ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19 ರಂದು ತೆರೆಗೆ ಬರಲಿದೆ. ಅದಕ್ಕಾಗಿ ಅವರ ಫ್ಯಾನ್ಸ್ ಕಾಯುತ್ತಿದ್ದಾರೆ. ಯಶ್ ಜನ್ಮದಿನದ ಪ್ರಯುಕ್ತ ಇಂದು (ಏಪ್ರಿಲ್ 8) ಟೀಸರ್ ರಿಲೀಸ್ ಆಗಿದ್ದು, ಗಮನ ಸೆಳೆಯೋ ರೀತಿಯಲ್ಲಿ ಇದೆ.
‘ಟಾಕ್ಸಿಕ್’ ಸಿನಿಮಾದಲ್ಲಿ ವಿವಿಧ ರೀತಿಯ ಗನ್ ಬಳಕೆಯಾಗಿದೆ. ಇಲ್ಲಿ ಬಾಂಬ್ ಸಿಡಿಯುತ್ತೆ. ಯಶ್ ಅವರು ತಮ್ಮ ರಗಡ್ ಲುಕ್ ಮೂಲಕ ಮಿಂಚುತ್ತಾರೆ. ಈ ಟೀಸರ್ ನೋಡಿದ ಎಲ್ಲರೂ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಯಶ್ ಅವರು ಶಾರ್ಟ್ಸ್ ಆಗಿ ಎಂಟ್ರಿ ಕೊಡುತ್ತಾರೆ. ಈ ಸಿನಿಮಾದಲ್ಲಿ ಅವರ ಪಾತ್ರದ ಹೆಸರು ರಾಯ. ಇದು ಪಕ್ಕಾ ಸ್ಥಳೀಯ ಹೆಸರು. ಸಿನಿಮಾ ಮೇಕಿಂಗ್ ಹಾಲಿವುಡ್ ಸ್ಟೈಲ್ ನಲ್ಲಿ ಇದೆ ಎಂಬುದು ವಿಶೇಷ.
ಹಸಿಬಿಸಿ ದೃಶ್ಯಗಳು ಕೂಡ ಟೀಸರ್ ನಲ್ಲಿ ಇವೆ. ಹೀಗಾಗಿ, ಈ ಸಿನಿಮಾ ಎ ಸರ್ಟಿಫಿಕೆಟ್ ಪಡೆಯೋದು ಪಕ್ಕಾ ಎಂದು ಹೇಳಲಾಗದು. ಯಶ್ ಫ್ಯಾನ್ಸ್ ಗೆ ಟೀಸರ್ ಇಷ್ಟವಾಗಿದೆ.
ಯಶ್ ಅವರು ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಸಿಗಾರ್ ಸೇದುತ್ತಾ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾ ಮಾರ್ಚ್ 19 ರಂದು ರಿಲೀಸ್ ಆಗುತ್ತಿದೆ. ‘ಧುರಂಧರ 2’ ಎದುರು ‘ಟಾಕ್ಸಿಕ್’ ತೆರೆಗೆ ಬರುತ್ತಿದೆ.




