‘ಟಾಕ್ಸಿಕ್’ ಸಿನಿಮಾದ ಟೀಸರ್ (ವಿಷಕಾರಿ ಟೀಸರ್) ರಿಲೀಸ್ ಆಗಿ ಹಲ್ಚಲ್ ಎಬ್ಬಿಸುತ್ತಿದೆ. ಈ ಟೀಸರ್ ರಿಲೀಸ್ ಆದ ಕೆಲವೇ ತಿಂಗಳುಗಳಲ್ಲಿ ಮಿಲಿಯನ್ ವೀಕ್ಷಣೆ ಕಂಡಿದೆ. ಈ ಸಿನಿಮಾ ಹಿಂದಿಯ ‘ಧುರಂಧರ 2’ ಚಿತ್ರದ ಎದುರು ರಿಲೀಸ್ ಆಗುತ್ತಿದೆ. ರೇಸ್ ಗೆ ಇಳಿದು ಯಶ್ ಸೋತ ದಾಖಲೆ ಇಲ್ಲ. ಹೀಗಾಗಿ, ‘ಧುರಂಧರ 2’ ಸಿನಿಮಾ ಎದುರು ಕೂಡ ಗೆಲ್ಲೋದು ‘ಟಾಕ್ಸಿಕ್’ ಎಂಬ ಮಾತು ಕೇಳಿ ಬಂದಿದೆ. ಈ ಮಧ್ಯೆ ಟೀಸರ್ ನಲ್ಲಿ ಬರೋ ಒಂದು ಡೈಲಾಗ್ ‘ಧುರಂಧರ 2’ ಚಿತ್ರಕ್ಕೆ ಕೊಟ್ಟ ಕೌಂಟರ್ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಇದೆ.
ಯಶ್ ಅವರ ಸ್ವಭಾವದಲ್ಲಿ ಹಠವಾದಿ. ಏನೇ ಬಂದರೂ ಅದನ್ನು ಸಾಧಿಸಿಯೇ ತೀರುತ್ತೇನೆ ಎಂಬ ಹಠ ಅವರಿಗೆ ಇದೆ. ಒಂದೊಂದೇ ಮೆಟ್ಟಿಲು ಹತ್ತಿ ಅವರು ತುಂಬಾ ಎತ್ತರಕ್ಕೆ ಹೋಗಿದ್ದಾರೆ. ಹೀಗಾಗಿ ಅವರಲ್ಲಿ ಹಠ ಮತ್ತಷ್ಟು ಹೆಚ್ಚಿದೆ. ‘ಧುರಂಧರ 2’ ಚಿತ್ರದ ಎದುರು ರಿಲೀಸ್ ಆಗಿ ಗೆದ್ದೇ ಗೆಲ್ಲುತ್ತೇನೆ ಎಂಬ ಚಿತ್ರದಲ್ಲಿ ಅವರಿದ್ದಾರೆ. ಟೀಸರ್ ನಲ್ಲಿ ಬರುವ ಸಂಭಾಷಣೆಯನ್ನು ಅನೇಕರು ‘ಧುರಂಧರ 2’ ಚಿತ್ರಕ್ಕೆ ಕೊಟ್ಟ ಕೌಂಟರ್ ಎಂದು ಹೇಳುತ್ತಿದ್ದಾರೆ.
‘ಈ ಸಲ ಯುದ್ಧನೇ ಬೇರೆ, ಅವರ ಕುತಂತ್ರನೇ ಬೇರೆ, ಎಲ್ಲರನ್ನೂ ಎದುರು ಹಾಕಿಕೊಂಡು ಬದುಕೋಕೆ ಆಗಲ್ಲ ರಾಯ. ಹಠ ಬಿಟ್ಬಿಡು, ಇಟ್ಸ್ ಔಟ್’ ಎಂದು ವ್ಯಕ್ತಿಯೋರ್ವನ ಧ್ವನಿ ಬರುತ್ತದೆ. ಆಗ ರಾಯ (ಯಶ್) ಇದಕ್ಕೆ ಉತ್ತರಿಸುತ್ತಾನೆ. ‘ನಾನು ಹೇಳಿದ್ರೆ ಮಾತ್ರ ಅದು, ಇಲ್ಲದಿದ್ರೆ ಅಲ್ಲ’ ಎಂದು ರಾಯ ಹೇಳುತ್ತಾನೆ.
ಇದನ್ನೂ ಓದಿ: ಟಾಕ್ಸಿಕ್ ಟೀಸರ್: ಫ್ಯಾನ್ಸ್ಗೆ ಡಬಲ್ ಧಮಾಕ; ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಯಶ್
‘ಧುರಂಧರ ಸೀಕ್ವೆಲ್ ಎದುರು ಬರಬೇಡಿ. ಮುಂದಕ್ಕೆ ಹೋಗಿ’ ಎಂಬ ಕಿವಿಮಾತನ್ನು ಯಶ್ಗೆ ಅನೇಕರು ಹೇಳಿದ್ದು ಇದೆ. ಇದಕ್ಕೆ ಕೌಂಟರ್ ಕೊಡೋ ದೃಷ್ಟಿಯಲ್ಲಿ ಈ ರೀತಿ ಹೇಳಬಹುದೆಂದು ಅನೇಕರು ಹೇಳಿದ್ದಾರೆ. ಹಠ ಬಿಡೋ ಮಾತೇ ಇಲ್ಲ ಎಂದು ಟೀಸರ್ ಮೂಲಕ ಯಶ್ ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 10:16 am, ಶುಕ್ರ, 20 ಫೆಬ್ರವರಿ 26