‘ಟಾಕ್ಸಿಕ್’ ಸಿನಿಮಾ (ಟಾಕ್ಸಿಕ್ ಮೂವಿ) ಬಗ್ಗೆ ಭಾರೀ ಕ್ರೇಜ್ ಸೃಷ್ಟಿಯಾಗಿದೆ. ಈ ಚಿತ್ರದ ಹಕ್ಕುಗಳನ್ನು ಖರೀದಿಸಲು ವಿವಿಧ ಸಂಸ್ಥೆಗಳು ಕಣ್ಣಿಟ್ಟಿವೆ. ಈ ಚಿತ್ರವನ್ನು ವಿದೇಶದಲ್ಲಿ ಹಂಚಿಕೆ ಮಾಡಲು ‘ಫಾರ್ಸ್ ಫಿಲ್ಮ್ಸ್’ ಮುಂದೆ ಬಂದಿದೆ. ಈಗ ಸಿನಿಮಾನ ಕೇರಳದಲ್ಲಿ ಹಂಚಿಕೆ ಮಾಡಲು ‘ಎ4 ಎಂಟರ್‌ಟೇನ್‌ಮೆಂಟ್ಸ್ ಮುಂದೆ ಬಂದಿದೆ. ಈ ಸಂಸ್ಥೆಯನ್ನು ಸಿವಿ ಸಾರಥಿ ಹಾಗೂ ಮುಖೇಶ್ ಮೆಹ್ತಾ ಮುನ್ನಡೆಸುತ್ತಿದ್ದಾರೆ. ಕೇರಳಾದ್ಯಂತ ಇವರು ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್ ಮಾಡ್ತಿದ್ದಾರೆ.
‘E4 ಎಂಟರ್‌ಟೇನ್‌ಮೆಂಟ್’ಗೆ ಕೇರಳದಲ್ಲಿ ‘ಪುಷ್ಪ 2’, ‘ಅನಿಮಲ್’, ‘ಲಿಯೋ’, ‘ಅವತಾರ್’ ರೀತಿಯ ದೊಡ್ಡ ಚಿತ್ರಗಳನ್ನು ಹಂಚಿಕೆ ಮಾಡಿದ ಅನುಭವವಿದೆ. ಹೀಗಾಗಿ, ದೊಡ್ಡ ಮಟ್ಟದಲ್ಲಿ ‘ಟಾಕ್ಸಿಕ್’ ಚಿತ್ರವನ್ನು ಇವರು ರಿಲೀಸ್ ಮಾಡಲು ಪ್ಲ್ಯಾನ್ ಲಭ್ಯ. ಈ ಸಿನಿಮಾ ಹಕ್ಕನ್ನು ಇವರು ದೊಡ್ಡ ಮೊತ್ತಕ್ಕೆ ಖರೀದಿಸಿದ್ದಾರೆ ಎಂದು ಹೇಳಲಾಗದು.
ಯಶ್ ಅವರ ಕೇರಳದ ವಿತರಕರಾಗಿ E4 ಎಂಟರ್ಟೈನ್ಮೆಂಟ್ ಬರುತ್ತದೆ #ವಿಷಕಾರಿ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸಿದ್ದು, ಮಾರ್ಚ್ 19 ರಂದು ಬಿಡುಗಡೆಯಾಗುವ ಮೊದಲು ಚಿತ್ರದ ಪ್ಯಾನ್ ಇಂಡಿಯಾ ರೋಲ್ಔಟ್ ಅನ್ನು ಬಲಪಡಿಸುತ್ತದೆ.#ToxicTheMovie#ಮಾರ್ಚ್ 19 ರಂದು ವಿಷಕಾರಿ @TheNameIsYash #ನಯನತಾರಾ… pic.twitter.com/fPJaOfhbol
— ಸರವಣರವಿಕುಮಾರ್ (@Saravanaspb) ಫೆಬ್ರವರಿ 23, 2026
ಕೇರಳದಲ್ಲಿ ‘ಕೆಜಿಎಫ್ 2’ ಸಾಕಷ್ಟು ಮೆಚ್ಚುಗೆಯನ್ನು ಹೊಂದಿದೆ. ಮಲಯಾಳಂ ಸಿನಿಮಾ ಅಲ್ಲದಿದ್ದರೂ, ‘ಕೆಜಿಎಫ್ 2’ ಕೇರಳದಲ್ಲಿ ಸಾಕಷ್ಟು ದಾಖಲೆಗಳನ್ನು ಬರೆದಿತ್ತು. ಈಗ ಯಶ್ ಅವರ ಸಿನಿಮಾ ‘ಟಾಕ್ಸಿಕ್’ ರಿಲೀಸ್ ಆಗುತ್ತಿದೆ ಸಾಕಷ್ಟು ನಿರೀಕ್ಷೆ ಇದೆ. ಕೇರಳದಲ್ಲಿ 350ಕ್ಕೂ ಅಧಿಕ ಪರದೆಗಳಲ್ಲಿ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಕಾರಣದಿಂದ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ.
ಇದನ್ನೂ ಓದಿ: ಯಶ್ ‘ಟಿಕೆಟ್’ ಲುಕ್ ಎಐ ಎಂದವರಿಗೆ ಸಿಕ್ತು ಉತ್ತರ; ಯಶ್ ಮೇಕೋವರ್ ನೋಡಿ
ಹಿಂದಿಯಲ್ಲಿ ಅನಿಲ್ ತಡಾನಿ ಅವರ ‘ಎ ಫಿಲ್ಮ್ಸ್’ ಹಿಂದಿಯಲ್ಲಿ ಹಂಚಿಕೆ ಮಾಡಲಾಗುತ್ತಿದೆ. ತೆಲುಗಿನಲ್ಲಿ ದಿಲ್ ರಾಜು ಅವರ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಖರೀದಿ ಮಾಡಿದೆ. ಕನ್ನಡದಲ್ಲಿ ಕೆವಿಎನ್ ಹಂಚಿಕೆ ಮಾಡಲಿದೆ. ಯಶ್ ಹಾಗೂ ಗೀತು ಒಟ್ಟಾಗಿ ‘ಟಾಕ್ಸಿಕ್’ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಸಿನಿಮಾ ಶೂಟ್ ಮಾಡಿದ್ದಾರೆ. ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗೆ ಡಬ್ ಆಗಿ ಸಿನಿಮಾ ರಿಲೀಸ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.