ಟಾಕ್ಸಿಕ್ ಸಿನಿಮಾ ಬಿಡುಗಡೆಗೂ ಮೊದಲೇ ದಾಖಲೆ, ಕಳೆದ ತಿಂಗಳು ಟಾಕ್ಸಿಕ್ ಟ್ರೇಲರ್ ರಿಲೀಸ್ ಆಗಿತ್ತು. ಇಷ್ಟೇ ನೋಡಿ, ಇದೀಗ ಟಾಕ್ಸಿಕ್ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು ಮಾತ್ರವಲ್ಲ, ಈಗಲೇ 105 ಕೋಟಿ ರೂಪಾಯಿ ಬಾಚಿಕೊಂಡಿದೆ.

ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಟ್ರೇಲರ್ ರಿಲೀಸ್ ಆದ ಬಳಿಕ ಜನರ ಕುಹೂಲ ಹೆಚ್ಚಾಗಿದೆ. ಒಂದೊಂದು ಸೀನ್ ಕುರಿತು ಚರ್ಚೆಗಳಾಗಿದೆ. ಅದರಲ್ಲೂ ಕಾರಿನ ಸೀನ್ ಹಲವರ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಮಾರ್ಚ್ 19ಕ್ಕೆ ಟಾಕ್ಸಿಕ್ ಸಿನಿಮಾ ರಿಲೀಸ್ ಆಗುತ್ತಿದೆ. ಕೆಜಿಎಫ್ ಬಳಿಕ ಯಶ್ ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳು ಕೌಂಟ್‌ಡೌನ್ ಶುರುಮಾಡಿದ್ದಾರೆ. ಈಗಾಗಲೇ ಕೆಲ ದಾಖಲೆ ಬರೆದಿರುವ ಟಾಕ್ಸಿಕ್ ಸಿನಿಮಾ ಇದೀಗ ಬಿಡುಗಡೆಗೂ ಮೊದಲೇ ದಾಖಲೆ ಆದಾಯ ಗಳಿಸಿದೆ.

ಟಾಕ್ಸಿಕ್ ಸಿನಿಮಾ ಭಾರತದ ಭಾಷೆಗಳ ಜೊತೆಗೆ ಇಂಗ್ಲೀಷ್‌ನಲ್ಲೂ ಬಿಡುಗಡೆಯಾಗುತ್ತಿದೆ. ಇದೀಗ ಟಾಕ್ಸಿಕ್ ಸಿನಿಮಾ ವಿದೇಶಗಳ ಹಕ್ಕನ್ನು ಫರಸ್ ಫಿಲ್ಲ್ ಪಡೆದುಕೊಂಡಿದೆ. ಭಾರತೀಯ ಭಾಷೆಗಳ ಟಾಕ್ಸಿಕ್ ಸಿನಿಮಾ ವಿದೇಶದಲ್ಲಿ ಪ್ರದರ್ಶನದ ಹಕ್ಕು ಇದೀಗ ಫರಸ್ ಫಿಲ್ಮ್ ಪಾಲಾಗಿದೆ. ಇದಕ್ಕಾಗಿ ಈಗಾಗಲೇ 105 ಕೋಟಿ ರೂಪಾಯಿ ಫರಸ್ ಫಿಲ್ಮ್ ಡಿಸ್ಟ್ರಿಬ್ಯೂಶನ್ ಪಾವತಿ ಮಾಡಿದೆ. ಇನ್ನು ಬರವು ಲಾಭದಲ್ಲಿ ಪಾಲು ಹಂಚಿಕೊಳ್ಳುವ ಕುರಿತು ಮಾತುಕತೆಗಳು ನಡೆದಿದೆ.

ಭಾರತದಲ್ಲಿ ಮಾತ್ರವಲ್ಲ ಟಾಕ್ಸಿಕ್ ಸಿನಿಮಾ ವಿದೇಶದಲ್ಲೂ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ವಿದೇಶದಲ್ಲಿ ಹಿಂದಿ, ಕನ್ನಡ ಸೇರಿದಂತೆ ಐದು ಭಾಷೆಗಳ ಸಂಪೂರ್ಣ ಹಕ್ಕು ಫರಸ್ ಫಿಲ್ಮ್ ಭಾಗವಾಗಿದೆ. ಇತ್ತ ಟಾಕ್ಸಿಕ್ ಇಂಗ್ಲೀಷ್ ಭಾಷೆಯ ಸಿನಿಮಾ ಹಕ್ಕು ಮಾರಾಟದ ಮಾತುಕತೆಗಳು ನಡೆಯುತ್ತಿದೆ. ಈ ಮೊತ್ತ ಮತ್ತೊಂದು ದಾಖಲೆ ಬರೆಯಲಿದೆ

ಫರಸ್ ಫಿಲ್ಮ್ ಅತ್ಯುತ್ತಮ ಸಿನಿಮಾಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿತರಣೆ ಮಾಡುತ್ತದೆ. ಹಾಲಿವುಡ್ ಸೇರಿದಂತೆ ಹಲವು ಸಿನಿಮಾಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿತರಣೆ ಮಾಡುವ ಫರಸ್ ಇದೀಗ ಯಶ್ ಅಭಿಯನದ ಟಾಕ್ಸಿಕ್ ಸಿನಿಮಾ ವಿದೇಶಗಳಲ್ಲಿ ವಿತರಣೆ ಮಾಡಲಿದೆ.

ಟಾಕ್ಸಿಕ್ ಸಿನಿಮಾ ತೆಲುಗು ಭಾಷೆಯ ವಿತರಣೆ ಡೀಲ್ ಈಗಾಗಲೇ ದಾಖಲೆ ಬರೆದಿದೆ. ತೆಲುಗು ಭಾಷೆಯ ಸಿನಿಮಾ ವಿತರಣೆ ಹಕ್ಕಿಗಾಗಿ 120 ಕೋಟಿ ರೂಪಾಯಿ ಮೊತ್ತವನ್ನು ಟಾಕ್ಸಿಕ್ ಸಿನಿಮಾ ತಂಡಕ್ಕೆ ಪಾವತಿ ಮಾಡಲಾಗಿದೆ. ಶ್ರೀ ವೆಂಕಟೇಶ್ವರ ಕ್ರಿಯೇಶನ್ ತೆಲುಗು ವಿತರಣೆ ಹಕ್ಕು ಪಡೆದುಕೊಂಡಿದೆ. ತೆಲುಗು ಪ್ರಾಂತ್ಯದಲ್ಲಿ ತೆಲುಗು ಹೊರತಾದ ಸಿನಿಮಾ ಒಂದು ವಿತರಣೆ ಹಕ್ಕಿಗಾಗಿ 120 ಕೋಟಿ ರೂಪಾಯಿ ಒಪ್ಪಂದ ಕುದುರಿರುವುದು ಇದೇ ಮೊದಲು.

ಯಶ್ ಅಭಿನಯದ ಕೆಜಿಎಫ್ ಸಿನಿಮಾ ವಿದೇಶದಲ್ಲಿ ಮೋಡಿ ಮಾಡಿತ್ತು. ಇದರಿಂದ ಟಾಕ್ಸಿಕ್ ಸಿನಿಮಾಗೆ ವಿದೇಶದಲ್ಲಿ ಭಾರಿ ಬೇಡಿಕೆ ನಿರ್ಮಾಣವಾಗಿದೆ. ಪ್ರಮುಖವಾಗಿ ಯಶ್ ಸಿನಿಮಾಗೆ ಆಸ್ಟ್ರೇಲಿಯಾ, ಉತ್ತರ ಅಮೆರಿಕ ಹಾಗೂ ಯೂರೋಪ್‌ನಲ್ಲಿ ಭಾರಿ ಬೇಡಿಕೆ ಇದೆ. ಹೀಗಾಗಿ ಈ ಬಾರಿ ಟಾಕ್ಸಿಕ್ ಹಲವು ದಾಖಲೆ ಪುಡಿ ಮಾಡಲಿದೆ.

ವಿದೇಶದಲ್ಲಿ ಯಶ್ ಸಿನಿಮಾಗೆ ಭಾರಿ ಬೇಡಿಕೆ

Source link
ಟಾಕ್ಸಿಕ್ ಸಿನಿಮಾ ಬಿಡುಗಡೆಗೂ ಮೊದಲೇ ದಾಖಲೆ, ವಿದೇಶದಲ್ಲಿ 105 ಕೋಟಿ ರೂ ಬಾಚಿಕೊಂಡ ಯಶ್ ಮೂವಿ