್ ನಲ್ಲಿ ಪಿಆರ್ ತಂತ್ರ ಹೇಗೆ ನಡೆಯುತ್ತೆ ನೋಡಿ; ಎಕ್ಸ್ ಪೋಸ್ ಮಾಡಿದ ಫ್ಯಾನ್ಸ್

‘ಆಲ್ಫಾ’ ಸಿನಿಮಾದ ಚಿತ್ರೀಕರಣ ಮುಗಿದಿದೆ. ಅತ್ಯಾಧುನಿಕ ವಿಎಫ್‌ಎಕ್ಸ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ‘ಆಲ್ಫಾ’ ಬಿಡುಗಡೆಗೆ ಲಭ್ಯವಿವೆ. ಈ ಮೊದಲು ಡಿಸೆಂಬರ್ 2025ಕ್ಕೆ ನಿಗದಿಯಾಗಿರುವ ಈ ಚಿತ್ರ, ಈಗ ಏಪ್ರಿಲ್ 17, 2026 ರಂದು ಬಿಡುಗಡೆ ಆಗಲು ಸಿದ್ಧವಾಗಿದ್ದು, ಆಲಿಯಾ ಭಟ್ ಮತ್ತು ಶಾರ್ವರಿ ವಾಗ್ ಅವರು ಸಿನಿಮಾದ ಪ್ರಚಾರಕ್ಕೆ ಶೀಘ್ರವೇ ಧುಮುಕಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *