
ನಟ ರಾಕಿಂಗ್ ಸ್ಟಾರ್ ಯಶ್ (ಯಶ್) ಅವರು ಸದ್ಯ ಬೆಂಗಳೂರು ಹಾಗೂ ಮುಂಬೈ ಮಧ್ಯೆ ಓಡಾಟ ನಡೆಸುತ್ತಿದ್ದಾರೆ. ಮುಂಬೈನಲ್ಲಿ ‘ಟಾಕ್ಸಿಕ್’ ಸಿನಿಮಾ ಹಾಗೂ ‘ರಾಮಾಯಣ’ ಚಿತ್ರದ ಡಬ್ಬಿಂಗ್ ಕೆಲಸಗಳು ನಡೆಯುತ್ತಿವೆ. ಈ ಕಾರಣದಿಂದ ಅವರು ಮುಂಬೈಗೆ ತೆರಳುತ್ತಾರೆ. ಈಗ ಅವರ ವಿಡಿಯೋ ವೈರಲ್ ಆಗಿದ್ದು, ಅವರು ಮತ್ತಷ್ಟು ಹೊಸ ಯಂಗ್ ಆಗಿ ಕಾಣಿಸಿಕೊಂಡಿದ್ದಾರೆ.
‘ಕೆಜಿಎಫ್’ ಚಿತ್ರಕ್ಕಾಗಿ ಯಶ್ ಅವರು ಉದ್ದನೆಯ ಕೂದಲು ಹಾಗೂ ಗಡ್ಡ ಬಿಟ್ಟಿದ್ದರು. ಮೊದಲ ಭಾಗ ರಿಲೀಸ್ ಆಗಿದ್ದರಿಂದ ಕತ್ತರಿ ಹಾಕಿದರು. ಆ ಬಳಿಕ ಎರಡನೇ ಭಾಗದ ಶೂಟಿಂಗ್ ಸಮಯದಲ್ಲಿ ಅವರು ಮತ್ತೆ ಉದ್ದ ಕೂದಲು ಹಾಗೂ ಗಡ್ಡ ಬಿಟ್ಟರು. ನಂತರ ಅದೇ ಲುಕ್‌ನಲ್ಲಿ ಹಲವು ವರ್ಷ. ‘ಟಾಕ್ಸಿಕ್’ ಚಿತ್ರದಲ್ಲೂ ಯಶ್ ಉದ್ದ ಕೂಡಲಲ್ಲಿ ಮಿಂಚಿದ್ದಾರೆ.
Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ
ವಿಶೇಷ ಎಂದರೆ ‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಅವರದ್ದು ದ್ವಿಪಾತ್ರ. ಒಂದು ಪಾತ್ರದ ಲುಕ್ಗಾಗಿ ಉದ್ದ ಕೂದಲು ಬಿಟ್ಟರೆ, ಮತ್ತೊಂದು ಪಾತ್ರಕ್ಕಾಗಿ ಅವರು ಗಡ್ಡ ಮತ್ತು ಕೂದಲ ಬೋಳಿದ್ದರು. ಈಗ ಎಲ್ಲ ಕಡೆ ಅವರು ಹೊಸ ಹೇರ್ ಸ್ಟೈಲ್ ನಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಯಶ್ ಕೊಟ್ಟ ಉಡುಗೊರೆಯೇನು? ರಾಧಿಕಾ ಪಂಡಿತ್ ಉತ್ತರ ಕೇಳಿ
ಇತ್ತೀಚೆಗೆ ಮುಂಬೈನ ಕಾಲಿನಾ ಟರ್ಮಿನಲ್‌ನಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ, ಈ ಟರ್ಮಿನಲ್ ಅಲ್ಲಿ, ಪ್ರೈವೆಟ್ ಜೆಟ್‌ಗಳು ಲ್ಯಾಂಡ್ ಆಗುತ್ತವೆ. ಯಶ್ ಅವರು ಖಾಸಗಿ ಜೆಟ್ ಮೂಲಕ ಬೆಂಗಳೂರು ಹಾಗೂ ಮುಂಬೈ ಮಧ್ಯೆ ಓಡಾಟ ನಡೆಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈ ಕಾರಣದಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೂ ಅವರು ಕಾಣಿಸಿಕೊಳ್ಳುತ್ತಿಲ್ಲ. ಅವರ ಲುಕ್ ಯಾರಿಗೂ ಕಾಣಿಸದೆ ಇರುವಂತೆ ನೋಡಿಕೊಳ್ಳುವ ಚಾಲೆಂಜ್ ಅವರಿಗೆ ಇತ್ತು. ಜೊತೆಗೆ, ಕೆಲಸಗಳು ಅಂದುಕೊಂಡ ಸಮಯಕ್ಕೆ ಮುಗಿಯೋದಿಲ್ಲ. ಹೀಗಾಗಿ, ಓಡಾಟಕ್ಕೆ ಖಾಸಗಿ ಜೆಟ್ ಬಳಸಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.