ಟಾಕ್ಸಿಕ್ ಸಿನಿಮಾದಲ್ಲಿ ಎಲಿಜಬೆತ್- ನಾದಿಯಾ, ಬುಹು ನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಎರಡು ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇದೇ ವೇಳೆ ಸಿನಿಮಾ ಕತೆಯ ಸಣ್ಣ ಸುಳಿವನ್ನು ನೀಡಿದ್ದಾರೆ. ಟಾಕ್ಸಿಕ್ ಸಿನಿಮಾ ಕುರಿತು ಯಶ್ ನೀಡಿದ ಅಪ್‌ಡೇಟ್ ಏನು?

ಅಭಿಮಾನಿಗಳು ಭಾರಿ ನಿರೀಕ್ಷೆಯೊಂದಿಗೆ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾಗೆ ಕಾಯುತ್ತಿದ್ದಾರೆ. ಕೆಜೆಎಫ್ 2 ಬಳಿಕ ಅಭಿಮಾನಿಗಳು ಯಶ್ ಸಿನಿಮಾಗಾಗಿ ಕಾಯುತ್ತಲೇ ಇದ್ದಾರೆ. ಇದೀಗ ಚಿತ್ರ ತೆರೆಗೆ ಅಪ್ಪಳಿಸಲು ರೆಡಿಯಾಗುತ್ತಿದೆ. ಮಾರ್ಚ್ 19ಕ್ಕೆ ಟಾಕ್ಸಿಕ್ ಸಿನಿಮಾ ಬಿಡುಗಡೆಯಾಗುತ್ತಿದೆ. ಈಗಾಗಲೆ ಕೆಲ ಪೋಸ್ಟರ್‌ಗಳು ಬಿಡುಗಡೆಯಾಗಿದೆ.

ಟಾಕ್ಸಿಕ್ ಸಿನಿಮಾ ನಾಯಕ ಯಶ್ ಸಿನಿಮಾ ಕುರಿತ ಎರಡು ಪೋಸ್ಟ್ ರಿಲೀಸ್ ಮಾಡಿದ್ದಾರೆ. ಈ ಮೂಲಕ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದಾರೆ. ಕಾರಣ ಈ ಎರಡು ಪೋಸ್ಟರ್ ಟಾಕ್ಸಿಕ್ ಸಿನಿಮಾದ ಆಳ ಹಾಗೂ ಕತೆಯ ಭಿನ್ನತೆ ಸಾರಿ ಹೇಳುತ್ತಿದೆ. ಈ ಎರಡು ಪಾತ್ರಗಳನ್ನು ಕಿಯಾರ ಅಡ್ವಾಣಿ ಹಾಗೂ ಹುಮಾ ಖುರೇಷಿ ಕಾಣಿಸಿಕೊಂಡಿದ್ದಾರೆ.

ಟಾಕ್ಸಿಕ್ ಸಿನಿಮಾದಲ್ಲಿ ಎಲಿಜಬೆತ್ ಪಾತ್ರವಿದೆ. ಈ ಪಾತ್ರವನ್ನು ಬಾಲಿವುಡ್ ನಟಿ ಹುಮಾ ಖುರೇಷಿ ನಿರ್ವಹಿಸುತ್ತಿದ್ದಾರೆ. ಗತಕಾಲದ ವಿಂಟಜ್ ಕಾರಿನ ಜೊತೆ ಹುಮಾ ಖುರೇಷಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಬ್ರಿಟಿಷ್ ಕಾಲದ ಚಿತ್ರಣ ನೀಡಲಾಗಿದೆ. ಇದರೊಂದಿಗೆ ಎಲಿಜಬೆತ್ ಪಾತ್ರ ಹಾಗೂ ಕತೆ ಮೇಲಿ ಕುತೂಹಲ ಮತ್ತಷ್ಟು ಹೆಚ್ಚಾಗುವಂತೆ ಮಾಡಿದ್ದಾರೆ

ಟಾಕ್ಸಿಕ್ ಸಿನಿಮಾ ಕರುತು ಯಶ್ ಬಿಡುಗಡೆ ಮಾಡಿದ ಮತ್ತೊಂದು ಪೋಸ್ಟರ್‌ನಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಪಾತ್ರವಿದೆ. ನಾದಿಯಾ ಪಾತ್ರದಲ್ಲಿ ಕಿಯಾರ ಕಾಣಿಸಿಕೊಂಡಿದ್ದಾರೆ. ಎರಡು ಪೋಸ್ಟರ್ ಇದೀಗ ಭಾರಿ ಸದ್ದು ಮಾಡುತ್ತಿದೆ. ಹಲವರು ಕತೆಗಳನ್ನು ಊಹಿಸಿ ಹೆಣೆಯುತ್ತಿದ್ದಾರೆ.

ನಾದಿಯಾ ಪಾತ್ರದಲ್ಲಿ ಕಿಯಾರಾ ಅಡ್ವಾಣಿ

ಇತ್ತೀಚೆಗೆ ಯಶ್ ಟಾಕ್ಸಿಕ್ ಸಿನಿಮಾದ ಪ್ರಮುಖ ಪೋಸ್ಟರ್ ರಿಲೀಸ್ ಮಾಡಿದ್ದು. ಬಾತ್ ಟಬ್‌ನಲ್ಲಿ ಕುಳಿತಿರುವ ಪೋಸ್ಟರ್ ರಿಲೀಸ್ ಮಾಡಿದ್ದರು. ಈ ಪೋಸ್ಟರ್ ಮೂಲಕ ಊಹಾಪೋಹಳಿಗೆ ತೆರೆ ಎಳೆದಿದ್ದರು. ಟಾಕ್ಸಿಕ್ ಸಿನಿಮಾ ಮಾರ್ಟ್ 19ರಂದು ಬಿಡುಗಡೆಯಾಗಲಿದೆ ಎಂದಿದ್ದರು.

ಬಾತ್ ಟಬ್ ಪೋಸ್ಟರ್

Source link
ಟಾಕ್ಸಿಕ್ ಸಿನಿಮಾದಲ್ಲಿ ಎಲಿಜಬೆತ್- ನಾದಿಯಾ, ಕತೆ ಸುಳಿವು ನೀಡಿದ ರಾಕಿಂಗ್ ಸ್ಟಾರ್ ಯಶ್